PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಸೆ.೨೭: ಕಳೆದ ೨೪ ರಂದು ಚೆನ್ನೈನಲ್ಲಿ ನೆಡೆದ ಸಿನಿಮಾ ರಂಗದ ೧೦೦ ರ ಸಂಭ್ರಮದ ಪ್ರಯುಕ್ತ ದಕ್ಷಿಣ ಭಾರತ ರಾಜ್ಯಗಳ ಹಿರಿಯ ಕಲಾವಿಧರ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ರಾಜ್ಯದ ಹಿರಿಯ ಕಲಾವಿಧರಿಗೆ ಅವಮಾನ ಮಾಡಿರುವುದನ್ನು ಕರ್ನಾಟಕ ಯುವಶಕ್ತಿ ವೇದಿಕೆ ಖಂಡಿಸಿ ಇಂದು ಹೋರಾಟ ನಡೆಸಿ ತಮಿಳುನಾಡ ಮುಖ್ಯಮಂತ್ರಿಗಳ ಪ್ರತಿಕೃತಿ ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿತು.
ರಾಷ್ಟ್ರಪತಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಕಲಾವಿಧರಾದ ಲೀಲಾವತಿ, ಜಯಂತಿ, ಜಯಮಾಲಾ, ಪಾರ್ವತಮ್ಮ ರಾಜಕುಮಾರ, ಸತ್ಯ ಶ್ರೀನಾಥ ಸೇರಿದಂತೆ ಇತರರನ್ನು ಸನ್ಮಾನ ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರಿಗೆ ಕಾರ್ಯಕ್ರಮದ ಪಾಟಗಳನ್ನು ಕೊಡದೇ ಹಾಗೂ ಪುರಸ್ಕಾರ ಸನ್ಮಾನ ಮಾಡದೇ ಅವಮಾನ ಮಾಡಲಾಗಿದೆ. ಇದು ಉದ್ದೇಶ ಪೂರ್ವಕವಾಗಿದೆ ಎಂದು ವೇದಿಕೆ ತೀವ್ರವಾಗಿ ಖಂಡಿಸಿತು. ಕೂಡಲೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ರಾಜ್ಯದ ಜನತೆ ಹಾಗೂ ಕಲಾವಿಧರಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತು.
 ಇದಕ್ಕೂ ಪೂರ್ವದಲ್ಲಿ ವೇದಿಕೆ ನಗರದ ಹೃದಯ ಭಾಗದಲ್ಲಿರುವ ಸಿಂಪಿ ಲಿಂಗಣ್ಣ ವೃತ್ತದಿಂದ ಅಶೋಕ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಬಸವೇಶ್ರವರ ವೃತ್ತ ಬಳಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರ ಪ್ರತಿಕೃತಿ ದಹನ ಮಾಡಿ ನಂತರ ಜಿಲ್ಲಾಢಳಿತ ಭವನಕ್ಕೆ ತೇರಳಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಯುವಶಕ್ತಿ ವೇದಿಕೆ ಜಿಲ್ಲಾಧ್ಯಕ್ಷ ಸುಧಾಕರ ವ್ಹಿ.ಹೊಸಮನಿ, ಉಪಾಧ್ಯಕ್ಷ ಮಂಜುನಾಥ ಹಳ್ಳಿಕೇರಿ, ಜಿಲ್ಲಾ ಪ್ರ. ಕಾ. ಬಸವರಾಜ ನಾಯಕ, ಹನುಮಂತಪ್ಪ ಜಾನಗಾರ, ಜಿಲ್ಲಾ ಸಂ.ಕಾ.ರಮೇಶ ಗೀಣಗೇರಾ, ಜಿಲ್ಲಾ ಮಹಿಳಾ ಅಧ್ಯಕ್ಷೆ ಶಾಂತಾ ನಾಯಕ, ಉಪಾಧ್ಯಕ್ಷೆ ಮಹಾಲಕ್ಷ್ಮೀ ರಾಂಪುರಿ, ಸರಿತಾ ಹೊಸಮನಿ, ಹುಲಗಪ್ಪ ದೊಡ್ಡಮನಿ, ಹನುಮಂತಪ್ಪ ಗಿಣಗೇರಾ, ಮೈನುದ್ದೀನ್ ಖಾನ್, ಅನ್ನು ಕಲೆಗಾರ, ಆನಂದ ರಾಮಪ್ಪ, ಹನುಮಂತಪ್ಪ, ವಿರೇಶ, ಹುಲಗಪ್ಪ, ಆನಂದಕುಮಾರ, ಸತಿದೇವಿ, ಬೋರಮ್ಮ, ಮಾರುತಿ, ರಾಮಣ್ಣ, ಮಾಂತೇಶ ಸೇರಿದಂತೆ ಇತರರು ವಹಿಸಿದ್ದರು. ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top