PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ: ನಿರುದ್ಯೋಗಿ ಮತ್ತು ಸರ್ಕಾರಿ ಅಂಗವಿಕಲ ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ನಗರಕ್ಕೆ ಆಗಮಿಸಿದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಚಿವರಾದ ಹೆಚ್.ಕೆ.ಪಾಟೀಲರವರಿಗೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಗ್ರಾಮ ಪಂಚಾಯತಿ,ತಾಲೂಕ ಪಂಚಾಯತಿ,ಜಿಲ್ಲಾ ಪಂಚಾಯತಿ ಮತ್ತು ಶಾಸಕರ ಅನು
ದಾನಗಳಲ್ಲಿ ಕಡ್ಡಾಯವಾಗಿ ಶೇಕಡಾ ೩ರಷ್ಟು ಅನುದಾನವನ್ನು ಸಮರ್ಪಕವಾಗಿ ಬಳಸುವಂತೆ ಅಧಿಕಾರಿಗಳಿಗೆ ಸೂಚಿಸುವುದು,ಗ್ರಾಮ ಪಂಚಾಯತಿಯ ಹಂತದಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಕ ಅಂಗವಿಕಲರಿಗೆ ನೀಡುವ ಗೌರವ ಧನವನ್ನು ಹೆಚ್ಚಿಸುವುದು,ಪ್ರತಿಯೊಂದು ಗ್ರಾಮದಲ್ಲಿ ಗ್ರಂಥಾಲಯ ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಅಂಗವಿಕಲರಿಗೆ ಹೆಚ್ಚಿನ ಆದ್ಯೆತೆಯನ್ನು ನೀಡುವುದು,ವಿಶ್ವಸಂಸ್ಥೆಯ ಪ್ರಶಸ್ತಿ ವಿಜೇತೆಯಾದ ಅಂಗವಿಕಲೆ ಅಶ್ವಿನಿ ಅಂಗಡಿಯನ್ನು ಸರ್ಕಾರದ ವತಿಯಿಂದ ಗುರುತಿಸಿ ಗೌರವಿಸಬೇಕು,ಸರ್ಕಾರಿ ಅಂಗವಿಕಲ ನೌಕರರಿಗೆ ಬಡ್ತಿಯಲ್ಲಿ ಮಿಸಲಾತಿ ನೀಡಬೇಕು,ನೇಮಕಾತಿಯಲ್ಲಿ ಶೇಕಡಾ ೩ರಷ್ಟು ಅಂಗವಿಕಲರಿಗೆ ಮಿಸಲಿಡಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಹೇಳಿದರು.
   ಇದಕ್ಕೆ ಸ್ಪಂಧಿಸಿದ ಸಚಿವರು ಬೆಂಗಳೂರಿಗೆ ತೆರಳಿದ ಮೇಲೆ ಎಲ್ಲಾ ಹಂತದ ಅಧಿಕಾರಿಗಳ ಸಭೆಯನ್ನು ಕರೆದು ಅನುದಾನಗಳ ಸಮರ್ಪಕ ಬಳಕೆಯ ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ,ಸಂಘದ ಸಂಚಾಲಕರಾದ ಭರಮಪ್ಪ ಕಟ್ಟಮನಿ ಹಾಜರಿದ್ದರು.
ಪೋಟೊ:ವಿವಿಧ ಬೇಡಿಕೆ ಈಡೇರಿಕೆಗಾಗಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಚಿವರಾದ ಹೆಚ್.ಕೆ.ಪಾಟೀಲರವರಿಗೆ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.ಎಡಗಡೆಯಿಂದ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಮನಿ,ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ,ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಚಿತ್ರದಲ್ಲಿದ್ದಾರೆ.





Advertisement

0 comments:

Post a Comment

 
Top