PLEASE LOGIN TO KANNADANET.COM FOR REGULAR NEWS-UPDATES


ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಪ್ರಥಮ ಜಿಲ್ಲಾ ಯುವ ಸಮ್ಮೇಳನ ಅಧ್ಯಕ್ಷರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಿಂತಕ ವೀರಣ್ಣ ಮಡಿವಾಳರ ಆಯ್ಕೆ ಮಾಡಲಾಗಿದೆ.
ಅವರಿಂದು ನಗದ ಸ್ವರಭಾರತಿ ಸಂಸ್ಥೆಯ ಕಛೇರಿಯಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಸಮ್ಮೇಳನದ ಕುರಿತು ಚರ್ಚೆ ನಡೆಸಲಾಯಿತು. ಫೆಬ್ರವರಿ ೯ ರಂದು ನಡೆಯುವ ಜಿಲ್ಲಾ ಯುವ ಪ್ರಥಮ ಸಮ್ಮೇಳನಕ್ಕೆ ವೀರಣ್ಣ ಮಡಿವಾಳ ಅವರನ್ನು  ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸದ್ಯ ಗುಲಬರ್ಗಾದಲ್ಲಿರುವ ಮಡಿವಾಳರನ್ನು ಅಧಿಕೃತವಾಗಿ ಸನ್ಮಾನಿಸಿ ಆಹ್ವಾನಿಸಲು ಸಭೆ ತೀರ್ಮಾನಿಸಿತು. ಸಮ್ಮೇಳನದಲ್ಲಿ ಮೂರು ಗೋಷ್ಠಿ, ಒಂದು ಕವಿಗೋಷ್ಠಿ, ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು. ಮೆರವಣಿಗೆ ಇಲ್ಲದೇ ನೇರವಾಗಿ ಕಾರ್ಯಕ್ರಮವನ್ನು ಬೆಳಿಗ್ಗೆ ಉದ್ಘಾಟಿಸುವದು, ಉದ್ಘಾಟನೆ ನಂತರ ಗೋಷ್ಠಿ ಹಮ್ಮಿಕೊಳ್ಳಲಾಗುವದು ತದನಂತರ ಸಮ್ಮೇಳನಾಧ್ಯಕ್ಷರ ಪರಿಚಯ, ಸಂವಾದ ನಡೆಸುವದು ಎಂದು ತಿಳಿಸಿದ್ದಾರೆ. 
ಕಾರ್ಯಕ್ರಮ ಸಾಹಿತ್ಯ ಭವನದಲ್ಲಿ ಒಂದು ದಿನ ನಡೆಯಲಿದೆ, ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಹಾಗೂ ಕೀಡಾ ಇಲಾಖೆಯ ಜಿಲ್ಲಾ ಯುವ ಪ್ರಶಸ್ತಿ ವೈಯಕ್ತಿಕ ಮತ್ತು ಯುವ ಸಂಘಗಳಿಗೆ, ಸ್ವರಭಾತಿ ಸಂಸ್ಥೆ ನೀಡುವ ಜಗದ್ಗುರು ಶ್ರೀ ಗವಿಸಿದ್ಧೇಶ್ವರ ಯುವ ಪ್ರಶಸ್ತಿ ಪ್ರದಾನ ಮಾಡಲಾಗುವದು. ಜಿಲ್ಲೆಯ ಹಲವಾಉ ಯುವ ಸಾಧಕರನ್ನು ಯುವಜನರಿಗೆ ಪ್ರೋತ್ಸಾಹಿಸುವ ಸಮಾಜ ಸೇವಕರನ್ನು ಸನ್ಮಾನಿಸಿ ಗೌರವಿಸಲಾಗುವದು ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಶಿವಾನಂದ ಹೊದ್ಲೂರ, ಹನುಮಂತರಾವ್ ವಕೀಲರು, ವಿರುಪಾಕ್ಷಪ್ಪ ಕಟ್ಟಿಮನಿ ವಕೀಲರು, ಗವಿಸಿದ್ದಪ್ಪ ಕರ್ಕಿಹಳ್ಳಿ, ಗಿರಿಶಾನಂದ, ಶಿವನಗೌಡ ಪಾಟೀಲ, ರಾಮು ಪೂಜಾರ ಅನೇಕರು ಇದ್ದರು. 
ವೀರಣ್ಣ ಮಡಿವಾಳರ ಪರಿಚಯ : ತಿಪ್ಪಣ್ಣ ಮತ್ತು ಬಸವಣ್ಣೆವ್ವ ದಂಪತಿಗಳ ಮಗನಾದ ವೀರಣ್ಣಗೆ ಈಗ ೩೦ ವರ್ಷ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾವಡ್ಯಾನವಾಡಿ, ಪೊ: ಕೇರೂರ ತಾ: ಚಿಕ್ಕೋಡಿ     ಜಿ: ಬೆಳಗಾವಿ ಇಲ್ಲಿ ಶಿಕ್ಷಕಆಗಿದ್ದಾರೆ. ಸದ್ಯ ಸದ್ಯ ಕರ್ನಾಟಕ ಸೆಂಟ್ರಲ್ ಯುನಿವರ್ಸಿಟಿ, ಗುಲಬರ್ಗಾದಲ್ಲಿ ಎಂ.ಎ ಇಂಗ್ಲೀಷ್ ದ್ವಿತೀಯ ವರ್ಷ ಓದುತ್ತಿದ್ದಾರೆ. ಕೊಪ್ಪಳದಲ್ಲಿಯೇ ಡಿ. ಇಡಿ. ಮಾಡಿಉವ ಇವರು ಇಲ್ಲಿ ಉತ್ತಮ ಸಂಬಂಧ ಹೊಂದಿದ್ದಾರೆ. ಪ್ರಕಟಿತ ಕೃತಿ : ನೆಲದ ಕರುಣೆಯ ದನಿ ( ಕವನ ಸಂಕಲನ ) -೨೦೧೦. ಪ್ರಶಸ್ತಿ :  * ಕನ್ನಡದ ಮೊದಲ ಕೇಂದ್ರ ಸಾಹಿತ್ಯ ಅಕಾದೆಮಿ ಯುವ ಪುರಸ್ಕಾರ - ೨೦೧೧, * ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಕಾವ್ಯ ಸ್ಪರ್ದೆ-೨೦೦೮ ಪ್ರಥಮ ಬಹುಮಾನ * ಸಂಚಯ ಕಾವ್ಯ ಬಹುಮಾನ -೨೦೦೮-೨೦೧೧, * ಸಂಕ್ರಮಣ ಕಾವ್ಯ ಬಹುಮಾನ -೨೦೦೮, * ಎಸ್.ಡಿ. ಇಂಚಲ ಕಾವ್ಯ ಪ್ರಶಸ್ತಿ ( ಬೆಳಗಾವಿ ), * ದ.ರಾ. ಬೇಂದ್ರೆ ಗ್ರಂಥ ಬಹುಮಾನ ( ಬೇಂದ್ರೆ ಪ್ರತಿಷ್ಠಾನ ಧಾರವಾಡ ), * ಅರಳು ಪ್ರಶಸ್ತಿ ( ಕಸಾಪ ಬೆಂಗಳೂರು ), * ಅಮ್ಮ ಪ್ರಶಸ್ತಿ ( ಅಮ್ಮ ಪ್ರತಿಷ್ಠಾನ ಸೇಡಂ ), * ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ ( ತುಮಕೂರು ), * ಅಡ್ವೈಸರ್ ಕಾವ್ಯ ಪ್ರಶಸ್ತಿ ( ಮಂಡ್ಯ ), ಇತರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಹಿರಿಯ ಸಾಹಿತಿ ಹಸನ್ ನಯೀಂ ಸುರಕೋಡ ರವರ ಸಂದರ್ಶನ ಚಂದನ ದೂರದರ್ಶನದಲ್ಲಿ ಪ್ರಸಾರ. ಕವನ, ಲೇಖನ, ಪ್ರಬಂಧ, ವಿಮರ್ಶೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಇಂಡಿಯನ್ ಪೊಯೆಟ್ರಿ ಫೆಸ್ಟಿವಲ್ ನಲ್ಲಿ ಕಾವ್ಯ ವಾಚನ ಹೀಗೆ ಸಾಹಿತ್ಯದಲ್ಲಿ ಸಾಧನೆ ಮಾಡುತ್ತಿರುವ ಮಡಿವಾಳರ ಫೋಟೋಗ್ರಫಿಯಲ್ಲಿಯೂ ಪರಿಣಿತರು, ಯುವ ಚಿಂತನೆಯಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ.

Advertisement

0 comments:

Post a Comment

 
Top