ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಆಕಸ್ಮಿಕವಾಗಿ ತೆರವಾಗಿರುವ ಅಥವಾ ಖಾಲಿ ಉಳಿದಿರುವ ಒಟ್ಟು ೧೪ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಕೊಪ್ಪಳ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಅಧಿಸೂಚನೆ ಹೊರಡಿಸಿದ್ದು, ಮೀಸಲಾತಿ ವಿವರವನ್ನು ಪ್ರಕಟಿಸಲಾಗಿದೆ.
ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯತಿಯ ಕ್ಷೇತ್ರದ ಹೆಸರು ಹಾಗೂ ಮೀಸಲಾತಿ ವಿವರ ಇಂತಿದೆ. ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾ.ಪಂ.ಯ ಹಂದ್ರಾಳ ಕ್ಷೇತ್ರ (ಹಿಂದುಳಿದ ವರ್ಗ-ಬ), ಹುಲಿಗಿ ಗ್ರಾಮ ಪಂಚಾಯತಿಯ ಮುನಿರಾಬಾದ್ ಕ್ಷೇತ್ರ (ಸಾಮಾನ್ಯ(ಮ)), ಇಂದರಗಿ ಗ್ರಾ.ಪಂ.ನ ವಣಬಳ್ಳಾರಿ ಕ್ಷೇತ್ರ (ಪರಿಶಿಷ್ಟ ಜಾತಿ), ಇರಕಲ್ಲಗಡ ಗ್ರಾ.ಪಂ. ಕ್ಷೇತ್ರ (ಹಿಂದುಳಿದವರ್ಗ-ಅ(ಮ)), ಭಾಗ್ಯನಗರ ಗ್ರಾ.ಪಂ. ಕ್ಷೇತ್ರ (ಹಿಂದುಳಿದ ವರ್ಗ-ಅ).
ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾ.ಪಂ.ನ ಸಣಾಪುರ ಕ್ಷೇತ್ರ (ಹಿಂದುಳಿದ ವರ್ಗ-ಬ), ಮುಷ್ಟೂರು ಗ್ರಾ.ಪಂ.ನ ಅಂಜೂರಿಕ್ಯಾಂಪ್ ಕ್ಷೇತ್ರ (ಪರಿಶಿಷ್ಟ ಜಾತಿ), ಮರ್ಲಾನಹಳ್ಳಿ ಗ್ರಾ.ಪಂ. ಕ್ಷೇತ್ರ (ಸಾಮಾನ್ಯ).
ಯಲಬುರ್ಗಾ ತಾಲೂಕಿನ ಬಳಿಗೇರಿ ಗ್ರಾ.ಪಂ. ಕ್ಷೇತ್ರ (ಸಾಮಾನ್ಯ), ಹಿರೇಅರಳಿಹಳ್ಳಿ ಗ್ರಾಮ ಪಂಚಾಯತಿಯ ಹೊಸೂರು ಕ್ಷೇತ್ರ (ಹಿಂದುಳಿದ ವರ್ಗ-ಅ). ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾ.ಪಂ.ನ ಹಿರೇತೆಮ್ಮಿನಾಳ (ಹಿಂದುಳಿದ ವರ್ಗ-ಅ), ಕಂದಕೂರು ಗ್ರಾ.ಪಂ.ನ ಗುಮಗೇರಿ ಕ್ಷೇತ್ರ (ಪರಿಶಿಷ್ಟ ಜಾತಿ (ಮ), ತಾವರಗೇರಾ ಗ್ರಾ.ಪಂ. ಕ್ಷೇತ್ರ (ಹಿಂದುಳಿದ ವರ್ಗ-ಅ(ಮ) ಮತ್ತು ಮಾಲಗಿತ್ತಿ ಗ್ರಾಮ ಪಂಚಾಯತಿಯ ಕಡಿವಾಲ ಕ್ಷೇತ್ರ (ಪರಿಶಿಷ್ಟ ಜಾತಿ (ಮ). ಹೀಗೆ ಒಟ್ಟು ೧೪ ಸದಸ್ಯ ಸ್ಥಾನಗಳಿಗಾಗಿ ಚುನಾವಣೆ ಅಧಿಸೂಚನೆ ಪ್ರಕಟಿಸಲಾಗಿದೆ. ವೇಳಾಪಟ್ಟಿಯನ್ವಯ ಜು. ೧೭ ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು, ಜು. ೨೪ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಜು. ೨೫ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜು. ೨೭ ಅಂತಿಮ ದಿನವಾಗಿದೆ. ಮತದಾನದ ಅವಶ್ಯವಿದ್ದಲ್ಲಿ ಆಗಸ್ಟ್ ೦೪ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೦೫ ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅಗತ್ಯವಿದ್ದಲ್ಲಿ ಆಗಸ್ಟ್ ೦೬ ರಂದು ನಡೆಸಲಾಗುವುದು. ಮತಗಳ ಎಣಿಕೆ ಆಗಸ್ಟ್ ೦೭ ರಂದು ಬೆಳಿಗ್ಗೆ ೮ ಗಂಟೆಯಿಂದ ಆಯಾ ತಾಲೂಕು ಕೇಂದ್ರದಲ್ಲಿ ನಡೆಯಲಿದ್ದು, ಆಗಸ್ಟ್ ೦೭ ರ ಒಳಗಾಗಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
0 comments:
Post a Comment