ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಜಿಲ್ಲಾ ಘಟಕದ ಸಭೆ ಹಾಗೂ ತಾಲೂಕ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಜಿಲ್ಲಾ ಪದಾಧಿಕಾರಿಗಳ ಹಾಗೂ ತಾಲೂಕ ಕಾರ್ಯಕರ್ತರ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪ್ರಧಾನ ಸಂಚಾಲಕ ಪುಟ್ಟರಾಜ ಪೂಜಾರ ವಹಿಸಿದ್ದರು. ಸಭೆಯಲ್ಲಿ ಸಂಘಟನೆ ಕುರಿತು ಚರ್ಚಿಸಿ ನಂತರ ಒಮ್ಮತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು. ತಾಲೂಕಿ ಹಿಂದಿನ ಪದಾಧಿಕಾರಿಗಳಾದ ಆನಂದ, ಆರ್.ಬಸಪ್ಪ ಹಾಗೂ ೩ ನೇ ಖಜಾಂಚಿ ತಿಪ್ಪೇಶಿ ಇವರನ್ನು ಸ್ಥಾನದಿಂದ ತೆಗೆದು ಹಾಕಿ ಹೊಸ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು. ತಾಲೂಕ ಪ್ರಧಾನ ಸಂಚಾಲಕರಾಗಿ ಪಿ.ಬಸವರಾಜ, ಉಪ ಪಧಾನ ಸಂಚಾಲಕರಾಗಿ ರಾಜಾಸಾಬ, ಸಹ ಸಂಚಾಲಕರಾಗಿ ಕೆ.ವಿ. ಹನುಮೇಶ, ರಂಗಪ್ಪ ಸಿದ್ದಾಪೂರ, ಮರಿಯಪ್ಪ ಲಾಲುಂಚಿಮರ, ಮಲ್ಲೇಶಪ್ಪ ಮರಳಿ, ಶೇಖ ಇಸ್ಮಾಯಿಲ್ ಕಜಾಂಚಿಯಾಗಿ ಆಯ್ಕೆಗೊಳಿಸಿ ಜಿಲ್ಲಾ ಸಮಿತಿ ತಿಳಿಸಿದೆ.
ಸಭೆಯಲ್ಲಿ ಜಿ.ಸಂ.ಸಂಚಾಲಕರಾದ ಪಿ.ರಮೇಶ, ಡಿ.ಬೋಜಪ್ಪ, ರಮೇಶ ಬೆಲ್ಲದ್, ಚಂದ್ರಪ್ಪ ಗುಡಗಲದಿನ್ನಿ, ಅಜಯ ದೊಡ್ಡಮ್ಮ, ರೇಣುಕಾರಾಜ ಹೊಸಮನಿ, ಮಹಾಂತೇಶ ಚಾಕ್ರಿ, ಸುಭಾಸ ಬನ್ನಿಕೊಪ್ಪ, ಗವಿಸಿದ್ದಪ್ಪ ಬೆಲ್ಲದ ಸೇರಿದಂತೆ ಇತರರು ಉಪಸ್ಥಿತರಿದ್ದರು.
0 comments:
Post a Comment