PLEASE LOGIN TO KANNADANET.COM FOR REGULAR NEWS-UPDATES

 ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಪ್ರಸಕ್ತ ಸಾಲಿನ ಗುಲಬರ್ಗಾ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ಸೆ.೨೭ ರಿಂದ ೨೯ ರವರೆಗೆ ಗುಲಬರ್ಗಾದ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದೆ. 
  ಈ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಕೊಪ್ಪಳ ಜಿಲ್ಲಾ ಮಟ್ಟದ ಕ್ರೀಡಾಕೂಟದ ಗುಂಪು ಆಟಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮತ್ತು ಅಥ್ಲೇಟಿಕ್ಸನಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರು ಭಾಗವಹಿಸಬಹುದಾಗಿದೆ.  
ಜಿಲ್ಲೆಯ ಅರ್ಹ ಕ್ರೀಡಾಪಟುಗಳು ಕಡ್ಡಾಯವಾಗಿ ಸಮವಸ್ತ್ರದೊಂದಿಗೆ ಹಾಗೂ ಜಿಲ್ಲೆಯ ಧ್ವಜದೊಂದಿಗೆ ಸೆ.೨೭ ರಂದು ಬೆಳಿಗ್ಗೆ ೧೦ ಗಂಟೆಗೆ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ಭಾಗವಹಿಸಬಹುದಾಗಿದೆ.  ಅಲ್ಲದೆ ಕ್ರೀಡಾಪಟುಗಳು  ಪಾಸ್‌ಪೋರ್ಟ್ ಸೈಜ್ ಅಳತೆಯ ತಮ್ಮ ಎರಡು ಪೋಟೋ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. 
ಜಿಲ್ಲೆಯಿಂದ ಭಾಗವಹಿಸುವ ಪುರುಷ ಕ್ರೀಡಾ ಪಟುಗಳು ಶ್ರೀ ಸಿದ್ದೇಶ್ವರ ಪುಣ್ಯಾಶ್ರಮ ಕೊಟನೂರ (ಡಿ) ಮತ್ತು ಮಹಿಳಾ ಕ್ರೀಡಾ ಪಟುಗಳು ವೀರಶೈವ ಕಲ್ಯಾಣ ಮಂಟಪ ರಿಂಗ್ ರೋಡ್, ಖರ್ಗೆ ಪೆಟ್ರೋಲ್ ಪಂಪ್ ಹತ್ತಿರ ಗುಲಬರ್ಗಾ ಇಲ್ಲಿ ಸೆ.೨೭ ರಂದು ಬೆಳಿಗ್ಗೆ ೮.೦೦ ಗಂಟೆಯೊಳಗಾಗಿ ಸಂಬಂಧಪಟ್ಟ ಸಂಘಟಕರಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿದೆ.  ವರದಿ ಮಾಡಿಕೊಂಡ ಕ್ರೀಡಾಪಟುಗಳಿಗೆ ಕೊಪ್ಪಳ ಜಿಲ್ಲೆ ಕೇಂದ್ರ ಸ್ಥಾನದಿಂದ ಗುಲಬರ್ಗಾಕ್ಕೆ ಹೋಗಿ ಬರುವ ಸಾಮಾನ್ಯ ಬಸ್ ದರವನ್ನು ನೀಡಲಾಗುವುದು. ಕ್ರೀಡಾಪಟುಗಳು ಪ್ರಯಾಣ ಭತ್ಯೆಯನ್ನು ಪಡೆಯಲು ತಮ್ಮ ಕೊಪ್ಪಳ ಜಿಲ್ಲೆಯಿಂದ ಗುಲಬರ್ಗಾಕ್ಕೆ ಪ್ರಯಾಣಿಸುವ ಬಸ್ ಟಿಕೇಟ್‌ನ್ನು ಕಡ್ಡಾಯವಾಗಿ ನೀಡಬೇಕು. ಕ್ರೀಡಾಕೂಟ ಮುಗಿದ ನಂತರ ಇಲಾಖಾ ತಂಡದ ವ್ಯವಸ್ಥಾಪಕರು ಪ್ರಯಾಣ ಭತ್ಯೆ ನೀಡುವರು. ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ದೂರವಾಣಿ ಸಂಖ್ಯೆ : ೦೮೫೩೯-೨೦೧೪೦೦ ಸಂಪರ್ಕಿಸಬಹುದಾಗಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. 

Advertisement

0 comments:

Post a Comment

 
Top