ಕೊಪ್ಪ,ಜ.೯: ೧೯೯೮ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಪ್ರಥಮ ರಾಜ್ಯಸಮಾವೇಶದಲ್ಲಿ ವೀರಶೈವ ಆದಿಬಣಜಿಗ ಸಮಾಜವು ಎದುರಿಸುತ್ತಿರುವ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಇತರೆ ಎಲ್ಲಾ ತೊಂದರೆಗಳನ್ನು ನಿವಾರಿಸಲು ಸಮಾವೇಶದಲ್ಲಿ ನಿರ್ಣಯ ಕೈ ಗೊಂಡರು ಇದುವರೆಗೂ ಯಾವುದೇ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಆದ್ದರಿಂದ ಇಂದು ಸಮಾಜ, ಸಮುದಾಯವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಜಾಗೃತಿಗೊಳಿಸುವ ಉದ್ದೇಶದಿಂದ ಜನೇವರಿ ೧೨ ರಂದು ರವಿವಾರ ೧೧-೦೦ ಗಂಟೆಗೆ ನಗರದ ಮಾಜಿ ಶಾಸಕ ದಿ. ಮಲ್ಲಿಕಾರ್ಜುನ ದಿವಟರ ನಿವಾಸದಲ್ಲಿ ಸಮಾಜದ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಸುಮಾರು ೩೮ ಲಕ್ಷಕ್ಕೂ ಹೆಚ್ಚು ವೀರಶೈವ ಲಿಂಗಾಯತ ಆದಿಬಣಜಿಗ ಸಮಾಜ ಜನಸಂಖ್ಯೆಯನ್ನು ಹೊಂದಿದ್ದು, ಅತಂತ ಹಿಂದುಳಿದ ಜನಾಂಗವಾಗಿದೆ. ಶಿಕ್ಷಣ, ಆರ್ಥಿಕ, ಸಾಮಾಜಿಕ,
ರಾಜಕೀಯ ರಂಗಗಳಲ್ಲಿ ಅತ್ಯಂತ ಹಿಂದುಳಿದ ಆದಿಬಣಜಿಗ ಪಂಗಡವನ್ನು ಸರ್ಕಾರವು ಪ್ರವರ್ಗ ೨ಎ ಮೀಸಲಾತಿ ಅಡಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂದು ಸಮಾಜವು ಅನೇಕ ಸಲ ಸರ್ಕಾರಗಳಿಗೆ ಒತ್ತಾಯ ಪಡಿಸಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದ ೩೦ ಜಿಲ್ಲೆಗಳಲ್ಲಿ ನೆಲೆಸಿರುವ ಆದಿಬಣಜಿಗ ಸಾಮಾಜ ಜನಾಂಗ ವಿಶೇಷವಾಗಿ ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ಗುಲ್ಬರ್ಗಾ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಗದಗ, ಬಾಗಲಕೋಟಿ, ಬಿಜಾಪೂರ, ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಜಿಲ್ಲೆಗಳ ಕೆಲವು ತಾಲೂಕುಗಳನೊಳಗೊಂಡಂತೆ ಉತ್ತರ ಕನ್ನಡದ ಉಳವಿಯ ದಟ್ಟವಾದ ಜನವಸತಿಯನ್ನು ಹೊಂದಿದ್ದು, ೩೮ ಲಕ್ಷಕ್ಕೂ ಅಧಿಕವಾಗಿರುವ ಆದಿಬಣಜಿಗ ಸಮುದಾಯದ ಜನಾಂಗ ಜೀವನ ಸಾಗಿಸಲು ಕನಿಷ್ಠ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.
ಸರ್ಕಾರದ ವಿವಿಧ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ಮತ್ತು ಸಮಾಜದ ಜನತೆಯಲ್ಲಿ ಜಾಗ್ರತೆ ಮೂಡಿಸುವ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
೧೨ರ ರವಿವಾರದಂದು ನಡೆಯುವ ಈ ಸಮಾವೇಶದಲ್ಲಿ ರಾಜ್ಯಾಧ್ಯಕ್ಷರಾದ ಆರ್.ಬಿ ಶಂಕರಗೌಡ್ರು ವಕೀಲರು, ಉಪಾಧ್ಯಕ್ಷರಾದ ಗುರುಬಸಪ್ಪ ಪಾಟೀಲ್ ಗುಲ್ಬರ್ಗಾ, ಎಸ್.ಬಿ ಬಿರಾದಾರ ಬಿಜಾಪೂರ, ಆರ್.ಬಿ ಚುಳಕಿ, ಮಲ್ಲಿನಾಥ ಜಿ. ಬಿರಾದಾರ, ಗದಗ ಜಿಲ್ಲಾಧ್ಯಕ್ಷ ವಿ.ಎನ್.ನೀಲಪ್ಪಗೌಡ್ರು, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಗಚ್ಚಿನಕಟ್ಟಿ ಸೇರಿದಂತೆ ರಾಜ್ಯದ ಪದಾಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ವೀರಶೈವ ಆದಿಬಣಜಿಗ ಸಮಾಜದ ಬಾಂಧವರು ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಮಾಜದ ಮುಖಂಡರಾದ ವೈಜನಾಥ ದಿವಟರ್, ಪರಮಾನಂದ ಯಾಳಗಿ ರವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
0 comments:
Post a Comment