PLEASE LOGIN TO KANNADANET.COM FOR REGULAR NEWS-UPDATES

ಕನಕ ಸಾಂಸ್ಕೃತಿಕ ಪರಿಷತ್ತು ಕೊಪ್ಪಳ ಇವರ ಆಶ್ರಯದಲ್ಲಿ ಆಯೋಜಿಸಲಾದ ಮನೆ ಮನೆಯಲ್ಲಿ ಹಾಲುಮತ ಸಂಸ್ಕೃತಿ ದರ್ಶನ ಕಾರ್ಯಕ್ರಮವನ್ನು ಇದೇ ಸೆಪ್ಟಂಬರ ೨೯ ರಂದು ಸಂಜೆ ೬ ಗಂಟೆಗೆ ನಗರದ ದಿಡ್ಡಿಕೇರಿ ಓಣಿ ಬನಶಂಕರಿ ನಿಲಯದ ಶಂಕ್ರಪ್ಪ ಮತ್ತು ಲಕ್ಷ್ಮಿದೇವಿ ಗುಡದಳ್ಳಿ ಇವರ ಮನೆಯಲ್ಲಿ ಜರುಗಲಿದೆ. 
ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಡಿ.ಮಲ್ಲಣ್ಣ ನೇರವೆರಿಸುವರು. ರೈತ ಮುಖಂಡ ಮುದಕಪ್ಪ ಕೈರೊಟ್ಟಿ, ನಗರಸಭೆ ಸದಸ್ಯ ಶಿವಣ್ಣ ಜಂಗಳಿ,ವರ್ತಕ ಲಕ್ಷ್ಮಣ ಡೊಳ್ಳಿನ, ಗುತ್ತಿಗೆದಾರ ಸೊಮಪ್ಪ ಧನಕರ, ವರ್ತಕ ಗವಿಸಿದ್ದಪ್ಪ ಸಿಂಧನೂರ, ಜಿಲ್ಲಾ ಕನಕದಳ ಸೇವಾ ಸಮಿತಿ ಅಧ್ಯಕ್ಷ ಕರಿಯಣ್ಣ ಬೇವಿನಹಳ್ಳಿ, ಗುತ್ತಿಗೆದಾರ ಗವಿಸಿದ್ದಪ್ಪ ಡೊಳ್ಳಿನ, ವರ್ತಕ ಶಿವಾನಂದ ಯಲ್ಲಮ್ಮನವರ, ಗ್ರಾ.ಪಂ ಮಾಜಿ ಸದಸ್ಯ ಪಂಪಣ್ಣ ಮೇಟಿ, ಗ್ರಾ.ಪಂ ಮಾಜಿ ಅಧ್ಯಕ್ಷ ಹಂದಿಗಾಲಪ್ಪ ಹೊಳೆಯಾಚಿ, ವರ್ತಕ ಗೂಳಪ್ಪ ಸಿಂಧನೂರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರಥಮ ದರ್ಜೆ ಗುತ್ತಿಗೆದಾರ ಶಂಕ್ರಪ್ಪ ಸಂಜೀವಪ್ಪ ಗುಡದಳ್ಳಿ ಅಧ್ಯಕ್ಷತೆ ವಹಿಸುವರು. 
ಕಾರ್ಯಕ್ರಮದಲ್ಲಿ ಕರಮುಡಿ ಸರ್ಕಾರಿ ಪ್ರೌಢ ಶಾಲೆ ಸಹ ಶಿಕ್ಷಕ ಬಸವರಾಜ ಕೊಂಡಗುರಿ ಅವರು ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಸಂಗೊಳ್ಳಿ ರಾಯಣ್ಣ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.ಕೊಪ್ಪಳದ ನಾಗಮ್ಮ ಮೂಗಿನ ಹಾಗೂ ಸಂಗಡಿಗರಿಂದ ಡೊಳ್ಳಿನ ಹಾಡುಗಳು ಜರುಗಲಿವೆ ಎಂದು ಕನಕ ಸಾಂಸ್ಕೃತಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿ, ಪ್ರಧಾನ ಕಾರ್ಯದರ್ಶಿ ಅರುಣಾ ನರೇಂದ್ರ ಮತ್ತು ಹನುಮಂತಪ್ಪ ಅಂಡಗಿ ಅವರು ತಿಳಿಸಿದ್ದಾರೆ. 

Advertisement

0 comments:

Post a Comment

 
Top