ಜಿಲ್ಲಾಡಳಿತ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಯೂನಿಸೆಫ್, ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನ.೨೩ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ರಾಜ್ಯ ಮಟ್ಟದ ವಿಶ್ವ ಮಕ್ಕಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಮಕ್ಕಳ ದಿನಾಚರಣೆ ಅಂಗವಾಗಿ ವೈವಿಧ್ಯೆತೆ ಕಾರ್ಯಕ್ರಮಗಳು ಜರುಗಲಿದ್ದು, ಅಂದು ಬೆ.೯.೩೦ ರಿಂದ ೧೧.೩೦ ರವರೆಗೆ ಮಕ್ಕಳ ಜಾಥಾ, ಬೆ.೧೧.೩೦ ರಿಂದ ಜಿನೇವಾದಲ್ಲಿ ನಡೆದ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಮಂಜುಳಾ ಅವರು, ಹಬ್ಬದ ಚಾಲನೆ ನೀಡುವರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಹೆಚ್.ಆರ್.ಉಮೇಶ ಆರಾಧ್ಯ ಅವರು ಪ್ರತಿಜ್ಞಾವಿಧಿ ಬೋಧಿಸುವರು. ಬಾಲ್ಯವಿವಾಹ/ಬಾಲಕಾರ್ಮಿಕ ಪದ್ಧತಿ ನಿಷೇದ ಕುರಿತು ಭಾಷಣ ಸ್ಪರ್ಧೆಯಲ್ಲಿ ವಿಜೇತ ಮಗುವಿನಿಂದ ಭಾಷಣ ಮತ್ತು ಪ್ರಶಸ್ತಿ ಪ್ರದಾನ, ಸ್ಪರ್ಧೆಯಲ್ಲಿ ವಿಜೇತ ಮಗುವಿನಿಂದ ಭರತ ನಾಟ್ಯ ಪ್ರದರ್ಶನ, ಸ್ಪರ್ಧೆಯಲ್ಲಿ ವಿಜೇತ ಮಗುವಿನಿಂದ ಫ್ಯಾನ್ಸಿ ಡ್ರೆಸ್ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಂದ ಪ್ರಬಂಧ ಮಂಡನೆ ಮತ್ತು ಪ್ರಶಸ್ತಿ ಪ್ರದಾನ, ವಿಜೇತ ಮಗುವಿನಿಂದ ಭಾವಗೀತೆ ಮತ್ತು ಪ್ರಶಸ್ತಿ ಪ್ರದಾನ, ಹೆಲ್ತಿ ಬೇಬಿ ಶೋನಲ್ಲಿ ಆಯ್ಕೆಯಾದ ಆರೋಗ್ಯವಂತ ಶಿಶುವಿಗೆ ಪ್ರಶಸ್ತಿ ಪ್ರದಾನ, ಮಕ್ಕಳ ಹಕ್ಕುಗಳನ್ನು ಬಿಂಬಿಸುವ ನಾಟಕ ಪ್ರದರ್ಶನದಲ್ಲಿ ಆಯ್ಕೆಯಾದ ತಂಡದಿಂದ ನಾಟಕ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದೆ. ಅಂದು ಬೆ.೧೧ ರಿಂದ ೫.೦೦ ರವರೆಗೆ ವಸ್ತು ಪ್ರದರ್ಶನ ಜರುಗಲಿದೆ, ಅಲ್ಲದೇ ೨೦೧೨-೧೩ನೇ ಸಾಲಿನಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ಯಶಸ್ವಿಯಾಗಿ ಜರುಗಿಸಿದ ಗ್ರಾಮ ಪಂಚಾಯತಿಗಳಿಗೆ ಹಾಗೂ ಬಾಲ್ಯವಿವಾಹ/ಬಾಲಕಾರ್ಮಿಕ ಪದ್ಧತಿ ನಿಷೇದ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸಿದ ಸ್ವಯಂ ಸೇವಾ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ ಅವರಿಂದ ಪುರಸ್ಕಾರ ವಿತರಣೆ ಕಾರ್ಯಕ್ರಮ ಜರುಗಲಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
0 comments:
Post a Comment