PLEASE LOGIN TO KANNADANET.COM FOR REGULAR NEWS-UPDATES

 ಬಿಜೆಪಿ ಜಿಲ್ಲಾಧ್ಯಕ್ಷ ಕರಡಿ ಸಂಗಣ್ಣ ಹಾಗೂ ನಗರಸಭೆ ಸದಸ್ಯರ ಮತ್ತು ಬಿಜೆಪಿ ಬೆಂಬಲಿತ ನಗರಸಭೆ ಸದಸ್ಯರುಗಳ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ನಗರಸಭೆಯವರೆಗೆ ನಗರಸಭಾ ಅಧ್ಯಕ್ಷರ ತಾರತಮ್ಯ ನೀತಿಯನ್ನು ಅನುಸರಿಸುತ್ತಿರುವ ಹಾಗೂ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲರಾಗಿದ್ದಾರೆಂದು ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 
ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾಧ್ಯಕ್ಷರಾದ ಕರಡಿ ಸಂಗಣ್ಣ ಮಾತನಾಡುತ್ತಾ, ಶೀಘದಲ್ಲಿ ಅಪೂರ್ಣಗೊಂಡ ಕಾಮಗಾರಿಗಳನ್ನು ಹಾಗೂ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಮಹಿಳಾ ಶಚಾಲಯ, ರಸ್ತೆ ನಿರ್ಮಾಣ  ಮತ್ತು ಮಹಿಳಾ ಶೌಚಾಲಯಕ್ಕೆ ಕೌಂಪೌಂಡ ನಿರ್ಮಾಣ ಹಾಗೂ ತ್ವರಿತಗತಿಯಲ್ಲಿ ಹುಲಿಕೇರಿಯ ರಸ್ತೆ. ರಾಷ್ಟ್ರೀಯ ಹೆದ್ದಾರಿ ೬೩, ನಗರೊತ್ತಾನ ಕೆಲಸ, ಒಳಚರಂಡಿ ಕೆಲಸ, ಹಾಗೂ ತರಕಾರಿಮಾರುಕಟ್ಟೆ ತ್ವರಿತಗತಿಯಲ್ಲಿ ಕೈಗೊಳ್ಳಬೇಕು ಹಾಗೂ ಮನೆಗಳ ನಿರ್ಮಾಣ ಗುಣಮಟ್ಟದ ಬ್ರಿಕ್ಸ್‌ಗಳನ್ನು ಹಾಕುತ್ತಿಲ್ಲವೆಂದು ಹಾಗೂ ೧೫೦ ಲಕ್ಷ ಲೀಟರ ಜಲ ಸಂಗ್ರಹ ಕಾಮಗಾರಿಯನ್ನು ನಗರಸಭೆ ೨೦೧೨-೧೩ ಠೇವಣಿ ಸಂಗ್ರಹ ಹಣದಿಂದ ಸಾರ್ವಜನಿಕ ಕುಡಿಯುವ ನೀರಿನ ಆರ್.ಸಿ,.ಸಿ.ಯ ಗೋಲಾಕಾರ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿದರು. ಇದನ್ನು ಆಲಿಸಿದ ನಗರ ಸಭೆಯ ಆಯುಕ್ತರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಲಿಖಿತ ರೂಪದಲ್ಲಿ ಇನ್ನು ೨ ತಿಂಗಳುಗಳಲ್ಲಿ ಅಪೂರ್ಣಗೊಂಡ ಕಾಮಗಾರಿಗಳನ್ನು ಹಾಗೂ ಟೆಂಡರ ಪ್ರಕ್ರೀಯೆಗಳನ್ನು ಮುಗಿಸುತ್ತೆವೆಂದು ಬರವಸೆ ನೀಡಿದರು. 
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಪ್ಪಣ್ಣ ಪದಕಿ, ಸಲೀಮಸಾಬ್, ಗವಿಸಿದ್ದಪ್ಪ ಚಿನ್ನೂರ, ವಿಜಯಾ ಹಿರೇಮಠ, ಶಿವಪ್ಪ ಜಂಗ್ಲಿ, ಮಲ್ಲಿಕಾರ್ಜುನ್ ಪೊಲೀಸ್‌ಪಾಟೀಲ, ಅನುಸುಯಾ ಬಸವರಾಜ ನಿರಲಗಿ, ಪ್ರಾಣೇಶ ಮಹೇಂದ್ರಕರ್, ಜೀನಾಬಾಯಿ ರಾಮದೇವ ಜಕ್ಲಿ, ಪಂಪಣ್ಣ ಮಗಜಿ, ಪಾರಮ್ಮ ವೀರನಗೌಡ್ರ, ಪ್ರಾಣೇಶ ಮಾದಿನೂರ, ಚನ್ನಪ್ಪ ಮಲ್ಲೇಶಪ್ಪ ಕೋಟಿಹಾಳ, ಬಿಜೆಪಿ ಮುಖಂಡರಾದ ಸಂಗಮೇಶ ಡಂಬಳ, ತೋಟಪ್ಪ ಮೇಟಿ, ರಾಜು ಬಾಕಳೆ, ಸದಾಶಿವಯ್ಯ ಹಿರೆಮಠ, ರವೀಂದ್ರರಾವ್, ಹಾಲೇಶ ಕಂದಾರಿ, ಬಸವರಾಜ ನೀರಲಗಿ, ಮಾರುತಿ ಕಾರಟಗಿ, ನಾಗರಾಜ ಚಿತ್ರಗಾರ, ಗವಿಸಿದ್ದಪ್ಪ ನರಸಾಪೂರ, ಶಾಮ್ಲಾ ಕೋನಾಪುರ, ಈಶಪ್ಪ ಹುಬ್ಬಳ್ಳಿ, ಬಸವರಾಜ ಮೀಟಾಯಿ, ಮಾದೇವಪ್ಪ ಜವಳಿ, ಮಂಜುನಾಥ ಚಿತ್ರಗಾರ, ಉಮೇಶ ಕರಡೇಕರ್, ಹಾಗೂ ಜಿಲ್ಲಾ ವಕ್ತಾರ ಚಂದ್ರಶೇಖರಗೌಡ ಪಾಟೀಲ ಹಲಗೇರಿ ಭಾಗವಹಿಸಿದ್ದರು. 
 

Advertisement

0 comments:

Post a Comment

 
Top