PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀಯವರ ತತ್ವ ಹಾಗೂ ಆದರ್ಶಗಳನ್ನು ಪ್ರತ್ರಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಿ.ಪಿ.ಎಸ್.ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಮನಿ ಹೇಳಿದರು.
     ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹದ್ದೂರುಶಾಸ್ತ್ರಿಯವರ ಜನ್ಮ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ,ಅಹಿಂಸೆ,ಸತ್ಯ,ಶಾಂತಿಯ ರೂವಾರಿಯ ಹರಿಕಾರನಾದ ಮಹಾತ್ಮ ಗಾಂಧಿಜೀಯವರು ಸತ್ಯಾಗ್ರಹ ಎಂಬ ಅಸ್ತ್ರವನ್ನು ಬಳಸಿ ಯಾವುದೇ ರೀತಿಯ ಹಿಂಸೆಗೆ ಅವಕಾಶ ಮಾಡಿಕೊಡದೆ ಶಾಂತ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿ,ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗೇ ಲಾಲ್‌ಬಹದ್ದೂರು ಶಾಸ್ತ್ರೀಯವರೂ ಕೂಡಾ ಈ ದೇಶದ ಪ್ರಧಾನಿಯಾಗಿ ಅನೇಕ ರೀತಿಯ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತರುವಿದರೊಂದಿಗೆ ದೇಶದ ಪ್ರಗತಿಗೆಗಾಗಿ ತನ್ನದೆಯಾದ ಕೊಡುಗೆಯನ್ನು ನೀಡಿದ್ದಾರೆ.ಇಂತಹ ಮಹಾನ ನಾಯಕರ ತತ್ವ ಹಾಗೂ ಆದರ್ಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಕೂಡಾ ಅಳವಡಿಸಿಕೊಳ್ಳುವಂತೆ ತಿಳಿಸಿದರು.
       ಕಾರ್ಯಕ್ರಮದ ಕುರಿತಾಗಿ ಪ್ರಾಸ್ಥಾವಿಕವಾಗಿ ಶಿಕ್ಷಕರಾದ ಗುರುರಾಜ ಕಟ್ಟಿ ಮಾತನಾಡಿದರು.
ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕೊನೆಯಲ್ಲಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬೀರಪ್ಪ ಅಂಡಗಿ ಚಿಲವಾಡಗಿ,ನಾಗಪ್ಪ ನರಿ,ವಿರುಪಾಕ್ಷಪ್ಪ ಬಾಗೋಡಿ,ಶ್ರೀನಿವಾಸ,ಸಾವಿತ್ರಿದಾಸ್,ವಿಜಯಲಕ್ಷ್ಮೀ,ರತ್ನಾ,ಅಂಬಕ್ಕ ಮುಂತಾದವರು ಹಾಜರಿದ್ದರು.
   ಶಿಕ್ಷಕಿ ಮೋಹಿನ್‌ಪಾಷಾಭಿ ಕಾರ್ಯಕ್ರಮವನ್ನು ನಿರೂಪಿಸಿದರು.
ಶಿಕ್ಷಕಿಯರಾದ ವಿಜಯಲಕ್ಷ್ಮೀ ಹಿರೇಮಠ ಸ್ವಾಗತಿಸಿ,ಭಾರತಿ ವಂದಿಸಿದಳು.

Advertisement

0 comments:

Post a Comment

 
Top