PLEASE LOGIN TO KANNADANET.COM FOR REGULAR NEWS-UPDATES

ಆನೆಗುಂದಿಯ ಕೋಟೆ ಮತ್ತು ಗಗನ್ ಮಹಲ್ ಸ್ಥಬ್ಧ ಚಿತ್ರದಲ್ಲಿ ಕೊಪ್ಪಳ ಜಿಲ್ಲೆಗೆ ಪ್ರಥಮ ಬಹುಮಾನ

ಮೈಸೂರು ದಸರಾ ಉತ್ಸವದಲ್ಲಿ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದ ಸ್ತಬ್ಧ ಚಿತ್ರಗಳಲ್ಲಿ ಐತಿಹಾಸಿಕ ಮಹತ್ವ ಬಿಂಬಿಸುವ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಆನೆಗುಂದಿಯ ಕೋಟೆ ಮತ್ತು ಗಗನ್ ಮಹಲ್ ಸ್ಥಬ್ಧ ಚಿತ್ರಕ್ಕೆ ಕೊಪ್ಪಳ ಜಿಲ್ಲೆಗೆ ಪ್ರಥಮ ಬಹುಮಾನ ಲಭಿಸಿದೆ. 
ಕೊಪ್ಪಳ ಜಿ.ಪಂ. ವತಿಯಿಂದ ಐತಿಹಾಸಿಕ ಹಿನ್ನಲೆ ಮಹತ್ವ ಶೀರ್ಷಿಕೆಯಡಿ ಸ್ಥಬ್ಧಚಿತ್ರ ತಯಾರಿಸಲಾಯಿತ್ತು. ಸ್ಥಬ್ಧಚಿತ್ರ ಕಲಾವಿದರಾದ ಫಕೀರೇಶ ಕುಳಗೇರಿ ಮತ್ತು ಶಜಾನ್ ಮುದಕವಿ ತಂಡದವರು ೧೫ದಿನಗಳ ಕಾಲ ಕೋಟೆ ಮತ್ತು ಗಗನ್ ಮಹಲ್ ಕಟ್ಟಡಗಳ ಅಳತೆಗೆ ಸಮನಾಗಿ ನಿರ್ಮಿಸಿ ಸುಂದರವಾಗಿ ಬಣ್ಣ ಮಾಡಿರುತ್ತಾರೆ. 
ರಾಜ್ಯದ ಬೀದರ್,ಗದಗ, ಮಂಡ್ಯ, ಹಾವೇರಿ ಕೊಪ್ಪಳ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೊಪ್ಪಳ ಜಿಲ್ಲೆಗೆ ಪ್ರಥಮ ಬಹುಮಾನ ಘೋಷಿಸಿದ ಮೈಸೂರು ದಸರಾ ಸ್ಥಬ್ಧಚಿತ್ರ ಬಹುಮಾನ ವಿತರಣೆ ನಿರ್ಣಾಯಕ ಮಂಡಳಿಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಕೊಪ್ಪಳ ಜಿ.ಪಂ. ಪರವಾಗಿ ಅಭಿನಂದಿಸಿದ್ದಾರೆ. 
ಸ್ಥಬ್ಧ ಚಿತ್ರ ಜನರ ಮನ ಸೆಳೆಯುವಂತೆ ನಿರ್ಮಿಸಿ ಜಿಲ್ಲೆಗೆ ಪ್ರಥಮ ಬಹುಮನ ತಂದುಕೊಟ್ಟ ಕಲಾವಿದರಾದ ಫಕೀರೇಶ ಕುಳಗೇರಿ, ಶಹಜಾನ್ ಮುದಕವಿ, ರವಿ ಶಿಶುವಿನಹಳ್ಳಿ, ಜಿ.ಕೆ.ಬಡಿಗೇರ ಹಾಗೂ ತಂಡದವರಿಗೂ, ಜಿಲ್ಲೆಯಿಂದ ಸ್ಥಬ್ಧಚಿತ್ರ ನೋಡಲ್ ಅಧಿಕಾರಿಯಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ ಕೈಮಗ್ಗ ಮತ್ತು ಜವಳಿ ಇಲಾಖೆಯ ಕೀರ್ತಪ್ಪ ಗೋಟೂರು ಇವರಿಗೆ ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಅಭಿನಂದಿಸಿದ್ದಾರೆ.

Advertisement

0 comments:

Post a Comment

 
Top