PLEASE LOGIN TO KANNADANET.COM FOR REGULAR NEWS-UPDATES

  ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬೆಂಗಳೂರ ಇವುಗಳ ಜಂಟಿ ಆಶ್ರಯದಲ್ಲಿ ಬಿ.ಎಸ್.ಸಿ ವಿದ್ಯಾರ್ಥಿಗಳಿಗಾಗಿ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ದಿನಾಂಕ ೨೮-೦೧-೨೦೧೪ ರಂದು ಮಂಗಳವಾರ ಬೆಳಿಗ್ಗೆ ೯ ಗಂಟೆಯಿಂದ  ಂಜೆ ೪-೩೦ ಗಂಟೆಯವರೆಗೆ ಮುಕ್ತ ಉಪನ್ಯಾಸ ಮಾಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಸಾನಿಧ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಉದ್ಘಾಟನೆ  ಡಾ. ಆರ್. ಪುರುಷೋತ್ತಮ ರೆಡ್ಡಿ ವಿಶೇಷಾಧಿಕಾರಿ ವಿಜಯನಗರ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಇವರು ಮಾಡಲಿದ್ದಾರೆ. ಅತಿಥಿಗಳಾಗಿ ಡಾ.ಎಚ್. ಹೊನ್ನೇಗೌಡ, ಪ್ರೊ.ಸಿ.ಜಿ.ಹವಾಲ್ದಾರ, ಪ್ರೊ.ಕೆ.ರಾಘವೇಂದ್ರ ಆಗಮಿಸುವರು. ಅಧ್ಯಕ್ಷತೆ  ಪ್ರಾಚಾರ್ಯ ಎಸ್.ಎಲ್. ಮಾಲಿಪಾಟೀಲ ವಹಿಸುವರು. ಉದ್ಘಾಟನೆ ನಂತರ ಪ್ರೊ. ಗುರುರಾಜ ಕೆ.ವಿ ಇವರಿಂದ -ಕಪ್ಪೆ ಕಲಿಸಿದ ಪರಿಸರ  ವಿಜ್ಞಾನ, ಡಾ.ಎಸ್.ಎ.ಕೋರಿ ಇವರಿಂದ ನ್ಯಾನೋ ವಸ್ತುಗಳು ಮತ್ತು ಉಪಯುಕ್ತತೆ ಹಾಗೂ ಡಾ.ಜಿ.ಆರ್.ಹೆಗಡೆ ಇವರಿಂದ ಔಷಧೀಯ ಸಸ್ಯಗಳ ಸಂಶೋಧನೆಯಲ್ಲಿನ ಬೆಳವಣಿಗೆಗಳು ಈ ೩ ವಿಶೇಷ ಉಪನ್ಯಾಸಗಳು ಜರುಗಲಿವೆ. ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರೊ.ಜಿ.ಎನ್ ಪಾಟೀಲ , ಪ್ರೊ.ಸಿ.ಜಿ.ಹವಾಲ್ದಾರ ಅತಿಥಿಗಳಾಗಿ  ಆಗಮಿಸುತ್ತಾರೆ.  ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಂಚಾಲಕರಾದ ಪ್ರೊ. ಮನೋಹರ ದಾದ್ಮಿ ನೇತೃತ್ವಲ್ಲಿ ಕಾರ್ಯಕ್ರಮಗಳು ಜರುಗುತ್ತವೆ. 

Advertisement

0 comments:

Post a Comment

 
Top