PLEASE LOGIN TO KANNADANET.COM FOR REGULAR NEWS-UPDATES


       ಕೊಪ್ಪಳ ಭಾಗ್ಯನಗರ ಮಧ್ಯೆ ಇರುವ ರೈಲ್ವೆ ಗೇಟುಗಳಿಗೆ ಸೇತುವೆ ನಿರ್ಮಿಸುವ ಕುರಿತು ರಾಜ್ಯದ ತನ್ನ ಪಾಲಿನ ಅರ್ಧ ಪಾಲನ್ನು ನೀಡಲು ಒಪ್ಪಿಗೆಕೊಂಡು ರೈಲ್ವೆ ಮಂಡಳಿಗೆ ಪತ್ರ ನೀಡುವಂತೆ ಒತ್ತಾಯಿಸಿ ಇಷ್ಟರಲ್ಲಿ ಭಾಗ್ಯನಗರ ಗ್ರಾಮಸ್ಥರು ಮುಖ್ಯಮಂತ್ರಿ ಬಳಿಗೆ ನಿಯೋಗ ಹೋಗಲು ತಿರ್ಮಾನಿಸಿದರು.
   ಇಂದು ಭಾಗ್ಯನಗರದ ಗ್ರಾಮ ಪಂಚಾಯತ್ ಆವರಣದಲ್ಲಿರುವ ಮಹಾತ್ಮ ಗಾಂಧಿ ಸಮುದಾಯ ಭವನದಲ್ಲಿ ರೈಲ್ವೆ ಗೇಟು ಹೋರಾಟ ಸಮಿತಿ ಹಾಗೂ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಹೊನ್ನೂರಸಾಬ ಭೈರಾಪೂರರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
   ಈ ಸಭೆಯಲ್ಲಿ ಕಳೆದ ೨೦೦೬ರಿಂದ ಇಲ್ಲಿಯವರಿಗೆ ರೈಲ್ವೆ ಗೇಟು ನಿರ್ಮಾಣಕ್ಕಾಗಿ ನಡೆದಿರುವ ಹೋರಾಟಗಳು ಮತ್ತು ಆಗಿರುವ ಅಭಿವೃದ್ದಿ ಕುರಿತು ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ ವಿವರಿಸಿದರು. ಗೇಟು ನಂಬರ್ ೬೨ ಮತ್ತು ೬೪ ರಲ್ಲಿ ಸೇತುವೆಗಳನ್ನು ನಿರ್ಮಿಸಲು ರೈಲ್ವೆ ಇಲಾಖೆ ಒಟ್ಟು ೩೫ ಕೋಟಿ ರೂಪಾಯಿಯ ಅಂದಾಜು ಪತ್ರಿಕೆ ತಯಾರಿಸಿದೆ. ಅದಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಅರ್ಧ ಹಣವನ್ನು ಮಾತ್ರ ನೀಡುವದಾಗಿ ಹೇಳಿದೆ. ಆದರೆ ನಿರ್ಮಾಣ ಹಂತದಲ್ಲಿ ಈ ವೆಚ್ಚ ಹೆಚ್ಚು ಅಥವಾ ಕಡಿಮೆಯಾದರು ಆಗಿರುವ ವೆಚ್ಚದ ಅರ್ಧ ಪಾಲು ನೀಡುವಂತೆ ರೈಲ್ವೆ ಇಲಾಖೆಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಇದರಿಂದಾಗಿ ಈಗ ಗೇಟು ನಿರ್ಮಾಣ ಕಾರ್ಯ ವಿಳಂಭವಾಗುತ್ತಿದೆ.
 ಈ ಮಧ್ಯೆ ಕಳೆದ ಸೆಪ್ಟಂಬರ್ ೨೫ ರಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಆಗುವ ಖರ್ಚಿನ ಅಂದಾಜು ವೆಚ್ಚವನ್ನು ಭರಿಸಲು ಸರ್ಕಾರ ಒಪ್ಪಿಕೊಳ್ಳುವಂತೆ ಮನವಿ ಮಾಡಿಕೊಂಡು ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕಾಗಿ ಇದು ಬೇಗನೆ ಆಗಲಿ ಎಂಬ ಕಾರಣಕ್ಕೆ ಇಷ್ಟರಲ್ಲಿಯೇ ಭಾಗ್ಯನಗರ ಗ್ರಾಮಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ದಿ ಸಚಿವ ಸಂತೋಷ ಲಾಡರ ಬಳಿ ನಿಯೋಗ ಹೋಗಲು ತಿರ್ಮಾನಿಸಲಾಯಿತು.
 ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದವರೇ ಆಗಿರುವದರಿಂದ ಅವರ ಅಧಿಕಾರ ಅವಧಿಯಲ್ಲಿ ಈ ರೈಲ್ವೆ ಗೇಟಿನ ಕಾಮಗಾರಿಗೆ ಚಾಲನೆ ಸಿಗಲಿ ಎಂಬ ಉದ್ದೇಶದಿಂದ ಗ್ರಾಮಸ್ಥರು ಸರ್ಕಾರಗಳ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ.
 ಸಭೆಯಲ್ಲಿ ಸುರೇಶ ಡೋಣಿ, ಯಮನಪ್ಪ ಕಬ್ಬೇರ, ಶ್ರೀನಿವಾಸ ಹ್ಯಾಟಿ, ಪರಸುರಾಮ ಪವಾರ, ಶಂಕರ ಲಿಂಗಲಬಂಡಿ, ಕೃಷ್ಣ ಕಬ್ಬೇರ, ರಮೇಶ ಹ್ಯಾಟಿ, ಶಂಕರಪ್ಪ ಬೆಟಗೇರಿ, ಕೋಟ್ರೇಶ ಶೇಡ್ಮಿ, ಮಂಜಪ್ಪ ದರಗದಕಟ್ಟಿ. ಸುರೇಶ ಕವಲೂರು, ನಾರಯಣ ಪೂಚಗುಂಡಿ, ಮೊದಲಾದವರು ಉಪಸ್ಥಿರಿದ್ದರು. ಸಭೆಯಲ್ಲಿ ಗಿರೀಶ ಪಾನಗಂಟಿ ಸ್ವಾಗತಿಸಿ, ವಂದಿಸಿದರು. 

Advertisement

0 comments:

Post a Comment

 
Top