
ಕೊಪ್ಪಳ : ಜಿಲ್ಲಾಡಳಿತ ಜಿಲ್ಲಾ ಂಚಾಯತ ಕೊಪ್ಪಳ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕೊಪ್ಪಳ ಸಂಧೇಶ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಮುನಿರಾಬಾದ್ ಸಂಯಕ್ತ ಆಶ್ರಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಸಾಗಾಟ ನಿವಾರಣೆ ಯೋಜನೆ ಅಡಿಯಲ್ಲಿ ಪಂಚಾಯತ ಅಬಿವೃದ್ಧಿ ಅಧಿಕಾರಿಗಳಿಗೆ ೨ ದಿನಗಳ ತರಬೇತಿ ಕಾರ್ಯಾಗಾರವು ತಾ. ಪಂ ಸಾಮರ್ಥ್ಯ ಸೌದ ಕಟ್ಟಡದಲ್ಲಿ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ವಸಂತ ಪ್ರೇಮ ಕರ್ಯಕ್ರಮ ಉದ್ಘಾಟಿಸಿ ಇತ್ತೀಚಿನ ದಿನಗಳಲ್ಲಿ ಮಾನವ ಸಾಗಾಣಿಕೆ ಬಲವಾಗಿ ಹಾಗೂ ಮಿತಿ ಮೀರಿದ ರೀತಿಯಲ್ಲಿ ನಡೆಯುತ್ತಿರುವುದು ಕಂಡುಬರುತ್ತದೆ. ಈ ಪಿಡುಗು ಮಕ್ಕಳು ಅಪ್ರಾಪ್ತ ವಯಸ್ಕರರು ಕಾರ್ಮಿಕ ವರ್ಗ ಮಹಿಳೆಯರು, ಯುವ ಜನರನ್ನು ಸಮಸ್ಯಗೆ ತಳ್ಳುತ್ತದೆ. ಮಹಿಳೆಯರು ಮತ್ತು ಮಕ್ಕಳು ದುರ್ಬಲವರ್ಗದವರಾಗಿದ್ದು ಅವರು ಮೋಸದ ಬಲೆಗೆ ಸುಲಭವಾಗಿ ಬೀಳುವ ಸಾಧ್ಯತೆ ಇರುವುದರಿಂದ ಅವರನ್ನು
ರಕ್ಷಿಸುವುದು ಗ್ರಾ. ಪಂ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿಯಾಗಿದೆ ಗ್ರಾಮೀಣ ಬಾಗದಲ್ಲಿ ಬಾಲ್ಯವಿವಾಹ ಮತ್ತು ಬಾಲಕರ್ಮಿಕ ಪದ್ದತಿ ತೊಡೆದುಹಾಕಲು ಕಂಕಣ ಬದ್ದರಾಗಿ ಕೆಲಸಮಾಡಲು ಸೂಚಿಸಿದರು. ತಾ. ಪಂ ಸಹಾಯಕ ನಿರ್ದೇಶಕರಾದ ವಿಷ್ಣತೀರ್ಥ ಮಾತನಾಡಿ, ರಾಮಾಯಣ ಕಾಲದಿಂದಲೂ ಸತಿ ಸಹಗಮನ ಪದ್ದತಿ, ಬಾಲ್ಯ ನಿಷೇದ ಕುರಿತು ಹಲವಾರು ವಿಷಯದ ಬಗ್ಗೆ ಮಾಹಿತಿ ನೀಡಿದರು.
ಮುನಿರಾಜು, ಶರಣಯ್ಯ ಸಸಿಮಠ, ಪಿಡಿಯೋ, ಹೆಚ್.ಎನ್ ಹೊನ್ನುಂಚಿ, ವಜೀರ್ ಸಾಬ್ ತಳಕಲ್, ಕೊಪ್ಪಳ ಹಾಗೂ ಗಂಗಾವತಿ ೩೮ ಪಂಚಾಯತ ಅಭಿವೃದ್ಧಿ ಅದಿಕಾರಿಗಳು ಹಾಜರಿದ್ದರು.
0 comments:
Post a Comment