ವಾಲ್ಮೀಕಿ ಸಮುದಾಯ ಸಮಗ್ರ ಅಭಿವೃದ್ಧಿ ಹೊಂದಲು ಶಿಕ್ಷಣ ಕೊಡಿಸಿ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಟಿ ಜನಾರ್ಧನ ಹುಲಿಗಿ ಅಭಿಪ್ರಾಯಪಟ್ಟರು.
ಅವರು ಹ್ಯಾಟಿ ಮಹರ್ಷಿ ವಾಲ್ಮೀಕಿ ಯುವಕ ಸಂಘ (ರಿ) ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಸಮಾಜದ ಜನರಿಗೆ ಸಿಗಬೇಕಾದ ಸೌಲಭ್ಯವನ್ನು ಕ್ಲಪಿಸಿಕೊಡಲು ಶ್ರಮಿಸುತ್ತೇನೆ ಎಂದ ಅವರು, ತಮ್ಮ ಗ್ರಾಮ ಮುದ್ಲಾಪೂರ ಮತ್ತು ಹ್ಯಾಟಿಯ ಸಂಬಂಧದ ಕುರಿತು ಮಾತನಾಡಿದರು. ಅಲ್ಲದೇ ಗ್ರಾಮದಲ್ಲಿ ಪ್ರತಿ ಮನೆಗೂ ಶೌಚಾಲಯವಿರಬೇಕು,
ಜೊತೆಗೆ ಇಂಗು ಗುಂಡಿ ಮಾಡಿಕೊಂಡು ಸ್ವಚ್ಛತೆ ಕಾಪಾಡಿಕೊಳ್ಳಬೇಕಲು ಎಂದರು.
ಜಿ. ಪಂ. ಸದಸ್ಯ ನಾಗನಗೌಡ ಮಾಲಿಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿದರು. ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಆಶಯ ಭಾಷಣ ಮಾಡಿ, ಸಮಾಜಕ್ಕೆ ನಾಯಕತ್ವದ ಕೊರತೆ ಇದೆ, ಸಮುದಾಯಕ್ಕೆ ಶೇ.೭.೫ ರ ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿ ಅಗತ್ಯವಾಗಿದೆ, ಅದಕ್ಕಾಗಿ ಹೋರಾಟ ಅಗತ್ಯ. ಸಮುದಾಯದ ಶಾಸಕರು, ಸಮಾಜದ ಬೆಳವಣಿಗೆಗೆ ಶ್ರಮಿಸುತ್ತಿಲ್ಲ, ಅವರಿಗಿಂತ ಇತರೆ ಸಮಾಜದವರೇ ಮೇಲು, ಕೇವಲ ಜಯಂತಿ ಮಾಡಿ ರಜೆ ಪಡೆದರೆ ಸಾಲದು, ಸಮುದಾಯದ ಜನರು ಬೆಳೆಯಲು ಶಿಕ್ಷಣ, ಉದ್ಯೋಗ ದೊರೆಯಬೇಕು ಸಾಲ ಸೌಲಭ್ಯ ದೊರೆಯಬೇಕು ಎಂದರು. ಮುಖ್ಯ ಅತಿಥಿಗಳಾಗಿ ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಇಂದಿರಾ ಭಾವಿಕಟ್ಟಿ, ಗ್ರಾ. ಪಂ. ಸದಸ್ಯರುಗಳಾದ ಶುಭಾ ಅಂಬಿಗೇರ, ಸುರೇಶ ಬಿಸರಹಳ್ಳಿ, ಗಾಳೆಪ್ಪ ಹರಿಜನ, ತಿಮ್ಮರಡ್ಡಿ ಸಣ್ಣಮುದಿಯಪ್ಪನವರ, ದೊಡ್ಡ ಬಸಪ್ಪ ಹಾಲಳ್ಳಿ, ನಿಂಗನಗೌಡ ದಳಪತಿ, ನಿಂಗಪ್ಪ ಪಿಡ್ಡನಾಯಕ, ಗ್ಯಾನಪ್ಪ ಬೆಳವಿನಾಳ, ನಿಂಗಪ್ಪ ಪಚ್ಚಿ, ದೇವಪ್ಪ ಬಹದ್ದೂರಬಂಡಿ, ರಾಮನಗೌಡ ಪೋ.ಪಾ., ನಿಂಗಪ್ಪ ಪೂಜಾರ, ನಾಗರಾಜ ಸೋಟಕನವರ, ಮೈಲಾರಪ್ಪ ಮೆಳ್ಳಿಕೇರಿ, ಜಯಪ್ಪ ಸೋಟಕನವರ ಇತರರು ಇದ್ದರು. ಭವ್ಯವಾದ ಮೆರವಣಿಗೆ ನಡೆಯಿತು ಜಿ. ಪಂ. ಅಧ್ಯಕ್ಷ ಜನಾರ್ಧನ ಚಾಲನೆ ನೀಡಿದರು. ಶಿಕ್ಷಕ ಕಾಳಪ್ಪ ಸ್ವಾಗತಿಸಿ ನಿರೂಪಿಸಿದರು.
0 comments:
Post a Comment