ಕೊಪ್ಪಳ,ಸೆ.೧೬; ಎಲ್ ಆಂಡ್ ಟಿ ಕನ್ಸ್‌ಟ್ರಕ್ಷನ್.ಲಿಮಿಟೆಡ್ ಸಂಸ್ಥೆ ಹಾಗೂ ಕೆ.ಎಲ್.ಎಸ್ ಆಸ್ಪತ್ರೆ ಹೊಸಪೇಟೆ ಇವುಗಳ ಸಂಯುಕ್ರ ಆಶ್ರಯದಲ್ಲಿ ಕೊಪ್ಪಳ ನಗರದಲ್ಲಿ ಹೆಚ್.ಐ.ವಿ ಏಡ್ಸ್ ಜಾಗೃತಿ ಮತ್ತು ತಪಾಸಣಾ ಚಿಕಿತ್ಸಾ ಶಿಬಿರವನ್ನು ಎಲ್ ಆಂಡ್ ಟಿ ಕನ್ಸ್‌ಟ್ರಕ್ಷನ್.ಲಿಮಿಟೆಡ್ ಯೋಜನಾ ಕಚೇರಿಯಲ್ಲಿ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಎಲ್ ಆಂಡ್ ಟಿ ಕನ್ಸ್‌ಟ್ರಕ್ಷನ್.ಲಿಮಿಟೆಡ್ ಯೋಜನಾ ವ್ಯವಸ್ಥಾಪಕ ಮಹ್ಮದ್ ಸಾದಿಕ್.ಎಂ.ಎ.ರವರು ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿ ಇದನ್ನು ತಡೆಗಟ್ಟಲು ಕೈಗೊಳ್ಳಬೇಕಾಗಿರುವ ಚಿಕಿತ್ಸೆ
ಕೈ ಗೊಂಡಿರುವ ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಕೆ.ಎಲ್.ಎಸ್ ಆಸ್ಪತ್ರೆಯ ತಜ್ಞ ಡಾ.ಪಾಂಡುರಂಗ ಎಂ.ಡಿ.ರವರು ಹೆಚ್ ಐವಿ ಏಡ್ಸ್ ಹರಡುವಿಕೆ ಮತ್ತು ಇದರ ಚಿಕಿತ್ಸೆ ಹಾಗೂ ಇದನ್ನು ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಈ ಶಿಬಿರದಲ್ಲಿ ವಿಶೇಷ ಉಪನ್ಯಾಸ ಬೀಡಿ ನಂತರ ತಪಾಸಣೆ ಮತ್ತು ಚಿಕಿತ್ಸೆ ನೀಡಿದರು ಆರ್.ವಿ.ಎನ್.ಎಲ್ ಕಚೇರಿಯ ಬಿ.ಆರ್.ಕೆ.ಶರ್ಮಾ, ರಾಜೇಶ್ ಪಾಲ್ಗೊಂಡಿದ್ದರು ಹೆಚ್.ಐ.ವಿ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿಯಾಗಿ ಜರಯಗಿತು ಸುಮಾರು ೭೦ ಜನ ನೌಕರಸ್ಥರು ಹಾಗೂ ಕಾರ್ಮಿಕರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.
0 comments:
Post a Comment