ಇದೇ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವಂತೆ ಐ.ಟಿ.ಐ. ವಿದ್ಯಾರ್ಥಿಗಳಿಗೆ ಡಿ.ಜಿ.ಇ.ಟಿ. ಯಿಂದ ಜಾರಿಮಾಡಲು ಹೊರಟಿರುವ ಸೆಮಿಸ್ಟರ್ ಪದ್ಧತಿಯು ಅತ್ಯಂತ ಅಪ್ರಜಾತಾಂತ್ರಿಕ ಹಾಗೂ ವಿದ್ಯಾರ್ಥಿ ವಿರೋಧಿ ಕ್ರಮವಾಗಿದ್ದು ಇದನ್ನು ಈ ಕೂಡಲೇ ಕೈ ಬಿಡಬೇಕೆಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ (ಎ.ಐ.ಡಿ.ವೈ.ಓ.) ಕೊಪ್ಪಳ ಜಿಲ್ಲಾ ಸಮಿತಿಯು ಆಗ್ರಹಿಸಿ ದಿನಾಂಕ ೧೩.೧೨.೨೦೧೩ರಂದು ಕೊಪ್ಪಳ ನಗರದಲ್ಲಿ  ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಡಿ.ಸಿ.ಕಛೇರಿಗೆ ತೆರಳಿ ಅವರ ಮೂಲಕ ಡೈರೆಕ್ಟೊರೇಟ್ ಜನರಲ್ ಆಫ್ ಎಂಪ್ಲಾಯಿಮೆಂಟ್ ಆಂಡ್ ಟ್ರೇನಿಂಗ್, ಬೆಂಗಳೂರು ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ನಂತರ ಎ ಐ ಡಿ ವೈ ಜಿಲಾ ಕಾರ್ಯದರ್ಶಿಗಳಾದ  ರಮೇಶ್ ವಂಕಲಕುಂಟಿಯವರು ಮಾತನಾಡುತ್ತಾ -ರಾಜ್ಯದಲ್ಲಿ ಒಟ್ಟು ೧೪೭೨ ಕ್ಕಿಂತ ಹೆಚ್ಚು ಕಾಲೇಜುಗಳಿದ್ದು ಪ್ರತಿ ವರ್ಷ ಸುಮಾರು ೩೦,೦೦೦ ವಿದ್ಯಾರ್ಥಿಗಳು ತರಬೇತಿ ಪಡೆದು ಹೊರಬರುತ್ತಾರೆ. ಇವರೆಲ್ಲ ಉತ್ತಮ ತರಬೇತಿ ಹೊಂದಿದವರೇ ಆಗಿರುತ್ತಾರೆ. ಆದರೆ ಈಗ ಸರಕಾರ ಸೆಮಿಸ್ಟರ್ ಪದ್ಧತಿಯನ್ನು ಜಾರಿಗೊಳಿಸಿರುವುದರಿಂದ ವಿದ್ಯಾರ್ಥಿಗಳು ಕೇವಲ ಅಂಕಗಳಿಸಿದ ತರಬೇತಿದಾರರಾಗುತ್ತಾರೆಯೇ ವಿನಃ ಉತ್ತಮ ತರಬೇತಿ ಪಡೆದವರಾಗಲಾರರು. ಅಲ್ಲದೆ ಸೆಮಿಸ್ಟರ್ ಪದ್ಧತಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಕಾರಣ ಸರಕಾರ ಈ ಕೂಡಲೇ ಸೆಮಿಸ್ಟರ್ ಪದ್ಧತಿಯನ್ನು ಕೈಬಿಟ್ಟು ಮುಂಚೆ ಇರುವಂತೆ ಮುಂದುವರೆಸಬೇಕು ಅಲ್ಲದೆ ನಿರುದ್ಯೋಗಿ ತರಬೇತಿದಾರರಿಗೆ ಉದ್ಯೋಗ ಒದಗಿಸಬೇಕೆಂದು ಆಗ್ರಹಿಸಿದರು. 
ನಗರದ  
ಐ ಟಿ ಐ ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
0 comments:
Post a Comment