PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ನ,೦೫ : ಸರಕಾರದ ಜನಪರ ಯೋಜನೆಗಳಲ್ಲೊಂದಾದ ಅನ್ನ ಭಾಗ್ಯ ಯೋಜನೆ ಜನರ ಹಸಿವು ನೀಗಿಸುವ ಅಸ್ತ್ರವಾಗಿದೆ ಎಂದು ಗಂಗಾವತಿ ತಾಲೂಕಿನ ಅರಳಹಳ್ಳಿ  ಶ್ರೀ ರಾಜರಾಶ್ವರಿ ಬೃಹನ್ಮಠದ ವೇ. ಮೂ. ಶ್ರೀ ರೇವಣಸಿದ್ಧಯ್ಯ ತಾತನವರು ಹೇಳಿದರು. 

ಅವರು ಇತ್ತೀಚೆಗೆ ಕೇಸರಹಟ್ಟಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲಾ ಆವರಣದ ರಂಗಮಂದಿರದಲ್ಲಿ ಜಿಲ್ಲಾ ವಾರ್ತಾ ಇಲಾಖೆ ಹಾಗೂ ದ್ವಾರಕಾ ಸಮುದಾಯ ಅಭಿವೃದ್ಧಿ ಸಂಸ್ಥೆ (ರಿ) ಕೊಪ್ಪಳ ಇವರ ಸಹಯೋಗದಲ್ಲಿ ಸರಕಾರದ ಯೋಜನೆಗಳು ಹಾಗೂ ಸಾಧನೆಗಳ ಕುರಿತು ಆಯೋಜಿಸಿದ್ದ ಜನ ಜಾಗೃತಿ ಬೀದಿ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರಕಾರದ ಜನಪರ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಇಂಥ ಕಾರ್ಯಕ್ರಮಗಳನ್ನು ಗ್ರಾಮ ಗ್ರಾಮಕ್ಕೆ ತಲುಪಿಸುವ ಜವಾಬ್ದಾರಿ ಇಲಾಖೆ ವಹಿಸುತ್ತಿದ್ದು, ಇಂಥ ಕಲಾ ತಂಡಗಳನ್ನು ತರಬೇತಿಗೊಳಿಸಿ ಯೋಜನೆಗಳ ಬಗ್ಗೆ ಬೀದಿ ನಾಟಕದ ಮೂಲಕ ಮನವರಿಕೆ ಮಾಡಿಕೊಡುವ ಕಾರ್ಯ ಶ್ಲ್ಯಾಘನೀಯ ಎಂದರು. 
ಜಾನಪದ ಕಲಾವಿದ ವೈ. ಬಿ. ಜೂಡಿ ಅವರ ನಿರ್ದೇಶನದಲ್ಲಿ ಸರಕಾರದ ಅನ್ನ ಭಾಗ್ಯ, ಕ್ಷೀರ ಭಾಗ್ಯ, ವಸತಿ ಭಾಗ್ಯ, ಮನಸ್ವಿನಿ, ಮೈತ್ರಿ ಮುಂತಾದ ಯೋಜನೆಗಳ ಕುರಿತು ಕಲಾವಿದರಾಗಿ ಕಲಾ ತಂಡದ ಸದಸ್ಯರಾದ ಮಲ್ಲಪ್ಪ ಹೂಗಾರ, ಲಲಿತಾ ಪೂಜಾರ, ಮಲ್ಲಪ್ಪ ರ‍್ಯಾವಣಕಿ, ಈರಪ್ಪ ರ‍್ಯಾವಣಕಿ, ಖಾದರಸಾಬ ನದಾಫ್, ಮಹ್ಮದ್ ಸಾಬ ನದಾಫ್, ವೀರೇಶ, ಭೀಮವ್ವ ಬೀದಿ ನಾಟಕ ಪ್ರದರ್ಶನ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶಾಂತಾ ಬೆಲ್ಲದ, ನಿವೃತ್ತ ಮುಖ್ಯೋಪಾದ್ಯಾಯ ಶೇಖರಗೌಡ, ಶಿಕ್ಷಣ ಪ್ರೇಮಿಗಳಾದ ಶರಣಪ್ಪ ಲಾಯದುಣಸಿ, ಮಲ್ಲಿಕಾರ್ಜುನ ಚಕ್ಕೋಟಿ, ಗ್ರಾ. ಪಂ. ಕರವಸೂಲಿಗಾರ ಈರಣ್ಣ ವೇದಿಕೆಯಲ್ಲಿದ್ದರು.

Advertisement

0 comments:

Post a Comment

 
Top