ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಕೊಪ್ಪಳ ಜಿಲ್ಲೆಯಿಂದ ವಿವಿಧ ತಂಡಗಳು ಆಯ್ಕೆಯಾಗಿವೆ.
ಗುಲಬರ್ಗಾದಲ್ಲಿ ನಡೆದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕೊಪ್ಪಳ ಜಿಲ್ಲೆ ವಿವಿಧ ತಂಡಗಳು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಥ್ಲೇಟಿಕ್ಸ್ ಪುರುಷರ ವಿಭಾಗದಲ್ಲಿ ತ್ರಿಬಲ್ ಜಂಪ್‌ನಲ್ಲಿ ರಾಘವೇಂದ್ರ ಎನ್. ಕೊಪ್ಪಳ-ಪ್ರಥಮ, ನಟರಾಜ-ದ್ವೀತಿಯ, ಉದ್ದ ಜಿಗಿತದಲ್ಲಿ ನಾಗರಾಜ ಹೆಚ್.ಎಂ.-ದ್ವಿತಿಯ ಸ್ಥಾನ ಪಡೆದಿದ್ದಾರೆ. ಗುಂಪು ಆಟಗಳಲ್ಲಿ ಪುರುಷರ ವಿಭಾಗದಲ್ಲಿ ಖೋ ಖೋ ಹಾಗೂ ಥ್ರೋಬಾಲ್‌ನಲ್ಲಿ-ಗಂಗಾವತಿ ತಂಡ ಪ್ರಥಮ, ಅಥ್ಲೇಟಿಕ್ಸ್ ಮಹಿಳೆಯರ ವಿಭಾಗದಲ್ಲಿ ಎತ್ತರ ಜಿಗಿತದಲ್ಲಿ ಮಲ್ಲಮ್ಮ-ದ್ವೀತಿಯ, ತ್ರಿಬಲ್ ಜಂಪ್‌ನಲ್ಲಿ ತಬಸುಮ್- ದ್ವಿತೀಯ, ಗುಂಪು ಆಟಗಳಲ್ಲಿ ಮಹಿಳೆಯರ ವಿಭಾಗದಲ್ಲಿ ವ್ಹಾಲಿಬಾಲ್‌ನಲ್ಲಿ ಕ್ರೀಡಾ ಶಾಲೆ ಕ್ರೀಡಾ ನಿಲಯ ಕೊಪ್ಪಳ-ಪ್ರಥಮ ಸ್ಥಾನಗಳಿಸಿದ್ದು, ಈ ತಂಡಗಳು ಮೈಸೂರಿನಲ್ಲಿ ನಡೆಯು ರಾಜ್ಯ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸಬಹುದಾಗಿದೆ.
ಆಯ್ಕೆಯಾದ ಕ್ರೀಡಾಪಟುಗಳಿಗೆ ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೈ.ಸುದರ್ಶನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀಕ್ಷಕ ಟಿ.ರಾಮಕೃಷ್ಣಯ್ಯ ಸೇರಿದಂತೆ ಕ್ರೀಡಾ ಇಲಾಖೆಯ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ರಾಜ್ಯ ಮಟ್ಟದ ದಸರಾ ಕ್ರೀಡಾ ಕೂಟವು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅ.೦೫ ರಿಂದ ಅ.೦೮ ರವರೆಗೆ ನಡೆಯಲಿದ್ದು, ಈ ಕ್ರೀಡಾಕೂಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳು ಅ.೦೫ ರ ಬೆಳಿಗ್ಗೆ ೮.೦೦ ಗಂಟೆಯೊಳಗಾಗಿ ನಂಜರಾಜ್ ಬಹಾದ್ದೂರ್ ಛತ್ರದಲ್ಲಿ ಸಂಘಟಕರಲ್ಲಿ ಹೆಸರು ನೋಂದಾವಣೆ ಮಾಡಿಕೊಳ್ಳಲು ಸೂಚಿಸಿದೆ. ಕ್ರೀಡಾಪಟುಗಳಿಗೆ ಕೊಪ್ಪಳ ಜಿಲ್ಲೆಯಿಂದ ಮೈಸೂರಿಗೆ ಹೋಗಿಬರುವ ಸಾಮಾನ್ಯ ಬಸ್ ದರವನ್ನು ನೀಡಲಾಗುವುದು, ಕ್ರೀಡಾಪಟುಗಳು ಪ್ರಯಾಣ ಭತ್ಯೆಯನ್ನು ಪಡೆಯಲು ತಾವು ಬಸ್ ಟಿಕೆಟ್‌ನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಕ್ರೀಡಾಕೂಟ ಮುಗಿದ ನಂತರ ಇಲಾಖೆಯಿಂದ ಬಂದಂತ ತಂಡದ ವ್ಯವಸ್ಥಾಪಕರು ಪ್ರಯಾಣ ಭತ್ಯೆ ನೀಡುವರು. ಹೆಚ್ಚಿನ ಮಾಹಿತಿಗಾಗಿ ಕ್ರೀಡಾ ಇಲಾಖೆಯ ದೂರವಾಣಿ ಸಂಖ್ಯೆ: ೦೮೫೩೯-೨೦೧೪೦೦ ಸಂಪರ್ಕಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕ ವೈ.ಸುದರ್ಶನರಾವ್ ತಿಳಿಸಿದ್ದಾರೆ.
0 comments:
Post a Comment