PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿ ಸೇವೆ ಸಲ್ಲಿಸುತ್ತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಆಳುವ ಸರ್ಕಾರವನ್ನು ಒತ್ತಾಯಿಸಿ ತರಗತಿಗಳನ್ನು ಬಹಿಷ್ಕರಿಸಿ ಇಂದು ರಾಜ್ಯದಾದ್ಯಂತ ಮುಷ್ಕರ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಮ್ಮ ಬೇಡಿಕೆಗಳಾದ  ಸೇವಾ ಭದ್ರತೆಯನ್ನು ಖಾಯಂಗೊ ಳಿಸುವದಕ್ಕಾಗಿ , ಯು.ಜಿ.ಸಿ. ನಿಯಮದಂತೆ ಪ್ರತಿ ತಿಂಗಳಿಗೆ ೨೫ ಸಾವಿರ ರೂಪಾಯಿ ವೇತ
ನಕ್ಕಾಗಿ,  ಜೊತೆಗೆ ಸತತ ೧೨ ತಿಂಗಳ ವೇತನಕ್ಕಾಗಿ, ಖಾಯಂ ನೇಮಕಾತಿಯಲ್ಲಿ  ಕೃಪಾಂಕ  ಹಾಗೂ ವಯೋಮಿತಿ  ಮೀರಿದವರಿಗೆ ಆಧ್ಯತೆ ನೀಡಲು, ಏಕ ರೂಪದ ವೇತನ ಈ ಮೊದಲಾದ ಬೇಡಿಕೆಗಳಿಗಾಗಿ  ಆಗ್ರಹಿಸಿದರು. ಈ ಮುಷ್ಕರಕ್ಕೆ  ಹೋರಾಟಗಾರ ವಿಠ್ಠಪ್ಪ ಗೋರಂಟ್ಲ, ಸಾಹಿತಿ ಎಚ್.ಎಸ್.ಪಾಟೀಲ, ಪತ್ರಕರ್ತಬಸವರಾಜ ಶೀಲವಂತರ, ಪ್ರಲ್ಹಾದ ಬೆಟಗೇರಿ, ಡಿ.ವಾಯ್.ಎಫ್.ಐ ರಾಜ್ಯ ಸಮಿತಿ ಸದಸ್ಯ ಸುಂಕಪ್ಪ ಗದಗ, ಎಸ್.ಎಫ್.ಐ ಮುಖಂಡ ಬಸವರಾಜ ಹುಲಿಹೈದರ  ಬೆಂಬಲಿಸಿ ಮಾತನಾಡಿದರು. ಅತಿಥಿ ಉಪನ್ಯಾಸಕರ ಜಿಲ್ಲಾಧ್ಯಕ್ಷ ವೀರಣ್ಣ ಸಜ್ಜನ, ಗೌರವಾಧ್ಯಕ್ಷ ಶಿವಪ್ರಸಾದ ಹಾದಿಮನಿ, ಕಾರ್ಯದರ್ಶಿ ಕಲ್ಲೇಶ ಅಬ್ಬೀಗೇರಿ, ಪದಾಧಿಕಾರಿಗಳಾದ ರವಿ ಹಿರೇಮಠ, ಡಾ.ತುಕಾರಾಂ, ಶಿವಮೂರ್ತಿ, ಡಾ.ಪ್ರಕಾಶಬಳ್ಳಾರಿ, ಡಾ.ಗವಿಸಿದ್ದಪ್ಪ ಹಂದ್ರಾಳ, ಡಾ.ಮಾರ್ಕಂಡಯ್ಯ, ಶಂಕರ ಕರಪಡಿ, ಚಂದ್ರು, ಭೀಮಣ್ಣ, ಮಹೇಶ, ವಿಜಯಕುಮಾರ, ಪ್ರಕಾಶ ಜಡಿ, ಜ್ಞಾನೇಶ ಪತ್ತಾರ, ಸಂತೋಷಿ ಬೆಲ್ಲದ, ಕವಿತಾ ಎಲ್ಲ ತಾಲೂಕಾ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.

Advertisement

0 comments:

Post a Comment

 
Top