ಕೊಪ್ಪಳ ನಗರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಒದುಗರೊಂದಿಗೆ ಸರಳವಾಗಿ ಆಚರಿಸಲಾಯಿತು . ಗ್ರಂಥಾಲಯ ಸಹಾಯಕ ಶಿವನಗೌಡ ಪಾಟೀಲ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೊಜೆ ಸಲ್ಲಿಸಿದರು . ನಂತರ ಮಾತನಾಡಿದ ಇನ್ನೋರ್ವ ಗ್ರಂಥಾಲಯ ಸಹಾಯಕ ನಾಗರಾಜನಾಯಕ ಡೊಳ್ಳಿನ ಮಾತನಾಡಿ ರಾಷ್ಟ್ರಸೇವೆಯಲ್ಲಿ ನಾಯಕ ಜನಾಂಗದ ಪಾತ್ರ ಹಿರಿದಾಗಿದೆ . ಕಂಪಿಲರಾಯ , ಗಂಡುಗಲಿ ಕುಮಾರರಾಮ , ರಾಷ್ಟ್ರವೀರ ಎಚ್ಚೆಮ್ಮ ನಾಯಕ , ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಹಕ್ಕ-ಬುಕ್ಕರು , ರಾಜಾ ವೀರ ಮದಕರಿ ನಾಯಕ , ವೀರ ಸಿಂಧೂರಲಕ್ಷ್ಮಣ , ರಾಜಾ ವೆಂಕಟಪ್ಪನಾಯಕ ಹೀಗೆ ಸಾವಿರಾರು ಕಲಿಗಳು ಈ ಜನಾಂಗದಲ್ಲಿ ಜನಿಸಿ ನಾಡಿಗಾಗಿ ಪ್ರಾಣಕೊಟ್ಟ ಮಹನೀಯರು . ದಕ್ಷಿಣ ಆಫ್ರಿಕಾದ ಸಂವಿಧಾನ ಶಿಲ್ಪಿ ಎನಿಸಿಕೊಂಡ ಎಲ್.ಜಿ.ಹಾವನೂರ ನಂತಹ ಕಾನೂನು ಪಂಡಿತರು ಈ ದೇಶವೆ ಹೆಮ್ಮೆ ಪಡುವಂತಹ ಪ್ರತಿಭೆ ಈ ಎಲ್ಲ ಮಹನೀಯರ ಶೌಂii , ಪರಾಕ್ರಮ ಆದರ್ಶ ಸಾಹಸಮಯ ಚರಿತ್ರಯು ಯುವಕರಿಗೆ ಸ್ಪೂರ್ತಿದಾಯಕವಾಗಲಿ ಎಂದರು . ಇದೇ ಸಂದರ್ಭದಲ್ಲಿ ಸಿಬ್ಬಂದಿಗಳಾದ ಗಂಗಮ್ಮ ಡೊಳ್ಳಿನ , ಹುಲಿಗೆಮ್ಮ ಬಣಕಾರ , ಅನ್ನಪೂರ್ಣಮ್ಮ ಒದುಗರಾದ ಆಂಜನೇಯ , ಪ್ರಾಣೇಶ ಪೂಜಾರ , ಶರಣು , ರಘುನಂದನ ಎಳಬೆಂಚಿ , ಬಸವರಾಜ , ಆಸೀಫ್ ಮೊದಲಾದವರು ಹಾಜರಿದ್ದರು .
Home
»
koppal district information
»
Koppal News
»
koppal organisations
»
news
»
school college koppal district
» ನಾಡಿಗಾಗಿ ಪ್ರಾಣಕೊಟ್ಟ ಮಹನೀಯರು
Subscribe to:
Post Comments (Atom)
0 comments:
Post a Comment