.JPG)
 ವಿದ್ಯಾರ್ಥಿಗಳಲ್ಲಿ ಅಡಗಿರುವಂತ ಸೂಕ್ತ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿಯಂತಹ ಸ್ಫರ್ಧೆಗಳು ಅವಶ್ಯ ಎಂದು ತಾ.ಪಂ ಅದ್ಯಕ್ಷರಾದ ಮುದೇಗೌಡ ಮಾಲಿಪಾಟೀಲ್ ಹೇಳಿದರು. ಅವರು ಕೊಪ್ಪಳ ತಾಲೂಕಿ ಗುಡ್ಲಾನೂರಿನ ಸ.ಹಿ.ಪ್ರಾ.ಶಾಲೆಯಲ್ಲಿ ಹಮ್ಮಿಕೊಂಡಿದ್ದ ೨೦೧೩-೨೦೧೪ನೇ ಸಾಲಿನ ಹಿರೇಸಿಂದೋಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಜ್ಯೋತಿ ಬೆಳಗಿಸಿ ಮಾತನಾಡುತ್ತಾ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳು ಅಡಕವಾಗಿರುತ್ತವೆ. ಅವುಗಳನ್ನು ಹೊರತಬೇಕಾದರೆ ಶಿಕ್ಷಕರ ಜೊತೆ ಪಾಲಕರ ಪ್ರೋತ್ಸಾಹವು ಅಗತ್ಯವಿದೆ, ಅಂದಾಗ ಮಾತ್ರ ಮಕ್ಕಳ ಸರ್ವಾಂಗೀಣ ಅಭಿವೃದ್ದಿ ಸಾಧ್ಯ ಎಂದರು. ತಾ.ಪಂ.ಮಾಜಿ ಅದ್ಯಕ್ಷ ವೆಂಕನಗೌಡ ಹಿರೇಗೌಡ ಮಾತನಾಡಿ ಜಾನಪದ, ಮನುಕುಲದ ಇತಿಹಾಸವನ್ನು ಸಾರುವಂತಹ ಶಕ್ತಿ ಹೊಂದಿರುತ್ತದೆ. ನಮ್ಮ ದೇಶದ ಸಂಸ್ಕೃತಿ, ನಾಡು ನುಡಿ, ನಾಗರೀಕತೆ, ಜನಪದದಲ್ಲಿ ಹಾಸು ಹೊಕ್ಕಾಗಿದೆ. ಇವುಗಳನ್ನು ಶಾಲಾ ಹಂತದಲ್ಲಿಯೇ ಪ್ರೊಚೊದಿಸುತ್ತಿರುವುದು ಸಂತೋಷದ ವಿಷಯ ಎಂದರು, ಸರಕಾರಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಎ.ವಿ.ಉಪಾದ್ಯಾಯ ಮಾತಾಡಿದರು.
 
                         

 ಇದಕ್ಕೂ ಪೂರ್ವದಲ್ಲಿ ಜಿ.ಪಂ. ಸದಸ್ಯೆ ಶ್ರೀಮತಿ ಭಾಗೀರಥಿ ಶಂಕ್ರಗೌಡ ರಿಬ್ಬನ್ ಕಟ್ಟು ಮಾಡುವ ಮೂಲಕ ವೇದಿಕೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಗ್ರಾ.ಪಂ.ಅದ್ಯಕ್ಷ ಯಲ್ಲನಗೌಡ್ರ ಮಾಲಿಪಾಟೀಲ್ ವಹಿಸಿದ್ದರು, ಹಿರೇಸಿಂದೋಗಿ ಸಿ.ಆರ್.ಪಿ. ರಾಮಚಂದರಪ್ಪ ಬಾರೆಕೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೊನ್ನಪ್ಪ ಗದ್ದಿ, ದೊಡ್ಡನಗೌಡ ಪೊಲೀಸಪಾಟೀಲ್, ಕೊಟ್ರಯ್ಯ ಹಿರೇಮಠ, ಬಸವರಾಜ ಅಂಗಡಿ, ಅಂದಪ್ಪ ಬೆಳವಿನಾಳ, ಶೇಖರಪ್ಪ ಅಂಗಡಿ, ಗ್ರಾ.ಪಂ.ಸದಸ್ಯರಾದ ಮೈಲೆಪ್ಪ ದೇವರಮನಿ, ರಾಮಣ್ಣ ಮಡಿವಾಳರ, ರಾಜು ಹುರಕಡ್ಲಿ, ಮರ್ದಾನಸಾಬ ವಾಲಿಕಾರ, ಎಸ್.ಡಿ.ಎಮ್.ಸಿ.ಅದ್ಯಕ್ಷರಾದ ಮಲ್ಲಣ್ನ ಅಂಗಡಿ, ಮಲ್ಲಯ್ಯ ಸಾಲಿಮಠ, ವಿರುಪಣ್ಣ ಪಟ್ಟಣಶೆಟ್ಟಿ, ಮುಕಣ್ಣ ಅಂಗಡಿ, ಮಂಜುನಾಥ ಯುವಕ ಸಂಘದ ಅದ್ಯಕ್ಷರು, ಪ್ರಭುರಾಜ ಬಿ.ಆರ್.ಸಿ. ಇತರರು ವೇದಿಕೆಯ ಮೇಲೆ ಇದ್ದರು.                                  ಶಿಕ್ಷಕ ಇಮ್ತಾಜ್ ಖಾನ್ ನಿರೂಪಿಸಿದರೆ, ಮು.ಶಿ.ಮಹೇಂದ್ರಕುಮಾರ ಸ್ವಾಗತಿಸಿದರು. ಮಂಜುನಾಥ ಗೋದಿ ವಂದನಾರ್ಪಣೆ ಸಲ್ಲಿಸಿದರು.
 
 
0 comments:
Post a Comment