PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ:  ಗಗನ, ಭುವನ, ಪವನ, ಪಾವನ ಇವುಗಳಿದ್ದರೆ ಮಾನವನ ಜೀವನ. ಹೇಗೆಂದರೆ ಕಾಯಲಿಕ್ಕೆ ಗಗನ, ಕುಳಿತುಕೊಳ್ಳಲು ಭುವನ, ಉಸಿರಾಡಲು ಪವನ,  ಬೆಚ್ಚಗೆ ಮಾಡಲು ಪಾವನ. ಇವುಗಳಿದ್ದರೆ ಇದ್ದರೆ  ಜೀವನ. ಇಲ್ಲದಿದ್ದರೆ ಜೀವ.. ನ ( ವ್ಯರ್ಥ) ಎಂದು ಮಾತನಾಡುತ್ತ ಭೂಮಿಯೇ ನಮಗೆ ನಿಜವಾದ ಜೀವನ ದರ್ಶನ ಮಾಡಿಸುವ ಮೊದಲ ವಸ್ತು. ಎಂದು ಕನ್ನಡದ ಪೂಜಾರಿ ಖ್ಯಾತರಾದ ಹಿರೇಮಗಳೂರು ಕಣ್ಣನ್ ನುಡಿದರು. ಅವರು ನಗರದ ಶ್ರೀಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ವ್ಯಕ್ತಿತ್ವ ವಿಕಾಸನ ಮಾಲಿಕೆಯ ಜೀವನ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮುಂದುವರೆದು ಮಾತನಾಡಿ ನಾವೆಲ್ಲಾ ಇಂದು ಅಪಾಯದ ಸ್ಥಿತಿಯಲ್ಲಿ ಇದ್ದೇವೆ. ರೂಪಾಯಿ ಮೌಲ್ಯ ಕುಸಿದಿದೆ. ಚಿನ್ನದ ವ್ಯಾಮೋಹ ಹೆಚ್ಚಿದೆ. ಜೀವನ ಬರ್ಬರವಾಗುತ್ತಿದೆ.  ಬದುಕು ದುರ್ಬಲವಾಗುತ್ತಿದೆ.
 ಎಲ್ಲ ಕಡೆಗೆ ವಿದ್ವಂಸಕ ಕೃತ್ಯಗಳು ನಡೆಯುತ್ತಿವೆ. ಜೀವನದಲ್ಲಿ ಸಹಕಾರ, ಸಹಭಾಗಿತ್ವ  ಇಲ್ಲದಾಗಿದೆ. ಇವುಗಳ ಕುಸಿತದಿಂದಾಗಿ  ನಾವು ಅಪಾಯದ ಅಂಚಿನಲ್ಲಿದ್ದೇವೆ.  ಭಾಷಾವಾರು ಪ್ರಾಂತಗಳಿಂದ ರಚನೆಯಾದ ಭಾರತ ಈಗ ಜಾತಿವಾರು ಪ್ರಾಂತವಾಗಿದೆ. ಇಂತಹ ವಿಷಮ ವಾತವಾರಣದಲ್ಲಿ  ಸತ್ಯದ ಆವಿಷ್ಕಾರ ಹಾಗೂ ಜೀವನ ದರ್ಶನದ ಮೂಲಕ ಅವುಗಳನ್ನು ದಿಕ್ಕು ತಪ್ಪಿಸಿ ಮಾನವೀಯತೆಯನ್ನು  ಪುನ: ಸ್ಥಾಪಿಸಿ ಸಮಾಜದ ರುಣ ತೀರಿಸಬೇಕಾಗಿದೆ ಎಂದರು.  ಕಣ್ಣನ್ ಮಾಮಾ ಅವರ ಹಾಸ್ಯ, ತಮಾಸೆ, ಹರಟೆ, ಗಂಭೀರ ವಿಚಾರಗಳನ್ನು ಸುಡು ಬಿಸಿಲಲ್ಲೂ  ವಿದ್ಯಾರ್ಥಿಗಳು ಆಲಿಸಿದರು.  ಈ ಕಾರ್ಯಕ್ರಮಕ್ಕೆ  ಸಂಸ್ಥೆ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ,  ಪ್ರಭು ಹೆಬ್ಬಾಳ, ಪ್ರಕಾಶ ಚಿನಿವಾಲ ಹಾಗೂ ಪುರ ಪ್ರಮುಖರು ಆಗಮಿಸಿದ್ದರು. ಪ್ರೊ. ಶರಣಬಸಪ್ಪ ನಿರೂಪಿಸಿ ವಂದಿಸಿದರು.  

Advertisement

0 comments:

Post a Comment

 
Top