ಕೊಪ್ಪಳ ಅ. ೩೦, ದಿನಾಂಕ ೨೯-೦೮-೨೦೧೩ ರಂದು ಜಿಲ್ಲಾ ಮಕ್ಕಳ ಸಂರಕ್ಷಣಾ ಯೋಜನೆ ಅಡಿಯಲ್ಲಿ ಕೊಪ್ಪಳ ತಾಲೂಕಿನ ಸರಕಾರಿ ಹಿರಿಯಪ್ರಾಥಮಿಕ ಶಾಲೆ ಬೂದಗುಂಪ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರಹಳ್ಳಿ ಶಾಲಾ ಮಕ್ಕಳಿಗೆ ಮುನಿರಾಬಾದ್ ಪೊಲೀಸ ಠಾಣಯಲ್ಲಿ vತೆರೆದ ಮನೆ ಕಾರ್ಯಕ್ರಮ ಆಯೋಜಿಸಲಾಗಿತ್ತು .
ಈ ಕಾರ್ಯಕ್ರಮದ ಕುರಿತು ಪೋಲೀಸ್ ಸಬ್ ಇನ್ಸಪೆಕ್ಟರ್ ವಿಶ್ವನಾಥ ಹಿರೇಗೌಡರ್ ಮಾತನಾಡಿ, ಮಕ್ಕಳಿಗೆ ವಾಕಿ ಟಾಕಿ, ರೈಪಲ್, ಕರ್ತವ್ಯ ಪಾಲನೆ ಬಗ್ಗೆ ಎಂ.ಓ.ಬಿ ಭಾವ ಚಿತ್ರ, ಯಾವ ಹುದ್ದೆಗೆ ಪೊಲೀಸರಿಗೆ ಯಾವ ಸ್ಟಾರ ಚಿನ್ಹೆ ಇರುತ್ತದೆ ಎನ್ನುವುದರ ಬಗ್ಗೆ ಮಾಹಿತಿ ನೀಡಿದರು.
ಎ.ಎಸ್.ಐ ಆದ ಪ್ರಹ್ಲಾದ ಆಚಾರ್ಯ ಕಾರ್ಯಕ್ರಮದ ಕುರಿತು ಮಕ್ಕಳಿಗೆ ಸುದೀರ್ಘ ಮಾಹಿತಿ ನೀ
ಡಿ, ಮಕ್ಕಳಿಗೆ ಹಕ್ಕುಗಳ ಬಗ್ಗೆ ಸ ವಿಸ್ತಾರವಾಗಿ ತಿಳಿ ಹೇಳಿದರು, ಜೊತೆಗೆ ಮಕ್ಕಳಿಗಾಗಿ ಇರುವಂತಹ ವಿಶೇಷ ಕಾನೂನು ಮತ್ತು ರಕ್ಷಣೆಯ ಆಯಾಮಗಳ ಬಗ್ಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಎ.ಎಸ್.ಐ ಹೊನ್ನಪ್ಪ, ಕಂಪ್ಯೂಟರ ಆಫರೇಟರ್ ಮಾರುತಿ, ಪೋಲಿಸ್ ಕಾನ್ಸಟೇಬಲ್ ರಾಮಣ್ಣ, ಶಾಲಾ ಮಕ್ಕಳು, ಬೂದಗುಂಫಾ ಗ್ರಾಮ ಪಂಚಾಯತಿ ಯುನಿಸೆಫ್‌ನ ಸಮುದಾಯ ಸಂಘಟಕರಾದ ಮಂಜುನಾಥ ಡಿ. ಗುಳದಳ್ಳಿ ಗ್ರಾಮ ಪಂಚಾಯತಿಯ ಸುರೇಶ ಕುಷ್ಟಗಿ ಉಪಸ್ಥಿತರಿದ್ದರು,
0 comments:
Post a Comment