PLEASE LOGIN TO KANNADANET.COM FOR REGULAR NEWS-UPDATES

 ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಇತ್ತೀಚಿಗೆ ಜರುಗಿದ ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟದ ಮಹಿಳೆಯರ ಮತ್ತು ಪುರುಷರ ವಿಭಾಗದ ಫಲಿತಾಂಶದ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಮಹಿಳೆಯರ ವಿಭಾಗದಲ್ಲಿ, ೧೦೦ ಮೀ. ಓಟ ಸ್ಪರ್ಧೆ-ಕೊಪ್ಪಳದ ಶರಣಮ್ಮ ಪ್ರಥಮ, ಗಂಗಾವತಿಯ ಕಾವ್ಯ ದ್ವೀತಿಯ ಸ್ಥಾನ ಪಡೆದಿದ್ದಾರೆ. ೨೦೦ ಮೀ. ಓಟ ಸ್ಪರ್ಧೆ- ದೀಪಾ ಬಿ. ಕೊಪ್ಪಳ ಪ್ರಥಮ, ಹುಲಿಗೆಮ್ಮ ಗಂಗಾವತಿ-ದ್ವೀತಿಯ. ೪೦೦ ಮೀ. ಕಾವ್ಯ ಬಿ.-ಪ್ರಥಮ, ಶರಣಮ್ಮ ಕೊಪ್ಪಳ-ದ್ವೀತಿಯ. ೮೦೦ ಮೀ. ರೇಖಾ-ಪ್ರಥಮ, ಕಾವ್ಯ-ದ್ವೀತಿಯ. ೧೫೦೦ ಮೀ. ಸಂಗೀತ ಈರಪ್ಪ-ಪ್ರಥಮ, ರಾಜೇಶ್ವರಿ ಶೇಖರಗೌಡ-ದ್ವೀತಿಯ. ೩೦೦೦ ಮೀ. ಶಶಿಕಲಾ-ಪ್ರಥಮ, ಸಿಂದೂ ಮಾಲತೇಶ-ದ್ವೀತಿಯ.  ಉದ್ದ ಜಿಗಿತ ಸ್ಪರ್ಧೆಯಲ್ಲಿ ಸೌಮ್ಯಶ್ರೀ-ಪ್ರಥಮ, ಚೈತ್ರಾ ಬಡಿಗೇರ-ದ್ವೀತಿಯ. ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾರ್ಗವಿ-ಪ್ರಥಮ, ಮಲ್ಲಮ್ಮ-ದ್ವೀತಿಯ. ತ್ರಿವಿಧ ಜಿಗಿತದಲ್ಲಿ ಭಾರ್ಗವಿ-ಪ್ರಥಮ, ತಬಸಮ್-ದ್ವೀತಿಯ. ಗುಂಡು ಎಸೆತದಲ್ಲಿ ದೀಪಾ ಬಿ.-ಪ್ರಥಮ, ಜ್ಯೋತಿ-ದ್ವೀತಿಯ. ಭಲ್ಲೆ ಎಸೆತ ಸುಜಾತ ಗಂಗಾವತಿ-ಪ್ರಥಮ, ಮೇಘಾ ಎಸ್.- ದ್ವೀತಿಯ. ಚಕ್ರ ಎಸೆತದಲ್ಲಿ ಜ್ಯೋತಿ-ಪ್ರಥಮ, ದೀಪಾ ಬಿ.-ದ್ವೀತಿಯ. ೪*೧೦೦ ಹಾಗೂ ೪*೪೦೦ ಮೀ.ನಲ್ಲಿ ಸಂಗೀತಾ ತಂಡ ಕೊಪ್ಪಳ ಪ್ರಥಮ. ಕಬಡ್ಡಿಯಲ್ಲಿ  ಗಂಗಾವತಿ ತಂಡ-ಪ್ರಥಮ, ಖೋ ಖೋ ದಲ್ಲಿ  ಕುಷ್ಟಗಿ ತಂಡ-ಪ್ರಥಮ. ವ್ಹಾಲಿಬಾಲ್‌ನಲ್ಲಿ ಕೊಪ್ಪಳ ತಂಡ-ಪ್ರಥಮ. ಹ್ಯಾಂಡಬಾಲ್‌ನಲ್ಲಿ ಕುಷ್ಟಗಿ ತಂಡ- ಪ್ರಥಮ. ಬಾಸ್ಕೇಟ್‌ಬಾಲ್ ಹಾಗೂ ಹಾಕಿಯಲ್ಲಿ ಕೊಪ್ಪಳ ತಂಡ-ಪ್ರಥಮ.  ಶೆಟಲ್ ಬ್ಯಾಡ್ಮಿಂಟನ್ ಪ್ರತಿಭಾ ಪಲ್ಲೇದ್-ಪ್ರಥಮ. ಬಾಲ್ ಬ್ಯಾಡ್ಮಿಂಟನ್ ಸುಜಾತಾ ಯಲಬುರ್ಗಾ-ಪ್ರಥಮ. ಥ್ರೋಬಾಲ್ ಗಂಗಾವತಿ ತಂಡ ಪ್ರಥಮ. ಟೇಬಲ್ ಟೆನಿಸ್‌ನಲ್ಲಿ ಪೂರ್ಣಿಮಾ ಹಾಗೂ ಸಂಗಡಿಗರು ಪ್ರಥಮ ಸ್ಥಾನ ಪಡೆದಿದ್ದಾರೆ.
  ಪುರುಷರ ವಿಭಾಗದಲ್ಲಿ ೧೦೦ ಮೀ. ಓಟದ ಸ್ಪರ್ಧೆಯಲ್ಲಿ ರಾಘವೇಂದ್ರ ಎನ್.ಗಂಗಾವತಿ-ಪ್ರಥಮ, ವೆಂಕಟೇಶ ಕೆಂಗೇರಿ ಕೊಪ್ಪಳ-ದ್ವೀತಿಯ. ೨೦೦ ಮೀ. ರಾಘವೇಂದ್ರ ಎಂ.-ಪ್ರಥಮ, ವೆಂಕಟೇಶ ಕೆಂಗೇರಿ-ದ್ವೀತಿಯ. ೪೦೦ ಮೀ. ಮಹೇಶ ವಾಲಿಕಾರ-ಪ್ರಥಮ, ರಾಮಣ್ಣ-ದ್ವೀತಿಯ. ೮೦೦ ಮೀ. ಬಾಲಾಜಿ ಯಲಬುರ್ಗಾ-ಪ್ರಥಮ, ನಾಗಪ್ಪ-ದ್ವೀತಿಯ. ೧೫೦೦ ಮೀ. ರಮೇಶ ಅಯ್ಯಣ-ಪ್ರಥಮ, ಅಲ್ಲಿಫೀರ-ದ್ವೀತಿಯ. ೫೦೦೦ ಮೀ. ಮಂಜಪ್ಪ ಕೆ.ಪುರದ್-ಪ್ರಥಮ, ಬಸವರಾಜ ಟಣಕನಕಲ್-ದ್ವೀತಿಯ. ಉದ್ದ ಜಿಗಿತ ಸ್ಪರ್ಧೆಯಲ್ಲಿ ರಾಘವೇಂದ್ರ-ಪ್ರಥಮ, ನಾಗರಾಜ-ದ್ವೀತಿಯ. ಎತ್ತರ ಜಿಗಿತ ಸ್ಪರ್ಧೆಯಲ್ಲಿ ನಟರಾಜ-ಪ್ರಥಮ, ಪ್ರಕಾಶ-ದ್ವೀತಿಯ. ತ್ರಿವಿಧ ಜಿಗಿತದಲ್ಲಿ ರಾಘವೇಂದ್ರ-ಪ್ರಥಮ, ನಾಗರಾಜ-ದ್ವೀತಿಯ. ಗುಂಡು ಎಸೆತದಲ್ಲಿ ಪಂಪಣ್ಣ ಇಂಡಿ-ಪ್ರಥಮ, ಮಂಜುನಾಥ ಕೆ.-ದ್ವೀತಿಯ. ಭಲ್ಲೇ ಎಸೆತ ವಿಠಲ್-ಪ್ರಥಮ, ಮಂಜುನಾಥ-ದ್ವೀತಿಯ. ಚಕ್ರ ಎಸೆತದಲ್ಲಿ ಪಂಪಣ್ಣ ಇಂಡಿ-ಪ್ರಥಮ, ಸತೀಶ-ದ್ವೀತಿಯ. ೪*೧೦೦ ಮೀ.ನಲ್ಲಿ ರಾಘವೇಂದ್ರ ತಂಡ ಗಂಗಾವತಿ ಪ್ರಥಮ. ೪*೪೦೦ ಮೀ.ನಲ್ಲಿ ಮಂಜಪ್ಪ ತಂಡ ಕೊಪ್ಪಳ-ಪ್ರಥಮ. ಕಬಡ್ಡಿಯಲ್ಲಿ ಮುತ್ತುರಾಜ ತಂಡ ಕೊಪ್ಪಳ-ಪ್ರಥಮ. ವ್ಹಾಲಿಬಾಲ್ ಹಾಗೂ ಹಾಕಿಯಲ್ಲಿ   ಕೊಪ್ಪಳ ತಂಡ-ಪ್ರಥಮ. ಹ್ಯಾಂಡಬಾಲ್, ಬಾಸ್ಕೇಟ್‌ಬಾಲ್‌ನಲ್ಲಿ ಕುಷ್ಟಗಿ ತಂಡ-ಪ್ರಥಮ.  ಖೋ ಖೋ, ಪುಟ್‌ಬಾಲ್, ಶೆಟಲ್ ಬ್ಯಾಡ್ಮಿಂಟನ್, ಥ್ರೋಬಾಲ್‌ನಲ್ಲಿ ಗಂಗಾವತಿ ತಂಡ-ಪ್ರಥಮ, ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಐ.ಎಸ್.ಬೊಮ್ಮನಾಳ ತಂಡ ಕೊಪ್ಪಳ-ಪ್ರಥಮ, ಟೇಬಲ್ ಟೆನಿಸ್‌ನಲ್ಲಿ  ಶಶೀ ಪುರಂದರ ಹಾಗೂ ಶಿವರಾಜ ಹೆಚ್. ತಂಡ ಪ್ರಥಮ.  ೧೧೦ ಹರ್ಡಲ್ಸ್‌ನಲ್ಲಿ ಮುನೀರಪಾಷ ಕುಷ್ಟಗಿ-ಪ್ರಥಮ, ಶಿವರಾಜ್ ಯಲಬುರ್ಗಾ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೈ. ಸುದರ್ಶನ್   ತಿಳಿಸಿದ್ದಾರೆ. 

Advertisement

0 comments:

Post a Comment

 
Top