ಕೊಪ್ಪಳ, ೩೦- ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ದಶಮನೋತ್ಸವದ ಅಂಗವಾಗಿ ಬರುವ ವರ್ಷ ೨೦೧೪ ಎಪ್ರೀಓಲ್ ೧೩, ೧೪ ಮತ್ತು ೧೫ ರಂದು ಕೋಟಿ ಗ್ರಾಯತ್ರಿ ಜಪಯಜ್ಞ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮುಖಂಡ ಮಂಜುನಾಥ ಹಳ್ಳಿಕೇರಿ ಹೇಳಿದರು.
ಅವರು ಗುರುವಾರ ರಾತ್ರಿ ಯಾಜ್ಞವಲ್ಕ್ಯ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಶ್ರೀ ಕೃಷ್ಣಾಷ್ಠಮಿ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡುತ್ತಿದ್ದರು.
ಲೋಕ ಕಲ್ಯಾಣಾರ್ಥವಾಗಿ ಕಾರ್ಯಕ್ರಮ ಹಮ್ಮಿಕೊಂಡಿ ಕೋಟಿ ಗಾಯತ್ರಿ ಜಪಯಜ್ಞ, ಹೋಮ, ಹವಾನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು ಅದರ ಯಶಸ್ವಿಗೆ ಎಲ್ಲರೂ ಶ್ರಮಿಸೋಣ ಎಂದರು.
ಸನ್ಮಾನ : ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಮಹೇಂದ್ರ ಮೋಚ್ರಾ ಹಾಗೂ ಕೃಷ್ಣಾಷ್ಠಮಿ ಯಶಸ್ವಿಗೆ ಶ್ರಮಿಸಿದ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮುನ್ನ ಪಲ್ಲಕ್ಕಿ ಉತ್ಸವ, ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ, ಮಕ್ಕಳಿಂದ ಗೋಪಾಲಕಾವಲ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಚಿಕ್ಕ ಮಕ್ಕಳಿಂದ ಶ್ರೀ ಕೃಷ್ಣ ವೇಷ ಭೂಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ರಮೇಶ ಜಹಗಿರದಾರ ವಹಿಸಿದ್ದರು. ವೇ.ಮೂ.ಕೊಪ್ರೇಶಾಚಾರ್ಯ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ರಮೇಶ ಹುನುಗುಂದ ಎಲ್ಲರನ್ನು ಸ್ವಾಗಿತಿಸಿದರು. ವೇಣುಗೋಪಾಲ ಜಹಗಿರದಾರ ನಿರೂಪಿಸಿದರು. ಕೊನೆಯಲ್ಲಿ ರಾಜೇಂದ್ರ ಬಿಸರಳ್ಳಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಕುಸುಮ ಶಾಸ್ತ್ರೀ ನಡೆಸಿಕೊಟ್ಟರು.
0 comments:
Post a Comment