ಬಡಜನರಿಗೆ ಪ್ರತಿ ಕೆ.ಜಿ.ಗೆ ರೂ.೧ ದರದಲ್ಲಿ ೩೦ ಕೆ.ಜಿ. ಆಹಾರಧಾನ್ಯ ವಿತರಣೆ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ 'ಅನ್ನಭಾಗ್ಯ' ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ೨೨೫೫೪೩ ಕುಟುಂಬಗಳು ಯೋಜನೆಯ ಲಾಭ ಪಡೆಯಲಿವೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಅಶೋಕ್ ಕಲಘಟಗಿ ಅವರು ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ೧೫೭೭೩೯-ಬಿಪಿಎಲ್, ೩೪೨೬೦- ಅಂತ್ಯೋದಯ ಪಡಿತರ ಚೀಟಿದಾರರಿದ್ದು, ಪಟ್ಟಣ ಪ್ರದೇಶದಲ್ಲಿ ೨೯೫೫೩- ಬಿಪಿಎಲ್, ೩೯೯೧- ಅಂತ್ಯೋದಯ ಪಡಿತರ ಚೀಟಿದಾರರಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ೧೮೭೨೯೨- ಬಿಪಿಎಲ್, ೩೮೨೫೧- ಅಂತ್ಯೋದಯ ಪಡಿತರ ಚೀಟಿದಾರರಿದ್ದಾರೆ. ಗಂಗಾವತಿ ತಾಲೂಕಿನಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಸೇರಿದಂತೆ ಒಟ್ಟು ೭೭೨೭೫ ಫಲಾನುಭವಿಗಳಿದ್ದಾರೆ. ಅದೇ ರೀತಿ ಕೊಪ್ಪಳ- ೫೯೧೫೪, ಕುಷ್ಟಗಿ- ೪೩೯೫೦ ಮತ್ತು ಯಲಬುರ್ಗಾ ತಾಲೂಕಿನಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಸೇರಿದಂತೆ ಒಟ್ಟು ೪೫೧೬೪ ಫಲಾನುಭವಿಗಳಿದ್ದಾರೆ. ಅನ್ನಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಒಟ್ಟು ೬೪೯೧೮ ಕ್ವಿಂಟಾಲ್ ಅಕ್ಕಿ ಅಗತ್ಯವಾಗಲಿದೆ. ಗಂಗಾವತಿ ತಾಲೂಕಿಗೆ ೨೨೦೭೮ ಕ್ವಿಂ. ಅಕ್ಕಿ, ಕೊಪ್ಪಳ- ೧೭೦೬೦ ಕ್ವಿಂ., ಕುಷ್ಟಗಿ- ೧೨೭೫೭ ಕ್ವಿಂ. ಮತ್ತು ಯಲಬುರ್ಗಾ ತಾಲೂಕಿಗೆ ೧೩೦೨೦ ಕ್ವಿಂ. ಅಕ್ಕಿ ಅಗತ್ಯವಾಗಲಿದೆ. ಅನ್ನಭಾಗ್ಯ ಯೋಜನೆಯನ್ನು ಜುಲೈ ತಿಂಗಳಿನಿಂದ ಪ್ರಾರಂಭಿಸಲಾಗಿದ್ದು, ಅರ್ಹ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಹಾರ ಇಲಾಖೆ ಉಪನಿರ್ದೇಶಕ ಅಶೋಕ್ ಕಲಘಟಗಿ ತಿಳಿಸಿದ್ದಾರೆ.
0 comments:
Post a Comment