ಕೊಪ್ಪಳ: ೨೭: ರಾಜ್ಯ ಸರಕಾರವು ವಿವಿಧ ಹದಿಮೂರು ಪ್ರಕಾರದ ಪ್ರಾಧಿಕಾರ ಮತ್ತು ಅಕಾಡೆಮಿಗಳಿಗೆ ಅಂತೂ ಅಧ್ಯಕ್ಷರ ಮತ್ತು ಸದಸ್ಯರನ್ನು ನೇಮಕ ಮಾಡಲಾಗಿದ್ದು ಸರಿಯಷ್ಟೆ. ಆದರೆ ಕೊಪ್ಪಳ ಜಿಲ್ಲೆಯನ್ನು ಕಡೆಗಣಿಸಿರುವುದು ಖಂಡನೀಯವೇ ಸರಿ ಎಂದು ಕನ್ನಡ ಉಪನ್ಯಾಸಕರಾದ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್‌ರವರು ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಜನಪದ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯರು ಇದ್ದಾರೆ, ಸೇವೆ ಸಲ್ಲಿಸುತ್ತಿರುವ ಕಿರಿಯರೂ ಇದ್ದಾರೆ. ಅವರನ್ನೆಲ್ಲಾ ಕಡೆಗಣಿಸಿರುವುದು ವಿಷಾದನೀಯ ಸಂಗತಿ. ೮ ಜನ ಅಧ್ಯಕ್ಷರು ಮತ್ತು ೧೪೩ ಸದಸ್ಯರನ್ನು ಆಯ್ಕೆ ಮಾಡಿದ್ದು, ಸರಕಾರಕ್ಕೆ ಬೇಕಾದ ಅರ್ಹತೆಯುಳ್ಳವರು ಜಿಲ್ಲೆಯಲ್ಲಿ ಇರಲಿಲ್ಲವೂ ಅಥವಾ ಅಂತಹ ಮಹಾನ್ ವ್ಯಕ್ತಿಗಳು ಸಿಗಲಿಲ್ಲವೋ ಎಂಬುದು ನಮ್ಮ ಪ್ರಶ್ನೆಯಾಗಿದೆ. ಇದನ್ನು ಜಿಲ್ಲೆಯ ಪ್ರಜ್ಞಾವಂತ ಜನತೆ ಉತ್ತರಿಸಬೇಕಿದೆ.
0 comments:
Post a Comment