ಕೊಪ್ಪಳ, ಸೆ. ೧೦- ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ ಕಾರ್ಮಿಕರು ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿ ಗುರುತಿನ ಚೀಟಿಗಳನ್ನು ಪಡೆಯಬೇಕು ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.
ಅವರು ತಾಲೂಕಿ ಜಬ್ಬಲಗುಡ್ಡ ಗ್ರಾಮದಲ್ಲಿ ಶುಕ್ರವಾರ ನಡೆದ ಶ್ರಾವಣ ಮಾಸದ ಪ್ರಯುಕ್ತ ಶ್ರೀಮಾರುತೇಶ್ವರ ಪೂಜಾ ಕಾರ್ಯಕ್ರಮದ ಅಂಗವಾಗಿ ಆಯ್ಕೆಯಾದ ಮೊದಲ ಬಾರಿಗೆ ಜಬ್ಬಲಗುಡ್ಡ ಗ್ರಾಮಕ್ಕೆ ಆಗಮಿಸಿದ್ದ ಶಾಸಕ ಇಕ್ಬಾಲ್ ಅನ್ಸಾರಿ ಹಾಗೂ ಮುಖ್ಯಮಂತ್ರಿ ಪದಕ ಪಡೆದ ಮುನಿರಾಬಾದ್ ಠಾಣೆಯ ಪಿಎಸ್‌ಐ ವಿಶ್ವನಾಥ ಹಿರೇಗೌಡ್ರ ಇವರುಗಳಿಗೆ ಸನ್ಮಾನ, ಜಾಮಿಲಿಯಾ ಮಸೀದಿ ಅಡಿಗಲ್ಲು ಹಾಗೂ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣಾ ಸಮಾರಂಭ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮೇಲಿನಂತೆಮಾತನಾಡಿದ ಅವರು. ಮುಂದುವರೆದು ಮಾತನಾಡಿ, ನಾನು ಕಾರ್ಮಿಕ ಸಚಿವನಾಗಿದ್ದಾಗ ಯಲಬುರ್ಗಾ, ಕುಷ್ಟಗಿ ತಾಲೂಕಗಳಿಂದ ಕಾರ್ಮಿಕರು ಗುಳೆಹೋಗುತ್ತಿದ್ದರು, ಅವರಲ್ಲಿ ಹೆಚ್ಚಿನ ಜನರು ಕಟ್ಟಡ ನಿರ್ಮಾಣ ಕೆಲಸವನ್ನು ಅರಸುಕೊಂಡು ಬೆಂಗಳೂರಿನಲ್ಲಿ ಬರುತ್ತಿದ್ದರು, ನಿರ್ಮಾಣ ಹಂತದಲ್ಲಿ ಕಟ್ಟಡ ಕುಸಿದು ಬಿದ್ದು, ನಾಲ್ವರು ತೀರಿಕೊಂಡರು, ಅವರ ಕುಟುಂಬದವರಿಗೆ ಕಟ್ಟಡದವರಿಂದ ಮೂರು ಲಕ್ಷ ರೂಪಾಯಿ ಮತ್ತು ಸರ್ಕಾರದಿಂದ ಧನ ಸಹಾಯ ನೀಡಲಾಯಿತು. ಎ.ಐ.ಟಿ.ಯು.ಸಿ.ಯ ಕಟ್ಟಡ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ ಬಂದು ಹಲವು ಸಲಹೆಗಳನ್ನು ನೀಡಿದರು. ಆಗ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿಯವರ ಗಮನಕ್ಕೆ ತಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಿ, ಸರ್ಕಾರದಿಂದ ನಡೆಯುವ ರಸ್ತೆ, ಬ್ರೀಜ್ ಮುಂತಾದ ಕಾಮಗಾರಿ, ಗುತ್ತಿಗೆದಾರರಿಂದ. ಖಾಸಗಿಯಾಗಿ ಕಟ್ಟಡ ಕಟ್ಟುವ ಮಾಲಿಕರಿಂದ, ಒಂದು ಪ್ರಸೆಂಟ್‌ಸೆಸ್ ಮಂಡಳಿಯಲ್ಲಿ ಜಮಾ ಆಗುವಂತೆ ಮಾಡಿ, ನಾವು ಮನೆಗೆ ಹೋದರೂ ಕಟ್ಟಡ ಕಾರ್ಮಿಕರಿಗೆ ಶಾಶ್ವತ ಸೌಲಭ್ಯ ಸಿಗುವಂತೆ ಕಾನೂನು ಮಾಡಿದ್ದೇವೆ. ಸೌಲಭ್ಯಕ್ಕೆ ಕಟ್ಟಡ ಕಾರ್ಮಿಕರು ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು. ಎ.ಐ.ಟಿ.ಯು.ಸಿ.ಯವರು ಕಟ್ಟಡ ಕಾರ್ಮಿಕರಿಗೆ ಗುರುತ್ತಿನ ಚೀಟಿಗಳನ್ನು ಮಾಡಿಸಿ ಕೊಡುತ್ತಿದ್ದಾರೆ. ಉಳಿದವರು ಅದನ್ನೇ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲವೆಂದು ಹೇಳಿದರು.
ಗಂಡುಗಲಿ ಕುಮಾರರಾಮನ ದೇವಸ್ಥಾನಕ್ಕೆ ಲೈಟಿನ ವ್ಯವಸ್ಥೆ ಅಲ್ಲದೆ ಜಬ್ಬಲಗುಡ್ಡ ಗ್ರಾಮಕ್ಕೆ ರಸ್ತೆ, ಚರಂಡಿಗಳನ್ನು ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಸರ್ಕಾರದಿಂದ ಅನುದಾನ ಬಂದ ಕೂಡಲೇ ಪ್ರಾರಂಭಿಸುತ್ತೇನೆ, ನಮಗೆ ಜಾತಿ ಬೇಕಿಲ್ಲ. ಎಲ್ಲ ಜಾರಿಯವರು ಸೇರಿಕೊಂಡು ಸೌರ್ಹದತೆಯಿಂದ ಬಾಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡ್ಡಯುವ ಕ್ವಾರಿ ಕಾರ್ಮಿಕರ ಸಂಘ (ಎ.ಐ.ಯು.ಟಿ.ಸಿ)ದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಕೊಡಿಸಲು ನಮ್ಮ ಕಟ್ಟಡ ಕಾರ್ಮಿಕರ ಸಂಘ ಅನೇಕ ಹೋರಾಟಗಳನ್ನು ಮಾಡಿದೆ. ಬಿಸಿ ರಕ್ತದ, ಹುಮ್ಮಸಿನ ಇಕ್ಬಾಲ್ ಅನ್ಸಾರಿ ಅವರು. ಕಾರ್ಮಿಕ ಸಚಿವರಾಗಿದ್ದಾಗ ಕಟ್ಟಡ ಕಾರ್ಮಿಕರ ಸೌಲಭ್ಯಗಳನ್ನು ಆರಂಭಿಸಿದ್ದಾರೆ, ಸೌಲಭ್ಯದ ಧನ ಸಹಾಯ ಕಡಿಮೆ ಇದ್ದು, ಹೆಚ್ಚಿಸಲು ಹಾಗೂ ನಿರ್ಬಂಧನೆಗಳನ್ನು ಸಡಿಲುಗೊಳಿಸಿ ಕಡಿಮೆ ಅವಧಿಯಲ್ಲಿ ಸಿಗುವಂತೆ ವಿಧಾನಸಭೆಯಲ್ಲಿ ಧ್ವನಿ ಎತ್ತಿ ಪ್ರಯತ್ನಿಸಬೇಕು ಎಂದು ಶಾಸಕ ಇಕ್ಬಾಲ್ ಅನ್ಸಾರಿ ಅವರಿಗೆ ಮನವಿ ಮಾಡಿಕೊಂಡರು.
ಕರ್ನಾಟಕ ರಾಜ್ಯ ಕೃಷಿ ಕೂಲಿ ಕಾರ್ಮಿಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ ಕೆ. ಎಸ್. ಜನಾರ್ಧನ ಮಾತನಾಡಿ ನಮ್ಮ ಕಟ್ಟಡ ಕಾರ್ಮಿಕರ ಸಂಘಟನೆಯಿಂದ ಹೋರಾಟಗಳನ್ನು ಮಾಡಿ ಪೋಲಿಸರ ಏಟು ತಿಂದು ಜೇಲ್ ಸೇರಿದ್ದಾರೆ, ಇವತ್ತು ಕಟ್ಟಡ ನಿರ್ಮಾಣದಲ್ಲಿ ತೊಡಗಿದ ಕಟ್ಟಡ ಕಟ್ಟುವ ಕಾರ್ಮಿಕರು, ಪೇಂಟರ್‌ಗಳು, ವೈರಿಂಗ್ ಮಾಡುವ, ಬಡಗಿ ಕೆಲಸ ಮಾಡುವ, ಗ್ರಿಲ್ ಕೆಲಸ ಮಾಡುವ ಪ್ಲಂಬಿಂಗ್ ಕೆಲಸ ಮಾಡುವ, ಇಟ್ಟಂಗಿ ತಯಾರಿಸುವ, ಕಲ್ಲು ಒಡೆಯುವ ಕಾರ್ಮಿಕರಿಗೆ ಸೌಲಭ್ಯ ಸಿಗುತ್ತಿರುವುದು ನಮ್ಮ ಸಂಘಟನೆಯ ಮನವಿಗಳಿಗೆ ಸ್ಪಂದಿಸಿದ ಆಗಿನ ಕಾರ್ಮಿಕ ಸಚಿವ ಈಗಿನ ಗಂಗಾವತಿ ಹಾಲಿ ಶಾಸಕ ಇಕ್ಬಾಲ್ ಅನ್ಸಾರಿ ಅವರೇ ಕಾರಣ. ನಮ್ಮ ಸಂಘಟನೆ ಬೇಡಿಕೆಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮಂಡಳಿ ರಚಿಸಿ ಶಾಶ್ವತ ಸೌಲಭ್ಯ ಕೊಡುವಂತೆ ಕಾನೂನು ತಂದು ಇತಿಹಾಸ ರಚಿಸಿದ್ದಾರೆ. ಅದೇ ರೀತಿ ಕೊಪ್ಪಳ ಜಿಲ್ಲೆಯಲ್ಲಿ ಬಿಸಿಯೂಟ ಖಾಸಗಿಯವರಿಗೆ ಕೊಡಲು ಜಿಲ್ಲಾ ಪಂಚಾಯತ್‌ನಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು, ಆಗ ನಮ್ಮ ಸಂಘಟನೆಯಿಂದ ನಾವು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಗ ಸಚಿವರಾಗಿದ್ದ ಇಲ್ಬಾಲ್ ಅನ್ಸಾರಿಯವರಿಗೆ ವಿವರವಾಗಿ ತಿಳಿಸಿ ಖಾಸಗಿಕರಣದ ನಿರ್ಣಯ ರದ್ದು ಪಡಿಸಲು ಮನವಿ ಮಾಡಿದಾಗ ಒಪ್ಪಿ ಕೆ.ಡಿ.ಪಿ. ಸಭೆಯಲ್ಲಿ ಚರ್ಚಸಿ ಖಾಸಗೀಕರಣ ನಿರ್ಣಯ ರದ್ದು ಪಡಿಸಿದ ಇಕ್ಬಾಲ್ ಅನ್ಸಾರಿ ಅವರಿಗೆ ನಮ್ಮ ಸಂಘಟನೆ ಕೃತಜ್ಷತೆ ತಿಳಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಜುಮ್ಮಾ ಮಸೀದಿಗೆ ಅಡಿಗಲ್ಲು ಹಾಕಿದರು. ವೇದಿಕೆ ಮೇಲೆ ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಎಸ್.ಬಿ.ಖಾದ್ರಿ, ಜೆ.ಡಿ.ಎಸ್. ಮುಖಂಡರಾದ ವಿರುಪಾಕ್ಷಪ್ಪ ಮುದ್ಲಾಪೂರ, ರಮೇಶ ಪಾಟೀಲ್, ದೇವಪ್ಪ ಕಬ್ಬೇರ್, ಶಂಕರಗೌಡ ಮಾಲಿಪಾಟೀಲ್, ಕರೀಮ್ ಸಾಬ ಬಳಿಗಾರ, ಗ್ರಾ.ಪಂ ಸದಸ್ಯರಾದ ಲಕ್ಷ್ಮಣ ದನದವರ್, ಸೋಮಲಿಂಗಪ್ಪ ಪೂಜಾರ, ಹನುಮಂತಪ್ಪ ಭೋವಿ, ಭೀಮಣ್ಣ ಕಟಗಳಿ, ಹನುಮಂತಪ್ಪ ಕಬ್ಬೇರ್, ನಾಗಪ್ಪ ಕಬ್ಬೇರ್, ಹನುಮಗೌಡ ಟಣಕನಕಲ್, ಶಿವಲಿಂಗಪ್ಪ ಪೂಜಾರ, ಹುಸೇನಮಿಯಾ ಬಳಿಗಾರ, ಯಮನೂರಪ್ಪ ಸುಣಗಾರ, ಯಂಕಪ್ಪ ತಲೆಖಾನ್, ಕವಲೂರ ಗ್ರಾಮ ಘಟಕದ ಅಧ್ಯಕ್ಷ ಹುಸೇನ್ ಮೌಲಾಸಾಬ ತಹಶೀಲ್ದಾರ್, ಗಿಣಿಗೇರ ಗ್ರಾಮ, ಘಟಕದ ಸಂಚಾಲಕ ನೂರಸಾಬ ಹೊಸಮನಿ, ಹಿರೇಬಗನಾಳ ಗ್ರಾಮ ಘಟಕದ ಅಧ್ಯಕ್ಷ ಮರಿಸ್ವಾಮಿ ವಡ್ಡರ, ಲಾಚನಕೇರಿ ಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜ ಭೋವಿ ಮುಂತಾದವರು ಉಪಸ್ಥಿತರಿದ್ದರು.
ಸ್ವಾಗತ ಕರವೇ ಅಧ್ಯಕ್ಷ ಮದ್ದಾನೆಪ್ಪ ಕಬ್ಬೇರ್ ಮಾಡಿದರೆ, ನಿರೂಪಣೆಯನ್ನು ಗಂಡುಗಲಿ ಕುಮಾರರಾಮ ಯುವಕ ಸಂಘದ ಅಧ್ಯಕ್ಷ ಮಂಜುನಾಥ ಭೋವಿ ವರದನಾರ್ಪಣೆಯನ್ನು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕ ಸಂಘದ ಜಬ್ಬಲಗುಡ್ಡ ಗ್ರಾಮ ಘಟಕದ ಅಧ್ಯಕ್ಷ ಸುರೇಶ ಎನ್. ಈಳಗೇರ ಮಾಡಿದರು.
0 comments:
Post a Comment