ಕೊಪ್ಪಳ: ಕೊಪ್ಪಳ ನಗರದ ವಾರ್ಡ ನಂ.೩ ಗವಿಮಠದ ಹಿಂದುಗಡೆ ಇರುವ ಕುವೆಂಪು ನಗರದ ವಸತಿ ಪ್ರದೇಶದಲ್ಲಿ (ಆಶ್ರಯ ಕಾಲೋನಿ) ಸುಮಾರು ೫೦೦ ಕುಟುಂಬಗಳಿದ್ದು ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ೫ ವಿದ್ಯುತ್ ಪರಿವರ್ತಕಗಳನ್ನು ಕಳೆದ ೪ ವರ್ಷಗಳ ಹಿಂದೆಯೇ ಪೂರ್ವದಿಂದ ಪಶ್ಚಿಮಕ್ಕೆ ಇರುವ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಹಾಕಿದ್ದು ಆ ಪರಿವರ್ತಕಗಳ ಸುತ್ತಮುತ್ತಲೂ ಹಾಕಿರುವ ತಂತಿಬೆಲಿಯು ಕಿತ್ತು ಹೋಗಿದೆ.ಆ ಪರಿವರ್ತಕದ ಸುತ್ತ ಮುತ್ತ ಮುಳ್ಳಿನ ಗಿಡ ಗಂಟೆಗಳು ಬೆಳೆದಿದ್ದು ಅವಿಗಳನ್ನು ಕೂಡ ಇನ್ನವರೆಗಾದರೂ ತೆಗೆದಿರುವುದಿಲ್ಲ. ಈ ವಿಷಯವಾಗಿ ಮೌಖಿಕವಾಗಿ ಮತ್ತು ಲಿಖಿತವಾಗಿ ಹಾಗೂ ನೆರವಾಗಿ ದುರನ್ನು ನೀಡಿದರು ಯಾವೊಬ್ಬ ಜೇಸ್ಕಾಂ ಅಧಿಕಾರಿಯು ಈ ವಿಷಯಕ್ಕೆ ಸಂಬಂದಿಸಿದಂತೆ ಇತ್ತ ಕಡೆ ಬಂದಿರುವುದಿಲ್ಲ.
ಸಣ್ಣಪುಟ್ಟ ಮಕ್ಕಳ ಜೀವದ ಜೋತೆ ಚೆಲ್ಲಾಟ ಆಡುವ ಜೇಸ್ಕಾಂ ಮತ್ತು ನಗರಸಭೆಯವರು ಇತ್ತ ಕಡೆ ಗಮನ ಹರಿಸಿ ಇದನ್ನು ಸರಿಪಡಿಸದಿದ್ದರೆ, ಕಾಲೋನಿ ಎಲ್ಲಾ ಸಾರ್ವಜನಿಕರೊಂದಿಗೆ ನಗರಸಭೆ ಮತ್ತು ಜೇಸ್ಕಾಂ ಕಛೇರಿಯ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದೆಂದು ಮಲ್ಲಿಕಾರ್ಜುನ ಪೂಜಾರ
ತಿಳಿಸಿದ್ದಾರೆ.
0 comments:
Post a Comment