PLEASE LOGIN TO KANNADANET.COM FOR REGULAR NEWS-UPDATES

  ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಪ್ರಥಮ ಜಿಲ್ಲಾ ಯುವ ಸಮ್ಮೇಳನದಲ್ಲಿ ನೀಡಲಾಗುವ ಶ್ರೀ ಗವಿಸಿದ್ಧೇಶ್ವರ ಯುವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಅವರಿಂದು ನಗದ ಸ್ವರಭಾರತಿ ಸಂಸ್ಥೆಯ ಕಛೇರಿಯಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಿ ಆಯ್ಕೆ ಮಾಡಲಾಗಿದ್ದು, ಫೆಬ್ರವರಿ ೯ ರಂದು ನಡೆಯುವ ಜಿಲ್ಲಾ ಯುವ ಪ್ರಥಮ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುವದು ಎಂದು ತಿಳಿಸಿದ್ದಾರೆ. ಕಾರ್ಯಕ್ರಮ ಸಾಹಿತ್ಯ ಭವನದಲ್ಲಿ ಒಂದು ದಿನ ನಡೆಯಲಿದೆ, ಅಲ್ಲದೇ ಜಿಲ್ಲೆಯ ಹಲವಾರು ಯುವ ಸಾಧಕರನ್ನು ಯುವಜನರಿಗೆ ಪ್ರೋತ್ಸಾಹಿಸುವ ಸಮಾಜ ಸೇವಕರನ್ನು ಸನ್ಮಾನಿಸಿ ಗೌರವಿಸಲಾಗುವದು ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಶಿವಾನಂದ ಹೊದ್ಲೂರ, ವಿಜಯಅಮೃತರಾಜ್ ವಕೀಲರು, ಎಂ.ಎ.ಹನುಮಂತರಾವ್ ವಕೀಲರು, ವಿರುಪಾಕ್ಷಪ್ಪ ಕಟ್ಟಿಮನಿ ವಕೀಲರು, ಗವಿಸಿದ್ದಪ್ಪ ಕರ್ಕಿಹಳ್ಳಿ, ಬಸವರಾಜ ದೇಸಾಯಿ, ರಾಮು ಪೂಜಾರ ಅನೇಕರು ಇದ್ದರು. 
ಪ್ರಶಸ್ತಿ ಪಡೆದವರ ವಿವರ : ತಿಪ್ಪನಗೌಡ ಪಾಟೀಲ (ಪತ್ರಿಕೋದ್ಯಮ), ಸ. ಶರಣಪ್ಪ ಪಾಟೀಲ (ಪತ್ರಿಕೋದ್ಯಮ), ಶಿವಕುಮಾರ ಕುಕನೂರ (ಸಮಾಜ ಸೇವೆ), ಅಂದಪ್ಪ ಮೋರನಾಳ (ಸಮಾಜ ಸೇವೆ), ಭಾಷಾ ಹಿರೇಮನಿ ಕಿನ್ನಾಳ, ಮೇಘನಾ ಪರಗಿ ಗಂಗಾವತಿ, ರಾಘವೇಂದ್ರ ಗಂಗಾವತಿ (ಸಂಗೀತ), ಶ್ರೀನಿವಾಸ ಚಿತ್ರಗಾರ (ಸಾಹಿತ್ಯ) ಮತ್ತು ಬಸವರಾಜ ಕೊಪ್ಪಳ ಮತ್ತು ಮಲ್ಲಯ್ಯ ಕೋಮಾರಿ ಹನುಮಸಾಗರ (ಸಂಕೀರ್ಣ) ಕ್ಷೇತ್ರಗಳಲ್ಲಿ ಆಯ್ಕೆ ಮಾಡಲಾಗಿದೆ ಎಂದು ಗೊಂಡಬಾಳ ತಿಳಿಸಿದ್ದಾರೆ.
ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಎಲ್ಲಾ ಯುವಜನರಿಗೆ ಪ್ರಮಾಣ ಪತ್ರ ನೀಡಲಾಗುವದು, ಯುವಜನ ಇಲಾಖೆಯಲ್ಲಿ ನೋಂದಣಿ ಮಾಡಿದವರು ಮತ್ತು ಮಾಡಸಲಿಚ್ಛಿಸುವವರು ಖಡ್ಡಾಯವಾಗಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

Advertisement

0 comments:

Post a Comment

 
Top