PLEASE LOGIN TO KANNADANET.COM FOR REGULAR NEWS-UPDATES

ದಿನಾಂಕ ೨೯.೦೮.೨೦೧೩ರಂದು ಎ ಐ ಡಿ ವೈ ಓ ದ ಪ್ರಥಮ ಜಿಲ್ಲಾ ಸಮ್ಮೇಳನ ನಗರದ ವಾಲ್ಮೀಕಿಭವನ ನಡೆಯಿತು.  ಸಮ್ಮೇಳನದ ಉದ್ಘಾಟನೆಯನ್ನು ಮಾಡಿದ ಜಿಲ್ಲೆಯ ಪ್ರಗತಿಪರ ಚಿಂತಕರಾದ   ಅಲ್ಲಮಪ್ರಭು ಬೆಟ್ಟದೂರುರವರು ಮಾತನಾಡುತ್ತಾ  ಇಂದು ಯುವಜನರ ಮನಸ್ಸನ್ನು ಚಂಚಲಗೊಳಿಸಲು ಹಲವು ಬಗೆಯ ದಾಳಿಗಳು ಇಂಟರ್ನೆಟ್ ಮುಖಾಂತರ, ಸಿನಿಮಾ ಇನ್ನಿತರ ಮಾಧ್ಯಮಗಳ ಮುಖಾಂತರ ನಡೆಯುತ್ತಿವೆ. ಆದರೆ ಚರಿತ್ರೆಯನ್ನು ಅವಲೋಕಿಸಿದಾಗ ಪ್ರಪಂಚಾದ್ಯಂತ ಕ್ರಾಂತಿಕಾರಿ ಹೋರಾಟವನ್ನು ಮುಂದುವರೆಸಿಕೊಂಡು ಹೋಗಿರುವುದು ಯುವಜನತೆ. ಜಿಲ್ಲೆಯಲ್ಲಿ ಈ ಹಿಂದೆ ನಡೆದ ಕುದುರೆಮೋತಿ ಪ್ರಕರಣದ ವಿರುದ್ಧ ನಡೆದ ಹೋರಾಟದಿಂದ ಹಿಡಿದು ಜೆಪಿ ಚಳುವಳಿ, ತುರ್ತು ಪರಿಸ್ಥಿತಿಯ ವಿರುದ್ಧ ಚಳುವಳಿ, ಇತ್ತೀಚಿನ ಭ್ರಷ್ಟಾಚಾರದ ವಿರುದ್ಧದ ಚಳುವಳಿ, ದೆಹಲಿ ಅತ್ಯಾಚಾರ ಘಟನೆ ಖಂಡಿಸಿ ನಡೆದ ಚಳುವಳಿಯವರೆಗೆ ಮುಂಚೂಣಿಯಲ್ಲಿರುವುದು ಯುವಜನರೇ.  ಇಂತಹ ಯುವಜನರು ಸಮಕಾಲೀನ ಆಗು ಹೋಗುಗಳನ್ನು ತಿಳಿದುಕೊಂಡು ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುವ ಸಂಘಟನೆಯ ಜೊತೆ ಗುರುತಿಸಿಕೊಳ್ಳಬೇಕು. ಜೊತೆ ಜೊತೆಗೆ ಧಾರ್ಮಿಕ 
ವಿಚಾರದಂತಹ ಭಾವನಾತ್ಮಕ ವಿಷಯವನ್ನು ತಿರುಚಿ ತಮ್ಮ ಬೇಳೆ ಬೇಯಿಸಲೆತ್ನಿಸಿಕೊಳ್ಳುವ ಬಲಪಂಥೀಯ  ಸಂಘಟನೆಗಳ ಬಗ್ಗೆ ಹುಷಾರಾಗಿರಬೇಕು ಎಂದರು. ಹೋರಾಟ ಪ್ರಬಲ ಅಸ್ತ್ರ.  ಹೋರಾಟವಿಲ್ಲದೇ ಯಾವುದೂ ಇಲ್ಲ ಎಂದ ಅವರು ಮಾನವೀಯತೆಯನ್ನು ಸಾರುವ ತಮ್ಮ ಕವನದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಎ ಐ ಡಿ ವೈ ಓ ನ ರಾಜ್ಯ ಉಪಾಧ್ಯಕ್ಷರಾದ ಶರಣಪ್ಪ ಉದ್ಭಾಳ್‌ರವರು ಮಾತನಾಡಿ - ಎ ಐ ಡಿ ವೈ ಓ ಕಳೆದ ೩ ದಶಕಗಳಿಂದ ರಾಜ್ಯದಲ್ಲಿಯುವ ಜನ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ನಿರುದ್ಯೋಗ, ಭ್ರಷ್ಟಾಚಾರ, ಮೂಢನಂಬಿಕೆ, ಕುಸಂಸ್ಕೃತಿಯ ಪ್ರಚಾರ ಮುಂತಾದ ಸಮಸ್ಯೆಗಳ ವಿರುದ್ಧ ಯುವಜನರಲ್ಲಿ ಜಾಗೃತಿ ಮೂ


ಡಿಸುವ ಕಾರ್ಯದಲ್ಲಿ ತೊಡಗಿದೆ.ಜೊತೆಗೆಡಿಎಡ್ ವಿದ್ಯಾರ್ಥಿಗಳ ಹೋರಾಟ, ಆನ್‌ಲೈನ್ ಲಾಟರಿ ನಿಷೇದ, ಚಿತ್ರಕಲೆ-ಸಂಗೀತ ಶಿಕ್ಷಕರ ನೇಮಕಾತಿಗಾಗಿ, ಆಶ್ಲೀಲ ಸಿನಿಮಾ-ಸಾಹಿತ್ಯ ಮತ್ತು ಮಧ್ಯಪಾನ ನಿಷೇದಕ್ಕಾಗಿ ಒತ್ತಾಯಿಸಿ ಹಲವು ಯಶಸ್ವಿ ಹೋರಾಟಗಳನ್ನು ಕಟ್ಟಿದೆ.  ಇನ್ನೊಂದೆಡೆ ಉನ್ನತ ನೀತಿ-ನೈತಿಕತೆ-ಸಂಸ್ಕೃತಿಯ ಆಧಾರದಲ್ಲಿ ಸಾಹಿತ್ಯಿಕ-ಸಾಂಸ್ಕೃತಿಕ-ವೈಚಾರಿಕ ಕಾರ್ಯಕ್ರಮಗಳನ್ನು, ಬೀದಿ ನಾಟಕಗಳನ್ನು, ಸಾಂಸ್ಕೃತಿಕ ಜನೋತ್ಸವಗಳನ್ನು, ಯುವಜನ ಶಿಬಿರ ಮುಂತಾದ ಕಾರ್ಯಕ್ರಮಗಳ ಮೂಲಕವೂ ಯುವಜನರನ್ನು ಸಂಘಟಿಸುತ್ತಿದೆ. ಜೊತೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮಜೀವನವನ್ನೇ ಸಮರ್ಪಿಸಿದ ಕ್ರಾಂತಿಕಾರಿಗಳಾದ ನೇತಾಜಿ, ಭಗತ್ ಸಿಂಗ್, ಆಜಾದ್, ಖುದಿರಾಂ ಬೋಸ್, ಪ್ರೀತಿಲತಾ ವದ್ದೆದಾರ್, ಅಶ್ವಕುಲ್ಲಾಖಾನ್‌ಮುಂತಾದ ಕ್ರಾಂತಿಕಾರಿಗಳ ಆದರ್ಶವನ್ನುಎತ್ತಿ ಹಿಡಿದು ಯುವಜನರಲ್ಲಿ ಹೋರಾಟದ ಮನೋಭಾವವನ್ನು ಉದ್ದೀಪನಗೊಳಿಸಲು ಪ್ರಯತ್ನಿಸುತ್ತಿದೆ. ಜಿಲ್ಲೆಯ ಯುವಜನರನ್ನು ಸಂಘಟಿಸಿ, ವೈಚಾರಿಕವಾಗಿ ಸಜ್ಜುಗೊಳಿಸಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನಾತ್ಮಕವಾಗಿಯೂ ಸಜ್ಜಾಗಿ ತಮ್ಮ ಕಾರ್ಯವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಲು ಈ ಸಮ್ಮೇಳನ ತುಂಬಾ ಅವಶ್ಯಕ.  ಈ ದಿಸೆಯಲ್ಲಿ ಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಬೇಕೆಂದು ಕರೆಯಿತ್ತರು.  ಸಮ್ಮೇಳನದಲ್ಲಿ - ಮುಖ್ಯಗೊತ್ತುವಳಿ, ಸಂಘಟನಾತ್ಮಕ ವರದಿ ಮುಂತಾದ ಗೊತ್ತುವಳಿಗಳನ್ನು ಮಂಡಿಸಿ ಚರ್ಚಿಸಲಾಯಿತು.  ನಂತರ ಹೊಸ ಸಮಿತಿಯನ್ನು ಚುನಾಯಿಸಲಾಯಿತು, ಮಾರುತಿ ಹೊಸಮನಿ ಅಧ್ಯಕ್ಷರಾಗಿ, ರಮೇಶ್ ವಂಕಲಕುಂಟಿ ಜಿಲ್ಲಾ ಕಾರ್ಯದರ್ಶಿಯಾಗಿ, ಶಿವು, ದೇವೆಂದ್ರಪ್ಪ, ರಾಘವೇಂದ್ರ, ಚಂದ್ರು, ಮಂಜುನಾಥ್ ಇವರು ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಆಯ್ಕೆಯಾದರು.  ಅಲ್ಲದೆ ೧೨ ಜನರ ಕೌನ್ಸಿಲ್ ಸದಸ್ಯರನ್ನು ಕೂಡ ಈ ಸಂದರ್ಭದಲ್ಲಿ ಚುನಾಯಿಸಲಾಯಿತು.
ಹೊಸ ಕಾರ್ಯಕ್ರಮಗಳನ್ನು ಸಂಘಟಿಸುವ ನಿರ್ಣಯದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Advertisement

0 comments:

Post a Comment

 
Top