ಕೊಪ್ಪಳ: ಸಾಧನೆಗೆ ಅಂಗವಿಕಲತೆಗೆ ಅಡ್ಡಿಯಾಗದು ಎಂದು ವಿಶ್ವ ಸಂಸ್ಥೆಯ ಯುವ ಪ್ರಶಸ್ತಿಯ ವಿಜೇತೆಯಾದ ಅಶ್ವಿನಿ ಅಂಡಗಿ ಹೇಳಿದರು.
ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘ ಹಾಗೂ ಶಾಲೆಯ ಸಂಯುಕ್ತಾಶ್ರಯಲ್ಲಿ ಹಮ್ಮಿಕೊಂಡಿದ್ದ ಲೂಯಿಬ್ರೈಲ್ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ಅಂಗವಿಕಲರಲ್ಲಿ ಸಾಧಿಸಬೆಕೇಂಬ ಛಲವಿದ್ದರೆ ಅವರ ಸಾಧನೆಗೆ ಅಂಗವಿಕಲತೆಯು ಅಡಿಯಾಗಲಾರದು,ಪ್ರತಿಯೊಬ್ಬ ಅಂಗವಿಕಲರಲ್ಲಿ ವಿಶೇಷವಾದ ಪ್ರತಿಭೆಗಳಿದ್ದು ಅಂಥಹ ಪ್ರತಿಭೆಗಳು ಹೊರಬರಬೇಕಾದರೆ ಅವರಿಗೆ ವೇಧಿಕೆಗಳ ಅವಶ್ಯವಿದ್ದು,ಅಂಥಹ ವೇದಿಕೆಗಳನ್ನು ಸಮುದಾಯ ಮತ್ತು ಸರ್ಕಾರವು ಒದಗಿಸಿಕೊಡಬೇಕು. ತಮ್ಮಗೆ ಸಿಕ್ಕ ಅವಕಾಶವನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು.ಸರ್ಕಾರವು ಕೂಡಾ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದವರನ್ನು ಗುರುತಿಸಿ ಗೌರವಿಸುವ ಕಾರ್ಯಗಳು ಜರುಗಿದಾಗ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಧಿಸಲು ಸಹಾಯವಾಗುವುದರ ಜೊತೆಗೆ ಮಾಡುವ ಕಾರ್ಯಕ್ಕೆ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು.
ನಂತರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಅಂಗವಿಕಲತೆಯಲ್ಲಿ ಹಲವಾರು ವಿಧಗಳಿದ್ದು ಅದರಲ್ಲೂ ಅಂಧತ್ವದ ಅಂಗವಿಕಲತೆಯು ಬಹಳ ವಿಭಿನ್ನವಾಗಿದೆ.ಅವರ ಕೂಡಾ ಇತರರಂತೆ ಶಿಕ್ಷಣ ಪಡೆದು ಸಮಾಜದಲ್ಲಿ ಎಲ್ಲರಂತೆ ಮಾದರಿಯಾಗಲು ಲೂಯಿಬ್ರೈಲ್ ತಮ್ಮ ಬ್ರೈಲ್ ಲಿಪಿಯನ್ನು ಕಂಡು ಹಿಡಿದು ಅಂಧರ ಬಾಳಿಗೆ ಆಶಾ ಕಿರಣರಾಗಿದ್ದಾರೆ.ಅವರ ಬ್ರೈಲ್ ಲಿಪಿಯಿಂದ ಇಂದು ಅಂಧರು ಕೂಡಾ ಸಾಮಾನ್ಯರಂತೆ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಅವರ ಎಂದು ಹೇಳಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಕರಾದ ಜಿ.ಎಚ್.ವೀರಣ್ಣ ಮಾತನಾಡಿ,ಅಂಗವಿಕಲ ಮಕ್ಕಳ ಶಿಕ್ಷಣದ ಬಗ್ಗೆ ನಮ್ಮ ಇಲಾಖೆಯಿಂದ ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರ ಉಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು.ಅಲ್ಲದೆ ಅಂಗವಿಕಲತೆಯ ಕುರಿತಾದ ಜಾಗೃತಿ ಕಾರ್ಯಕ್ರಮಗಳು ಹೆಚ್ಚಿನ ರೀತಿಯಲ್ಲಿ ಹಮ್ಮಿಕೊಳ್ಳಬೇಕು,ಅವರಿಗೆ ಆತ್ಮಸ್ಥೈರ್ಯ ತುಂಬಬೇಕು ಮತ್ತು ಅವರನ್ನು ಮುಂದಿನ ದಿನಗಳಲ್ಲಿ ನಮ್ಮ ಇಲಾಖೆಯ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ, ಅಂಗವಿಕಲರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಪೂಜಾರ,ಕೊಪ್ಪಳ ತಾಲೂಕ ಸಹ ಕಾರ್ಯದರ್ಶಿ ಶಂಕ್ರಮ್ಮ ಬಂಗಾರಶೆಟ್ಟರ್,ಹುಬ್ಬಳ್ಳಿ ತಾಲೂಕ ಅಧ್ಯಕ್ಷರಾದ ರಾಜು ಶಲವಡಿ,ಕಾರ್ಯದರ್ಶಿ ಎಂ.ಎಸ್.ಓಲೇಕಾರ,ಅಶ್ವಿನಿ ಅಂಗಡಿಯವರ ತಾಯಿ ವೇದಾವತಮ್ಮ,ದೊಡ್ಡಪ್ಪರಾದ ರಾಜೇಶ ಅಂಗಡಿ,ವೀರೇಶ ಅಂಗಡಿ,ಶಿಕ್ಷಕಿಯರಾದ ರಾಜೇಶ್ವರಿ,ಗೌಸೀಯಾ ಬೇಗಂ,ರತ್ನಾ, ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ನಾಗಪ್ಪ ನರಿ ನಿರೂಪಿಸಿದರು.
ಶಿಕ್ಷಕಿಯರಾದ ಗಂಗಮ್ಮ ತೋಟದ ಸ್ವಾಗತಿಸಿ, ವಿಜಯಲಕ್ಷ್ಮೀ ಎಲ್ಲರಿಗೂ ವಂದಿಸಿದರು.
0 comments:
Post a Comment