ಆದಿ ಬಣಜಿಗ ಜನಾಂಗವನ್ನು ಪ್ರವರ್ಗ ೨ ಎ ಮೀಸಲಾತಿಗೆ ಸೇರಿಸಲು ಸರ್ಕಾರಕ್ಕೆ ಬಣಜಿಗರ ಸಂಘ ಒತ್ತಾಯ
ಕೊಪ್ಪಳ : ೩೦, ಕರ್ನಾಟಕ ರಾಜ್ಯದಲ್ಲಿ ಸುಮಾರು ೩೨ ಲಕ್ಷಕ್ಕೂ ಹೆಚ್ಚು ಆದಿಬಣಜಿಗ ಲಿಂಗಾಯತ ಜನಸಂಖ್ಯೆ ಹೊಂದಿದ್ದು ಅತ್ಯಂತ ಹಿಂದುಳಿದ ಜನಾಂಗವಾಗಿದ್ದು, ಶಿಕ್ಷಣ, ಆರ್ಥಿಕ, ಸಾಮಾಜಿಕ ಔದ್ಯೋಗಿಕ, ರಾಜಕೀಯ ರಂಗಗಳಲ್ಲಿ ಅತ್ಯಂತ ಹಿಂದುಳಿದ ಆದಿಬಣಜಿಗ ಪಂಗಡವನ್ನು ಸನ್ಮಾನ್ಯ ಸಿದ್ದರಾಮಯ್ಯ ಸರಕಾರವು ಪ್ರವರ್ಗ ೨ಎ ಮೀಸಲಾತಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂದು ಕೊಪ್ಪಳ ಜಿಲ್ಲಾ ಆದಿಬಣಜಿಗರ ಸಂಘವು ಸರಕಾರಕ್ಕೆ ಒತ್ತಾಯದ ಮನವಿ ಪತ್ರ ಸಲ್ಲಿಸಿತು.
ಜಿಲ್ಲಾ ಆದಿಬಣಜಿಗ ಸಂಘವು ಇಂದು ಕೊಪ್ಪಳ ನಗರಕ್ಕೆ ಆಗಮಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎನ. ಶಂಕರಪ್ಪನವರನ್ನು ನಗರದ ಪ್ರವಸಿ ಮಂದಿರದಲ್ಲಿ ಬೇಟಿ ಮಾಡಿ ಮನವಿ ಪತ್ರ ಅರ್ಪಿಸಿದರು.
ರಾಜ್ಯದ ೩೦ ಜಿಲ್ಲೆಗಳಲ್ಲಿ ನೆಲೆಸಿರುವ ಆದಿಬಣಜಿಗ ಜನಾಂಗ ವಿಶೇಷವಾಗಿ ಬೀದರ ಜಿಲ್ಲೆಯ ಬಸವಕಲ್ಯಾಣದಿಂದ ಕಲರ್ಬುಗಿ ಯಾದಗಿರಿ, ರಾಯಚೂರ, ಬಳ್ಳಾರಿ, ಕೊಪ್ಪಳ, ಗದಗ, ಬಾಗಲಕೋಟಿ, ಬಿಜಾಪೂರ, ಬೆಳಗಾವಿ, ದಾರವಾಡ, ಹಾವೇರಿ, ಮತ್ತು ದಾವಣಗೇರಿ, ಶಿವಮೊಗ್ಗ, ಜಿಲ್ಲೆಗಳ ಕೆಲವು ತಾಲೂಕುಗಳನ್ನೊಳಗೊಂಡ ಉತ್ತರ ಕನ್ನಡದ ಉಳವಿಯ ವರೆಗೆ ದಟ್ಟವಾದ ಜನವಸತಿ ಇದೆ. ೩೨ ಲಕ್ಷಕ್ಕೂ ಅಧಿಕವಾಗಿರುವ ಆದಿಬಣಜಿಗ ಸಮುದಾಯ ಮಹರಾಷ್ಟ್ರದ ಗಡಿ ಭಾಗದಲ್ಲಿ ನೆಲೆಸಿರುವ ಪ್ರಸ್ತುತ ಜನ ಸಮುದಾಯಕ್ಕೆ ಚತುಥರು ಎಂದು ಕರೆಯುತ್ತಾರೆ, ಅದೇ ರೀತಿ ಪೂರ್ವ ಮತ್ತು ಈಶಾನ್ಯ ದಿಕ್ಕಿನ ಆಂದ್ರಪ್ರದೇಶದ ಗಡಿ ಭಾಗದಲ್ಲಿ ಜನತೆಗೆ ವೀರಶೈವ ಆದಿವೀರಶೈವ ಎಂತಲೂ ಕರೆಯುವ ಸಂಪ್ರದಾಯ ರೂಡಿಯಲ್ಲಿದೆ. ಇಂತಹ ವಿಶಿಷ್ಠ ಜನಾಂಗವನ್ನು ಸಮಾಜ ಮತ್ತು ಸರಕಾರ ಅದೇಷ್ಟೋ ಪುಷ್ಠಿ ಕರಿಸಿದೆ ಎಂದರೆ ಇಂದು ಯಾವುದೆ ಸಂದರ್ಭದಲ್ಲಿ ಯಾರೇ ಆಗಲಿ ಲಿಂಗಾಯತ ಪಂಗಡವನ್ನು ಉದಾಹರಿಸಿ ಮಾತನಾಡುವಾಗ ಅಥವಾ ಬರೆಯುವಾಗ ಯಾರೊಬ್ಬರು ವೀರಶೈವದ ಮೂಲ ಪಂಗಡವಾದ ಆದಿಬಣಜಿಗ ಪಂಗಡದ ಹೆಸರನ್ನು ಪ್ರಸ್ತಾಪಿಸುವುದೇ ಇಲ್ಲ, ಇಂತಹ ಐತಿಹಾಸಿಕವಾದ ವಾಸ್ತವಿಕ ಚರಿತ್ರೆಯನ್ನು ಅರಿಯದ ಸರಕಾರದ ಆಡಳಿತಾಂಗ ಆದಿಬಣಜಿಗರನ್ನು ನಿಜಕ್ಕೂ ಅವಜ್ಞೆಗೊಳಪಡಿಸಿದೆ ಎಂದರೆ ಕಂಡಿತ ತಪ್ಪಾಗಲಿಕ್ಕಿಲ್ಲ, ಏಕೆಂದರೆ ಸಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಾದರೂ ಜನಾಂಗವನ್ನು ಗುರುತಿಸಿ ಸಂವಿದಾನಿಕ ಸೌಲಬ್ಯ ಕಲ್ಪಿಸಬಹುದಾದ ಇಚ್ಚಾಶಕ್ತಿ ಸರಕಾರದಿಂದ ಪ್ರಕಟವಾಗಬೇಕಾಗಿತ್ತು ಅದೂ ಆಗಲಿಲ್ಲ. ಈ ಎಲ್ಲಾ ಪ್ರತಿಕೂಲ ಪರಸ್ಥಿತಿಯಿಂದಾಗಿ ಇಂದಿಗೂ ಆದಿಬಣಜಿಗ ಪಂಗಡ ಸರಕಾರದ ಎಲ್ಲಾ ಸೌಲಬ್ಯಗಳಿಂದಲೂ ವಂಚಿತವಾಗಿ ಅಭಿವೃದ್ಧಿಯ ಹಾದಿಯಲ್ಲಿ ೨೫ ವರ್ಷಗಳ ಹಿನ್ನಡೆ ಅನುಭವಿಸುತ್ತಿರುವುದು ವಾಸವಿಕ ಸತ್ಯ.
ಆದಿಬಣಜಿಗ ಪಂಗಡಕ್ಕೆ ೨ಎ ಮಿಸಲಾತಿ ಅಡಿಯಲ್ಲಿ ಹಿಂದುಳಳಿದ ವರ್ಗಕ್ಕೆ ಸೇರಿಸಬೆಕೆನ್ನುವ ನಮ್ಮ ಬೇಡಿಕೆಯನ್ನು ಕಳೆದ ೧೫ ವರ್ಷಗಳಿಂದಲೂ ನಿರಂತರವಾಗಿ ಸರಕಾರಕ್ಕೆ ಮಂಡಿಸುತ್ತಲೆ ಇದ್ದೇವೆ. ಈ ವರೆಗೆ ೭ ಜನ ಮುಖ್ಯ ಮಂತ್ರಿಗಳು ೫ ಜನ ಹಿಂದುಳಿದ ವರ್ಗಗಳ ಆಯೋಗಗಳ ಅಧ್ಯಕ್ಷರುಗಳಿಗೆ ಒಟ್ಟು ೧೬ ಮನವಿ ಪರ್ತಗಳ ಮುಖಾಂತರ ಆದಿ ಬಣಜಿಗ ಜನಾಂಗದ ಸಮಗ್ರ ಮಜಲುಗಳ ಇತಿಹಾಸವನ್ನೆ ತೆರೆದಿಟ್ಟಿದ್ದೆವೆ. ಶಿಕ್ಷಣ, ಆರ್ಥಿಕ, ಸಾಮಾಜಿಕ, ಔದ್ಯೋಗಿಕ, ರಾಜಕೀಯ ರಂಗಗಳಲ್ಲೂ ಅತ್ಯಂತ ಹಿಂದುಳಿದಿರುವಿಕೆಯ ಸಮಗ್ರ ಅಂಕಿ ಸಂಖ್ಯೆಗಳ ಮಾಹಿತಿಯನ್ನು ಮಂಡಿಸಿ ಸರಕಾರದ ಮತ್ತು ಹಿಂದುಳಿದ ವಗರ್ಗಗಳ ಆಯೋಗದ ಗಮನವನ್ನು ಗಂಬಿರವಾಗಿ ಸೆಳೆಯಲಾಗಿದೆ. ಆದರೂ ಸರಕಾರದ ಆಡಳಿತಾಂಗ ಆದಿಬಣಜಿಗರಿಗೆ ಸಾಮಾಜಿಕ ನ್ಯಾಯ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿದೆ.
ಆದಿಬಣಜಿಗ ಜನಾಂಗವನ್ನು ಪ್ರವರ್ಗ ೨ಎಗೆ ಸೇರಿಸಲು ಸರಕಾರವೇ ಅಧಿಕೃತವಾಗಿ ಆಯೋಗ ಒಂದನ್ನು ನೇಮಿಸಿ ಅದರಿಂದ ಪಡೆದ ಸಿಪಾರಸ್ಸು ವರದಿಯನ್ನು ಅನುಷ್ಠಾನಕ್ಕೆ ತಾರದೇ ದುರ್ಬಲ ಜನಾಂಗದಮೇಲೆ ಅನ್ಯಾಯವಾಗಿ ದರ್ಪದ ಸವಾರಿ ಮಾಡುತ್ತಿದೆ. ವೀರಶೈವ ಲಿಂಗಾಯತ ಪಂಗಡಗಳಲ್ಲಿಯೇ ಅತ್ಯಂತ ಪುರಾತನವಾದ ವಿಶಿಷ್ಟವಾದ ಆದಿ ಬಣಜಿಗ ಪಂಗಡದ ಹೆಸರನ್ನು ಇಂದಿಗೂ ಸರಕಾರಿ ಖಾತೆಗೆಜೆಟ್ ನಲ್ಲಿ ಪ್ರಕಗೊಂಡಿರುವುದಿಲ್ಲ, ಇದರಿಂದ ಶಾಲಾ ಕಾಲೇಜು ಪ್ರವಶ ನೌಕರಿ, ರಾಜಕೀಯ, ಸರಕಾರಿ ಸೌಲಭ್ಯ ಪಡೆದುಕೊಳ್ಳುವಲ್ಲಿಯ ತೊಂದರೆಗಳನ್ನು ಕಾನೂನು ತಜ್ಞರು ಬಿಡಿಸಿ ಹೇಳಬೇಕಾಗಿಲ್ಲ, ಪ್ರಸ್ತುತ ಸಂದರ್ಭದಲ್ಲಿ ಎಲ್ಲಾ ರಂಘಗಳಲ್ಲಿಯೂ ಹಿಂದುಳಿದಿರುವ ಆದಿಬಣಜಿಗ ಪಂಗಡವನ್ನು ಪ್ರವರ್ಗ ೨ಎ ಮಿಸಲಾತಿ ಅಡಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿಸುವಂತ ಸಕಾರಾತ್ಮಕವಾದ ಸಿಪಾರಸ್ಸನ್ನು ಮಾಡುವ ಆದೇಶಿಸುವ ಮೂಲಕ ಕೊಪ್ಪಳ ಜಿಲ್ಲೆಯ ಆದಿಬಣಜಿಗ ಸಂಘ ಹಾಗೂ ರಾಜ್ಯದ ಸಮಸ್ತ ಆದಿಬಣಜಿಗ ಸಂಘ ಸಮಾಜ ಬಾಂದವರು ಸರಕಾರಕ್ಕೆ ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಬಣಜಿಗ ಸಂಘದ ರಾಜ್ಯಾಧ್ಯಕ್ಷ ಶಂಕರಗೌಡ ಪಾಟೀಲ ಸವದತ್ತಿ ರಾಜ್ಯ ಸಂಘದ ಉಪಾಧ್ಯಕ್ಷ ವೈಜ್ಯನಾಥ ದಿವಟರ, ಗದಗ ಜಿಲ್ಲಾ ಸಂಘದ ಅಧ್ಯಕ್ಷ ವಿ.ಎನ್. ನೀಲಪ್ಪ ಗೌಡರ, ಕಾರ್ಯದರ್ಶಿ ಆರ್.ಜಿ. ಚುಳಕಿ, ಎಸ್.ಎಸ್. ಶಾನಬೋಗರ, ಬಸಪ್ಪ ದಿವಟರ ಕುಕನೂರ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ ದಿವಟರ, ಬಸವರಾಜ ಶಂಕ್ರಪ್ಪ ದಿವಟರ, ಹನಮಂತಪ್ಪ ಶಿವಪ್ಪ ಮಲ್ಲಪ್ಪ ದಿವಟರ, ಕುಕನೂರ, ಬಸಪ್ಪ ಹಾಳಕೇರಿ, ಶ್ರೀಕಾಂತ ಕಳಕಪ್ಪ ಹರ್ಲಾಪೂರ. ದೊಡ್ಡಯಲ್ಲಪ್ಪ ಕಾಟರಳ್ಳಿ, ಪರಮಾನಂದ ಯಾಳಗಿ, ಯಲ್ಲಪ್ಪ, ಮುದಕಪ್ಪ, ಗವಿಸಿದ್ದಪ್ಪ, ರಮೇಶ ಉಮಚಗಿ, ಮಂಜುನಾಥ, ಆನಂದ ದಿವಟರ, ಮಾರುತಿ ದಿವಟರ ಕುಕನೂರ, ರೇಣುಕಾ ಪ್ರಸಾದ ಕಾಟರಳ್ಳಿ, ಕೆಂಚಪ್ಪ, ದೇವಪ್ಪ ದ್ಯಾಂಪೂರ, ಶಿವಾನಂದಪ್ಪ ಹಾದಿ, ಈರಪ್ಪ ಗುನ್ನಳ್ಳಿ, ರಮೇಶ ಗುನ್ನಳ್ಳಿ, ಕಳಕಪ್ಪ ಕತ್ತಿ, ಮಹೇಶ, ವಿನಾಯಕ ಯಾಳಗಿ, ಕುಕನೂರ ಸೇರಿದಂತೆ ಜಿಲ್ಲೆಯ ನೂರಾರು ಸಂಖ್ಯೆಯಲ್ಲಿ ಸಮಜ ಬಾಂಧವರು ಉಪಸ್ಥಿತರಿದ್ದರು.
0 comments:
Post a Comment