ವಿದ್ಯಾರ್ಥಿಗಳು ತಾವು ಪಡೆದುಕೊಂಡ ತರಬೇತಿಯನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ಉತ್ತಮ ಪ್ರಗತಿಯನ್ನು ಕಂಡುಕೊಳ್ಳಲು ಸಾಧ್ಯ. ಕ್ರೀಯಾತ್ಮಕ ಚಟುವಟಿಕೆಯಿಂದ ಎನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂದು ಇಟಗಿ ಪ್ರಗತಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಉಮೇಶ ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸಮೀಪದ ಮಂಡಲಗಿರಿಯ ಜಗದ್ಗುರು ತೋಂಟದಾರ್ಯ ಐ.ಟಿ.ಐ. ನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿತ್ತಿದ್ದರು.
ಮತ್ತೋರ್ವ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಕನೂರು ಐ.ಟಿ.ಐ. ಕಾಲೇಜಿನ ಪ್ರಾಚಾರ್ಯರಾದ ಚನ್ನಬಸಪ್ಪ ಬಳ್ಳಾರಿ ಮಾತನಾಡಿ ಕೇವಲ ಸರ್ಕಾರಿ ಉದ್ಯೋಗಿಕ್ಕಾಗಿ ಕಾಯದೇ ಜೀವನ ರೂಪಿಸುವ ಮಾರ್ಗವಿರುವುದು ಇಂತಹ ಕೈಗಾರಿಕಾ ತರಬೇತಿಗಳಿಂದ ಮಾತ್ರ, ಅವುಗಳಿಂದ ಯಾವುದಾದರೂ ಕಾರ್ಯ ನಿರ್ವಹಿಸಲು ಸಾಧ್ಯ ಎಂದರು.
ಸಂಸ್ಥೆಯ ಪ್ರಾಚಾರ್ಯರಾದ ಎಸ್.ಆರ್.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು, ವ್ಹಿ.ಎಚ್.ಮೇಟಿ ವಾರ್ಷಿಕ ವರದಿ ಓದಿದರು. ಬಿ.ಎಚ್.ಸೊಪ್ಪಿನಮಠ ಎಲ್ಲರನ್ನು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಸಭೆಯಲ್ಲಿ ವೀರನಗೌಡ ಹಿನ್ನಪ್ಪಗೌಡ್ರು, ಲಿಂಗರಾಜಗೌಡ ಹೊರಪೇಟೆ, ಸಿದ್ದಪ್ಪ ಬಿಷ್ಟ್ರಡ್ಡಿ, ಹಾಗೂ ಸಿಬ್ಬಂಧಿ ವರ್ಗದವರು ಉಪಸ್ಥತರಿದ್ದರು.
0 comments:
Post a Comment