ಗಂಗಾವತಿ ನಗರಕ್ಕೆ ಹೊಂದಿಕೊಂಡಿರುವ ವಿರುಪಾಪುರ ಸರ್ವೆ ನಂ ೫೩ ರಲ್ಲಿ ನಡೆದಿರುವ ಭೂ ಅತಿಕ್ರಮಣ ತೆರವುಗೊಳಿಸಲು ಮತ್ತು ಕಾಯಕನಗರ ಯೋಜನೆಗೆ ನೀಡಿರುವ ೩೦ ಎಕರೆ ಜಮೀನನ್ನು ಕೈಗಾರಿಕಾ ಇಲಾಖೆಗೆ ನೀಡಿ ಅನುಷ್ಠಾನಗೊಳಿಸಲು ಆಗ್ರಹಿಸಿ ಫೆ. ೩ ರಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ಸಂಧರ್ಬದಲ್ಲಿ ಮಾತನಾಡಿದ ಪಿಯೂಸಿಎಲ್ ಜಿಲ್ಲಾಧ್ಯಕ್ಷ ವಿಠಪ್ಪ ಗೋರಂಟ್ಲಿ ಸಕಾರಿ ಅವರ್ಗಿಕೃತ ಕಾಯ್ದಿಟ್ಟ ಅರಣ್ಯ ಭೂಮಿಯಲ್ಲಿ ಪ್ರತಿಷ್ಠಿತ ರಾಜಕಾರಣಿಗಳು ಭೂ ಮಾಲಿಕರು ಅತಿಕ್ರಮಿಸಿಕೊಂಡಿದ್ದಾರೆ. ಈ ಕುರಿತು ಎರಡು ದಶಕಗಳಿಂದ ಹೊರಾಡುತ್ತಾ ಬಂದಿದ್ರೂ ಅದನ್ನು ತೆರವುಗೊಳಿಸಿಲ್ಲ. ಇದರಲ್ಲಿ ಕಾಯಕ ನಗರ ನಿರ್ಮಾಣಕ್ಕಾಗಿ ನೀಡಿದ ೩೦ ಎಕರೆ ಜಮೀನನ್ನು ಮೊದಲು ಪಹಣಿಗೆ ಸೇರಿಸಿ ನಂತರ ಕೈಬಿಡಲಾಗಿದೆ ಮತ್ತು ಈ ಜಾಗೆಯನ್ನು ಅತಿಕ್ರಮಿಸಿದ್ದಾರೆ. ಈ ಕುರಿತು ಗಂಗಾವತಿ ತಹಶೀಲದಾರರು ತನಿಖೆಮಾಡಿ ನೀಡಿರುವ ವರದಿಯನ್ನು ಕಸದ ಬುಟ್ಟಿಗೆ ಸೇರಿಸಿದ್ದಾರೆ. ಆದ್ದರಿಂದ ಈ ಎಲ್ಲದರ ಬಗ್ಗೆ ತನಿಖೆಮಾಡಿ ಅತಿಕ್ರಮಣ ತೆರವುಗೊಳಿಸಿ ಕಾಯಕನಗರ ಯೋಜನೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು.
ಸಿ.ಪಿ.ಐ.ಎಂ.ಎಲ್ ಕೇಂದ್ರ ಸಮಿತಿ ಸದಸ್ಯ ಕರ್ನಾಟಕ ಉಸ್ತುವಾರಿ ರವರು ಯಾರೇ ಆಯಿತು ಸರಕಾರಿ ಭೂಮಿಯನ್ನು ಅತಿಕ್ರಮಣ ಮಾಡಲಿಕ್ಕೆ ಬಿಡುವುದಿಲ್ಲ. ಈ ಕುರಿತು ರಾಜ್ಯಾದ್ಯಂತ ದೊಡ್ಡ ಹೋರಾಟ ರೂಪಿಸುತ್ತೇವೆ. ಎಂದರು ಎ.ಐ.ಸಿ.ಸಿ.ಪಿ.ಯು ರಾಜ್ಯಾಧ್ಯಕ್ಷ ಭಾರದ್ವಾಜರ ಮುಖಂಡತ್ವದಲ್ಲಿ ಸಂಘಟಿಸಿದ ಧರಣೆಯಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿದ್ದಲ್ಲದೆ. ಅಖಿಲಭಾರತ ವಿದ್ಯಾರ್ಥಿ ಸಂಘದ ರಾಜ್ಯ ಪಿಯುಸಿ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ ಎ.ಐ.ಸಿ.ಸಿ.ಪಿ.ಯು ಜಿಲ್ಲಾ ಸಂಚಾಲಕ ವಿರುಪಾಕ್ಷಪ್ಪ, ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಬಸವನಗೌಡ ಸೂಳೆಕಲ್ ಮುಂತಾದವರು ಬೆಂಬಲಿಸಿ ಈ ಸಂದರ್ಭದಲ್ಲಿ ಮಾತನಾಡಿದರು. ನಂತರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮೋಹನ್‌ರಾಜ್ ಸೂಕ್ತತನಿಖೆ ಮಾಡಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಧರಣೆಯನ್ನು ಕೈ ಬಿಡಲಾಯಿತು.
0 comments:
Post a Comment