ಕೊಪ್ಪಳ : ಸಿಂಧನೂರಿನ ಪ್ರತಿಷ್ಠಿತ ರಾಜಕಾರಣಿಯ ಭೂ ಹಗರಣ ಕುರಿತು ತನಿಖೆಗೆ ಆಗ್ರಹಿಸಿ ಸಿಂಧನೂರಿಗೆ ಆಗಮಿಸುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಘೇರಾವು ಹಾಕುವ ಹಿನ್ನೆಲೆಯಲ್ಲಿ ಸಿಪಿಐಎಂಎಲ್ ರೆಡ್ ಪ್ಲಾಗ್‌ನ ಮುಖಂಡರಾದ ಆರ್.ಮಾನಸಯ್ಯ ಹಾಗೂ ಡಿ.ಎಚ್.ಪೂಜಾರ ಇವರನ್ನು ಶನಿವಾರ ರಾತ್ರಿ ಬಂಧಿಸಿರುವುದು ಖಂಡನೀಯ ಎಂದು ಸಂಘಟನೆಯ ಮುಖಂಡ ಜೆ.ಭಾರದ್ವಾಜ ಹೇಳಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಎಲ್ಲರಿಗೂ ಸಮಾನ ನ್ಯಾಯ ಸಿಗಲಿ ಎನ್ನುವ ಉದ್ದೇಶದಿಂದ ಹೋರಾಡುವ ಹೋರಾಟಗಾರರು ಯಾವ ಕಾರಣಕ್ಕೆ ಘೇರಾವಿಗೆ ಮುಂದಾಗಿದ್ದಾರೆ ಎಂಬುದನ್ನು ಸಮಾಧಾನಚಿತ್ತದಿಂದ ಕೇಳಿ ಅದಕ್ಕೆ ಪರಿಹಾರ ನೀಡುವ ಬದಲು ಕಾರ್ಯಕ್ರಮಕ್ಕೆ ತೊಂದರೆಯಾದೀತು ಎನ್ನುವ ಭಯದಿಂದ ಅವರನ್ನು ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಈ ರೀತಿಯ ಸರ್ವಾಧಿಕಾರಿ ಕ್ರಮ ಆಕ್ಷೇಪಾರ್ಹ. ಮುಖ್ಯಮಂತ್ರಿ ಕೇವಲ ತಮ್ಮ ಪಕ್ಷದ ಮಾತನ್ನಷ್ಟೇ ಕೇಳುವಂತಿರಬಾರದು. ಅವರೊಬ್ಬ ಜನರ ಮುಖಂಡ ಎನ್ನುವುದನ್ನು ನೆನಪಲ್ಲಿಟ್ಟುಕೊಂಡಿರಬೇಕು. ಮೊದಲು ಜನರ ಸಮಸ್ಯೆ ಏನು ಅದಕ್ಕೆ ಪರಿಹಾರ ಕಂಡುಕೊಳ್ಳುವ ಬಗೆ ಹೇಗೆ ಎಂಬುದರತ್ತ ಗಮನ ಹರಿಸಬೇಕು. ಏಕಾಏಕಿ ಹೋರಾಟಗಾರರನ್ನು ಬಂಧಿಸುವ ಪ್ರವೃತ್ತಿ ಒಳ್ಳೇದಲ್ಲ. ಬಂಧಿಸಿರುವ ಸಂಘಟನೆಯ ಮುಖಂಡರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಸರಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟದ ಹಾದಿ ಅನಿವಾರ್ಯ ಎಂದು ಅವರು ಎಚ್ಚರಿಸಿದರು.
ಪಿಯುಸಿಎಲ್‌ನ ಜಿಲ್ಲಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ, ದೆಹಲಿ ಮತ್ತು ಬೆಂಗಳೂರಿನ ವಿದ್ಯಾರ್ಥಿನಿಯರ ಮೇಲೆ ನಡೆದ ಭೀಕರ ಅತ್ಯಾಚಾರ ಪ್ರಕರಣಗಳು ಜನಮಾನಸದಿಂದ ಮಾಸುವ ಮುನ್ನವೇ ಮುಂಬಯಿಯಲ್ಲಿ ಪತ್ರಿಕಾ ಛಾಯಾಗ್ರಾಹಕಿಯ ಮೇಲೆ ದುರುಳರು ಅತ್ಯಾಚಾರ ನಡೆಸಿರುವ ಕ್ರೂರ ಘಟನೆ ಖಂಡನೀಯ ಎಂದರು.
ಇದು ನಮ್ಮಲ್ಲಿರುವ ಕಾಯ್ದೆ ಮತ್ತು ಸರಕಾರಗಳ ಸಡಿಲುತನಕ್ಕೆ ಸಾಕ್ಷಿಯಾಗಿದೆ. ಇಂಥ ಘಟನೆಗಳು ಮರುಕಳಿಸಬಾರದು ಎಂದು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾಯ್ದೆಯನ್ನು ಜಾರಿಗೊಳಿಸಬೇಕು ಹಾಗೂ ಸರಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರತಿನಿಧಿಗಳಿರುವ ರಕ್ಷಣೆ ಪ್ರಜೆಗಳಿಗೆ ಇಲ್ಲದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಗತಿಪರ ಮಹಿಳಾ ಸಂಘದ ಅಧ್ಯಕ್ಷೆ ಶಾಂತಕುಮಾರಿ, ಕ್ರಾಂತಿಕಾರಿ ಯುವಜನಸೇವಾ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ, ಕೆಂಚನಗೌಡ ಮತ್ತಿತರರು ಇದ್ದರು.

0 comments:
Post a Comment