ಯುನಿಸೆಫ್- ಮಕ್ಕಳ ರಕ್ಷಣಾ ಯೋಜನೆಯಡಿ ಜಿಲ್ಲೆಯ ೫೫ ಗ್ರಾಮ ಪಂಚಾಯತಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸಮುದಾಯ ಸಂಘಟಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲಾಡಳಿತವು ಯುನಿಸೆಫ್ ಸಹಕಾರದೊಂದಿಗೆ ’ಮಕ್ಕಳ ರಕ್ಷಣಾ ಯೋಜನೆ’ ಯನ್ನು ಅನುಷ್ಠಾನಗೊಳಿಸುತ್ತಿದ್ದು, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ನಿರ್ಮೂಲನೆ, ಮಕ್ಕಳ ಸಾಗಾಣಿಕೆ ಮತ್ತು ಮಾರಾಟ ಹಾಗೂ ಮಕ್ಕಳ ಮೇಲಿನ ಹಿಂಸೆ ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಕಾರ್ಯ ಚಟುವಟಿಕೆಗಳನ್ನು ಕೈಗೊಂಡಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕಂದಾಯ ಅಧಿಕಾರಿಗಳು, ಪಿಡಿಓಗಳು, ಕಾರ್ಯದರ್ಶಿಗಳು, ಶಾಲೆ, ಅಂಗನವಾಡಿ ಸ್ಥಳೀಯ ಸಂಘ ಸಂಸ್ಥೆಗಳು, ಪೋಷಕರು ಹಾಗೂ ಮಕ್ಕಳ ಜೊತೆ ಸಕ್ರಿಯವಾಗಿ ಪಾಲ್ಗೊಳ್ಳುವುದರೊಂದಿಗೆ ಯೋಜನೆಯ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಲು ಪಂಚಾಯತಿ ಮಟ್ಟದಲ್ಲಿ ಸಮುದಾಯ ಸಂಘಟಕರನ್ನು ನಿಯೋಜಿಸಲಾಗಿದ್ದು, ಜಿಲ್ಲೆಯ ೧೩೪ ಗ್ರಾ.ಪಂ. ಗಳ ಪೈಕಿ ಈಗಾಗಲೆ ೭೯ ಪಂಚಾಯತಿಗಳಲ್ಲಿ ಸಮುದಾಯ ಸಂಘಟಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ ೫೫ ಗ್ರಾ.ಪಂ.ಗಳಲ್ಲಿ ಸಮುದಾಯ ಸಂಘಟಕರುಗಳನ್ನು ಯೋಜನೆಯ ಉಳಿದ ಅವಧಿಗಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದವರಿಗೆ ಮಾಸಿಕ ೩೦೦೦ ರೂ. ಗಳ ಗೌರವಧನ ನೀಡಲಾಗುವುದು. ಅರ್ಜಿ ಸಲ್ಲಿಸಲು ಕನಿಷ್ಟ ಪಿ.ಯು.ಸಿ. ಉತ್ತೀರ್ಣರಾಗಿರಬೇಕು. ಸ್ಥಳೀಯರು ಮಾತ್ರ ಅರ್ಜಿ ಸಲ್ಲಿಸಬೇಕು. ಮಹಿಳೆಯರಿಗೆ ಹಾಗೂ ಅಂಗವಿಕಲರಿಗೆ ಆದ್ಯತೆ ನೀಡಲಾಗುವುದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಗರಿಷ್ಠ ಅಂಕಗಳ ಆಧಾರದ ಮೇಲೆ ನೇಮಕ ಮಾಡಲಾಗುವುದು. ಅರ್ಜಿಯನ್ನು ಅ. ೨೩ ರ ಒಳಗಾಗಿ ಸಲ್ಲಿಸಬೇಕು. ಸಮುದಾಯ ಸಂಘಟಕರ ಹುದ್ದೆ ಖಾಲಿ ಇರುವ ಗ್ರಾಮ ಪಂಚಾಯತಿಗಳ ವಿವರ ಇಂತಿದೆ. ಗಂಗಾವತಿ ತಾಲೂಕಿನ ಆನೆಗೊಂದಿ, ಮಲ್ಲಾಪುರ, ಹುಲಿಹೈದರ್, ಕನಕಗಿರಿ, ಬೇವಿನಹಳ್ಳಿ, ಚಳ್ಳೂರು, ಹುಳ್ಕಿಹಾಳ, ಕಾರಟಗಿ, ಮರ್ಲಾನಹಳ್ಳಿ, ಮರಳಿ, ಸಿದ್ದಾಪುರ, ಗುಂಡೂರು, ಉಳೇನೂರು, ಬಸಾಪಟ್ಟಣ ಮತ್ತು ಚಿಕ್ಕಬೆಣಕಲ್. ಕೊಪ್ಪಳ ತಾಲೂಕಿನ ಗಿಣಿಗೇರಾ, ಶಿವಪುರ, ಗೊಂಡಬಾಳ, ಹಿರೇಸಿಂದೋಗಿ, ಹಿಟ್ನಾಳ, ಹೊಸಳ್ಳಿ, ಹುಲಿಗಿ, ಹಲಗೇರಿ, ಕವಲೂರು, ಕಾತರಕಿ-ಗುಡ್ಲಾನೂರ, ಲೇಬಗೇರಿ, ಹಟ್ಟಿ, ಮುನಿರಾಬಾದ್, ಬಂಡಿಹರ್ಲಾಪುರ, ಕಲ್‌ತಾವರಗೇರಾ, ಮಾದಿನೂರು ಮತ್ತು ಹಾಸಗಲ್. ಯಲಬುರ್ಗಾ ತಾಲೂಕಿನ ಗಾಣದಾಳ, ಗುನ್ನಾಳ, ಮಾಟಲದಿನ್ನಿ, ತಾಳಕೇರಿ, ಭಾನಾಪುರ, ಬೇವೂರು, ಹಿರೇಬಿಡ್ನಾಳ, ವಜ್ರಬಂಡಿ, ವಂಕಲಕುಂಟಾ ಮತ್ತು ಹಿರೇಅರಳಿಹಳ್ಳಿ. ಕುಷ್ಟಗಿ ತಾಲೂಕಿನ ನಿಲೋಗಲ್, ಬೆನಕನಹಾಳ, ಕಾಟಾಪುರ, ಅಡವಿಬಾವಿ, ಹಿರೇಬನ್ನಿಗೋಳ, ಚಳಗೇರಾ, ಕೊರಡಕೇರಾ, ಹೂಲಗೇರಾ, ಕ್ಯಾದಿಗುಪ್ಪಾ, ಮುದೇನೂರ, ಮೆಣೆದಾಳ ಮತ್ತು ತಾವರಗೇರಾ. ಈ ಗ್ರಾಮ ಪಂಚಾಯತಿಗಳಿಗೆ ಸಮುದಾಯ ಸಂಘಟಕರನ್ನು ನೇಮಿಸಲಾಗುವುದು. ಹೆಚ್ಚಿನ ವಿವರಗಳನ್ನು ಸಂಯೋಜಕರು, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ, ಯುನಿಸೆಫ್, ಜಿಲ್ಲಾಡಳಿತ ಭವನ, ಕೊಪ್ಪಳ, ದೂರವಾಣಿ ಸಂ: ೨೨೫೦೦೬ ಕ್ಕೆ ಸಂಪರ್ಕಿಸಬಹುದಾಗಿದೆ
0 comments:
Post a Comment