ಇತ್ತಿಚಿಗೆ ನಡೆದ ಕೊಪ್ಪಳ ತಾಲೂಕಿನ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಕಛೇರಿಯಲ್ಲಿ ಮಹಿಳಾ ಜ್ಞಾನ ವಿಕಾಸ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಹೈದ್ರಾಬಾದ ಕರ್ನಾಟಕ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೆಶಕರಾದ ಕೆ.ಬೂದಪ್ಪಗೌಡರವರು ಉದ್ಘಾಟಿಸಿ ಮಹಿಳೆಯು ಮತ್ತು ಕುಟುಂಬದ ಸರ್ವೊತೊಮುಖದ ಅಭಿವೃ
ದ್ದಿ ಪೂರಕವಾಗಿರುವಂತ ಮಾಹಿತಿ ಕಾರ್ಯಕ್ರಮವನ್ನು ಜ್ಞಾನ ವಿಕಾಸ ಕೆಂದ್ರಗಳಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಗ್ರಾಮಾಭಿವೃದ್ದಿಯ ಕೊಪ್ಪಳ ಜಿಲ್ಲಾ ನಿರ್ದೇಶಕರಾದ ಶಿವರಾಯಫ್ರಬು, ಕೊಪ್ಪಳ ತಾಲೂಕಿನ ಯೋಜನಾಧಿಕಾರಿಗಳಾದ ಧರಣಪ್ಪ ಮುಲ್ಯೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಧರ್ಮಸ್ಥಳ ಮುಖ್ಯ ಸಮನ್ವಯ ಅಧಿಕಾರಿಗಳಾದ ಕು.ಧರಣಿ ಹಾಗೂ ಪ್ರಾದೇಶಿಕ ಕಛೆರಿಯ ಜ್ಞಾನ ವಿಕಾಸ ಮ್ಯಾನೇಜರ ಆದ ಕು.ವೈಷ್ಣವಿ ರಡ್ಡಿ ಹಾಜರಿದ್ದರು. ಕೊಪ್ಪಳ ತಾಲೂಕಿನ ಸಮನ್ವಯ ಅಧಿಕಾರಿಯಾದ ಶ್ರೀಮತಿ ಸುಮಾವತಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಸೇವಾ ಪ್ರತಿನಿಧಿಯಾದ ಶ್ರೀಮತಿ ರೇಣುಕಾರವರು ಕಾರ್ಯಕ್ರಮದ ಸ್ವಾಗತವನ್ನು ಕೋರಿದರು ಮತ್ತು ಸೇವಾಪ್ರತಿನಿಧಿಗಳಾದ ಪ್ರಭಾವತಿ ಕಾರ್ಯಕ್ರಮಕ್ಕೆ ವಂಧಿಸಿದರು. ಒಟ್ಟು ಕೊಪ್ಪಳ ತಾಲೂಕಿನ ೨೫ ಮಹಿಳಾ ಜ್ಞಾನ ವಿಕಾಸ ಸಂಯೋಜಕಿಯರು ಮಾಹಿತಿ ಮಾರ್ಗದರ್ಶನವನ್ನು ಪಡೆದರು.
0 comments:
Post a Comment