ಕೊಪ್ಪಳ: ಕೇಂದ್ರಸರ್ಕಾರ ಹಾಗೂ ರಾಜ್ಯ ಸರ್ಕಾರ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಕಲಂ ೩೭೧ ನ್ನು ಜಾರಿಗೆ ತಂದಿದ್ದೂ ಸದದಲ್ಲೇ ರಾಷ್ಷ್ರ್ರಪತಿಗಳಿಂದ ಅನುಮೋದನೆ ದೊರೆಯಲಿದೆ. ಇದರಿಂದಾಗಿ ಮುಂದಿನ ದಿವಸಗಳಲ್ಲಿ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಪ್ರಾತಿನಿಧ್ಯ ದೊರೆತು ಹೈ.ಕ. ಬಲಾಡ್ಯವಾಗುತ್ತದೆ ಎಂದು ಮಾನ್ಯ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀರಾಘವೇಂದ್ರ ಹಿಟ್ನಾಳ್ ನುಡಿದರು.
ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ನಿಮಿತ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮುಂದುವರೆದು ಅನೇಕ ಮಹಾ ಚೇತನಗಳು ಹುತಾತ್ಮರಾಗುವದರ ಮೂಲಕ ಈ ಭಾಗಕ್ಕೆ ನಿಜಾಮಶಾಹಿ ಆಡಳಿತದಿಂದ ಬಿಡುಗಡೆ ದೊರೆತಿದೆ. ಇಂದು ನಾವುಗಳು ಅದನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಈ ಸಂದರ್ಭದಲ್ಲಿ ಎಲ್ಲ ಹೋರಾಟಗಾರರ ಆದರ್ಶಗಳು ಯುವಕರಿಗೆ ಮಾದರಿಯಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ, ಸಾಹಿತಿ ಎಚ್.ಎಸ್. ಪಾಟೀಲ ಹೈ.ಕ ಸ್ವಾತಂತ್ರ ಹೋರಾಟ ಹಾಗೂ ಕಲಂ ೩೭೧ ಅಗತ್ಯದ ಕುರಿತು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಮಾತನಾಡಿದರು. ಸ್ವಾಗತ ಪ್ರಭುರಾಜ ನಾಯಕ್, ವಂದನಾರ್ಪಣೆ ಸುರೇಶ ಸೊನ್ನದ ನೆರವೇರಿಸಿದರು. ನಿರೂಪಣೆ ಡಾ. ಡಿ.ಎಚ್. ನಾಯಕ್ ಮತ್ತು ದ್ವಾರಕಸ್ವಾಮಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ, ಶಿಕ್ಷಕೇತರ, ವಿದ್ಯಾರ್ಥಿ ಬಳಗ ಭಾಗವಹಿಸಿತ್ತು.
0 comments:
Post a Comment