PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಅಗಷ್ಟ ೨೫: ಇತ್ತಿಚೆಗೆ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜ ಇರಕಲ್‌ಗಡಾದಲ್ಲಿ ಪ್ರಥಮ ವರ್ಷದ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಪ್ರತಿಬಾ ಪುರಷ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕತೆಯನ್ನು ಎ.ಜಿ. ಶರಣಪ್ಪ ಪ್ರಾಚಾರ್ಯರು ವಹಿಸಿದ್ದರು, ಉದ್ಘಾಟನೆಯನ್ನು ಸಂಗಮೇಶ ಬಾದವಾಡಗಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ನೆರವೇರಿಸಿದರು. ಅತಿಥಿ ಉಪನ್ಯಾಸಕರಾಗಿ ಶಿವಾನಂದ ಮೇಟಿ ಉಪನ್ಯಾಸಕರು ಕೆ.ಎಲ್.ಇ ಕಾಲೇಜ್ ಗಂಗಾವತಿ ಇವರು ವಿದ್ಯಾರ್ಥಿಗಳನ್ನು ಕುರಿತು ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಲು ಅನೇಕ ದೃಷ್ಠಾಂತಗಳ ಮೂಲಕ ಉಪನ್ಯಾಸ ನೀಡಿದರು. 
ಈ ಕಾರ್ಯಕ್ರಮದಲ್ಲಿ ವೀರಬಸಪ್ಪ ಪಟ್ಟಣಶೆಟ್ಟಿ ಶಿಕ್ಷಣ ಪ್ರೇಮಿಗಳು ಆದ ಇವರು ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪುರಸ್ಕಾರಗಳನ್ನು ನೀಡಿ ಗೌರವಿಸಿದರು. ವೇದಿಕೆಯ ಮೇಲೆ ಹೆಚ್. ಎಂ. ಗುಡಿಹಿಂದಿನ ಪ್ರಾಚಾರ್ಯರು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ರಾಮಚಂದ್ರಪ್ಪ ದೇಸಾಯಿ ಮತ್ತು ನಿರ್ಮಲಾ ಕಲ್ಲೂರಮಠ ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಕು. ಲಕ್ಷ್ಮೀ ಹಾಡಿದರು, ಸ್ವಾಗತವನ್ನು ಕು. ಬಸಯ್ಯ ಓಲೆಮಠ ನೆರವೇರಿಸಿದರು. ಪ್ರಸ್ತಾವಿಕ ನುಡಿಗಳನ್ನು ಆರ್.ಎಸ್. ಸರಗಣಾಚಾರ ಉಪನ್ಯಾಸಕರು ನೆರವೇರಿಸಿದರು, ವಂದನಾರ್ಪಣೆಯನ್ನು ಕು. ಮರಿಯಮ್ಮ ಮಾಡಿದರು. ನಿರೂಪಣೆಯನ್ನು ಕು. ನಾಗರತ್ನಾ ಕೆ. ನೆರವೆರಿಸಿದರು.  

Advertisement

0 comments:

Post a Comment

 
Top