ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆಯಾದ ಕೊಪ್ಪಳ ಜಿಲ್ಲೆಯ ವರಗೆ ಹೊಸಪೇಟಿ- ಬೆಂಗಳೂರ ಇಂಟರಸಿಟಿ ರೈಲ್ವೆಯನ್ನು ವಿಸ್ತರಿಸಬೇಕು ಹಾಗೂ ಕೊಪ್ಪಳ- ಬೆಂಗಳೂರು ಪ್ಯಾಸೆಂಜರ್ ರೈಲ್ವೆ ಪ್ರಾರಂಭಿಸಬೇಕು ಮತ್ತು ಕರ್ನಾಟಕ ಎಕ್ಷ್ ಪ್ರೆಸ್ ರೈಲು ಹಾಗೂ ಬೆಂಗಳೂರು- ಮುಂಬಯಿ ರೈಲುಗಳನ್ನು ಕೊಪ್ಪಳ ಮಾರ್ಗವಾಗಿ ಚಲಿಸುವಂತೆ ಕ್ರಮಕೈಗೊಳ್ಳಬೇಕೆಂದು ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒತ್ತಾಯ ಮಾಡಿರುವುದಾಗಿ ಕೊಪ್ಪಳ ನಗರ ಸಭೆಯ ಸದಸ್ಯೆ ವಿಜಯಾ ಎಸ್. ಹಿರೆಮಠ ಹೇಳಿದ್ದಾರೆ.
ಕರ್ನಾಟಕದವರೆ ಆದ ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕದ ಭಾಗದವರಾಗಿರುವುದುರಿಂದ ಮೇಲಿನ ಕೊಪ್ಪಳ ಜಿಲ್ಲೆಯ ಸಾರಿಗೆ ಸಂಪರ್ಕದ ಸಮಸ್ಯ ಅವರಿಗೆ ತಿಳಿದಿರುವುದರಿಂದ ಮೇಲಿನ ರೈಲುಗಳ ಸೇವೆಯನ್ನು ಆರಂಭಿಸುವ ಭರವಸೆ ನನಗಿದೆ ಎಂದು ವಿಜಯಾ ಎಸ್. ಹಿರೆಮಠ ಹೇಳಿದ್ದಾರೆ.
ಅದರಂತೆ ಬಹುದಿನ ಬೇಡಿಕೆಯಾದ ಕರ್ನಾಟಕ ಎಕ್ಸ್‌ಪ್ರೆಸ್ ರೈಲನ್ನು, ಬೆಂಗಳೂರು ಮುಂಬೈ ರೈಲ್ವೆ ಕೊಪ್ಪಳ ಮಾರ್ಗವಾಗಿ ಸಂಚರಿಸುವಂತೆ ಕ್ರಮಕೈಗೊಳ್ಳಬೇಕು. ಕೊಟ್ಟೂರು ಹರಿಹರ ರೈಲ್ವೆಯನ್ನು ಈ ಕೂಡಲೇ ಪ್ರಾರಂಭಿಸಬೇಕೆಂದು ಕೇಂದ್ರ ರೈಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
0 comments:
Post a Comment