ದಿನಾಂಕ ೨೦೧೪ರ ಫೆಬ್ರುವರಿ ೧೪ ರಿಂದ ೧೭ರ ವರೆಗೆ ಕೋಲಾರ ಜಿಲ್ಲೆಯ ಟಿ. ಚನ್ನಯ್ಯರಂಗ ಮಂದಿರದಲ್ಲಿ ನಾಲ್ಕು ದಿನಗಳ ಕಾಲ ರಾಜ್ಯ ಸಮ್ಮೇಳನ ನಡೆಯಲಿದ್ದು ೧೪ ರಂದು ಬೃಹುತ್ ಬಹಿರಂಗ ಸಭೆ ಹಮ್ಮಿಕೊಂಡಿದ್ದು, ಉದ್ಘಾಟನೆಯನ್ನು ತ್ರಿಪುರದ ಶಾಲಾ ಶಿಕ್ಷಣ ಸಚಿವರಾದ ತಪನ್ ಚಕ್ರವರ್ತಿ ನೆರವೇರಿಸಲಿದ್ದು ಅಧ್ಯಕ್ಷತೆ ಎಸ್.ಎಫ್.ಐ ರಾಜ್ಯಾಧ್ಯಕ್ಷ ಅನಂತ್ ನಾಯ್ಕ ವಹಿಸಲಿದ್ದು ಮುಖ್ಯ ಅಥಿತಿಗಳಾಗಿ ಎಸ್.ಎಫ್.ಐ ರಾಷ್ತ್ರಾಧ್ಯಕ್ಷರಾದ ಶಿವದಾಸನ್ ಹಾಗು ರಾಜ್ಯಸಭೆ ಸದಸ್ಯರು ಮತ್ತು ಎಸ್.ಎಫ್.ಐ ರಾಷ್ಟ್ರಪ್ರಧಾನ ಕಾರ್ಯದರ್ಶಿಗಳಾದ ರಿತೋಬ್ರತ್ ಬ್ಯಾನರ್ಜಿ, ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಹುಳ್ಳಿ ಉಮೇಶ, ರಾಜ್ಯ ಉಪಾಧ್ಯಕ್ಷರಾದ ಗುರುರಾಜ್ ದೇಸಾಯಿ ಹಾಗು ಕಿರುತರೆ ಚಿತ್ರನಟ ಚೇತನ್ ಮುಂತಾದವರು ಉಪಸ್ಥಿತರಿರುವರು ದಿನಾಂಕ ೧೫ ರಂದು ಶಿಕ್ಷಣ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಕುರಿತು ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಿಂದ ಬರುವ ಎಸ್.ಎಫ್.ಐ ನ ಎಲ್ಲಾ ಕಾರ್ಯಕರ್ತರು ದಿನಾಂಕ ೧೩/೦೨/೨೦೧೪ ರಂದು ಸಂಜೆ ೭-೩೦ ರ ಒಳಗಡೆ ಕೊಪ್ಪಳ ನಗರದ ರೈಲ್ವೆ ನಿಲ್ದಾಣದಲ್ಲಿ ಇರಬೇಕೆಂದು ಎಸ್.ಎಫ್.ಐ ಜಿಲ್ಲಾಧ್ಯಕ್ಷರಾದ ಅಮರೇಶ ಕಡಗದ್ ಜಿಲ್ಲಾ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್ ತಿಳಿಸಿದ್ದಾರೆ
Home
»
»Unlabelled
» ಎಸ್.ಎಫ್.ಐ ೧೩ನೇ ರಾಜ್ಯ ಸಮ್ಮೇಳನ ಚಲೋ
Subscribe to:
Post Comments (Atom)
0 comments:
Post a Comment