ಗಂಗಾವತಿ ತಾಲೂಕಿನ ಕೊಪ್ಪಳ ಮತ್ತು ಗಂಗಾವತಿ ಮಾರ್ಗಮಧ್ಯೆ ಬರುವ ಚಿಕ್ಕಬೆಣಕಲ್, ಮುಕ್ಕುಂಪಿ ಗ್ರಾಮಗಳಿಂದ ಗಂಗಾವತಿಗೆ ಬರುವ ವಿದ್ಯಾರ್ಥಿಗಳಿಗೆ ಅಸರ್ಮಪಕ ಬಸ್ ವ್ಯವಸ್ಥೆಯಿಂದಾಗಿ ಇಂದು ಈ ಗ್ರಾಮಗಳ ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ಉಂಟಾಗಿರುವದಕ್ಕೆ ಕ್ರಾಂತಿಕಾರಿ ಯುವಜನ ಸಂಘದ ತಾಲೂಕ ಅಧ್ಯಕ್ಷರಾದ ಹುಸೇನ್‌ಬಾಷಾರವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ತಾಲೂಕಿನ ಚಿಕ್ಕಬೆಣಕಲ್ ಮತ್ತು ಮುಕ್ಕಂಪಿ, ಹಿರೇಬೆಣಕಲ್, ದಾಸನಾಳ, ಬಸಾಪಟ್ಟಣದಿಂದ ಸುಮಾರು ನೂರಾರು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಗಂಗಾವತಿಗೆ ಶಾಲಾ ಕಾಲೇಜುಗೆ ತೆರಳಲು ಕೆ.ಎಸ್.ಆರ್.ಟಿ.ಸಿ.ಯನ್ನು ಅವಲಂಬಿಸಿದ್ದಾರೆ. ಮತ್ತು ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯಿಂದ ವಾರ್ಷಿಕ ಶುಲ್ಕ ಕಟ್ಟಿ ಬಸ್‌ಪಾಸ್‌ನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿಗಳನ್ನು ಪಡೆದುಕೊಂಡು ಬಸ್ ಪಾಸ್ ನೀಡಿದ ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ಮತ್ತು ಸಂಸ್ಥೆಯ ಸಿಬ್ಬಂದಿಗಳು ಪಾಸ್‌ಹೊಂದಿದ ವಿದ್ಯಾರ್ಥಿಗಳಿರುವ ಗ್ರಾಮಗಳಿಗೆ ನಿಲುಗಡೆ ಇರುವ ಬಸ್‌ಗಳು ಕೂಡಾ ನಿಲುಗಡೆ ಮಾಡದೇ, ಬಸ್‌ನಲ್ಲಿ ಹತ್ತಿಸಿಕೊಳ್ಳದೇ ನಿತ್ಯ ಬಸ್‌ಗಾಗಿ ವಿದ್ಯಾರ್ಥಿಗಳನ್ನು ಪರದಾಡುವಂತೆ ಮಾಡುತ್ತಿದ್ದಾರೆ.
ಶೈಕ್ಷಣಿಕ ಸಾಧನೆ ಎಂಬುದು ಕೇವಲ ಪಠ್ಯವಸ್ತುಗಳಿಂದ ಮಾತ್ರ ಲಭಿಸುವಂತಹದ್ದಲ್ಲ, ಅದು ಪೂರಕ ಸೌಕರ್ಯಗಳನ್ನು ಅವಲಂಬಿಸಿರುತ್ತದೆ. ಪರೀಕ್ಷೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಈ ರೀತಿಯ ತೊಂದರೆಯು ಅವರ ಶೈಕ್ಷಣಿಕ ಮಟ್ಟ ಕ್ಷೀಣಿಸಲು ಕಾರಣವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ದಿನಾಂಕ ೨೧-೦೧-೨೦೧೪ ರಂದು ಬೆಳಿಗ್ಗೆ ೬.೩೦ ಕ್ಕೆ ಚಿಕ್ಕಬೆಣಕಲ್ ಗ್ರಾಮದ ಬಸ್‌ನಿಲ್ದಾಣದಲ್ಲಿ ಕ್ರಾಂತಿಕಾರಿ ಯುವಜನ ಸಂಘವು ಬಸ್‌ನಿಲುಗಡೆ ಆಂದೋಲನವನ್ನು ಹಮ್ಮಿಕೊಂಡಿದೆ ಎಂದು ಹುಸೇನ್‌ಬಾಷಾ ತಿಳಿಸಿದ್ದಾರೆ.
0 comments:
Post a Comment