ಪ್ರಸಕ್ತ ಸಾಲಿಗೆ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆಯಡಿಯಲ್ಲಿ ಸರ್ಕಾರದ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ ಬೆಂಗಳೂರು ಇಲಾಖೆಯಲ್ಲಿ ನೊಂದಾಯಿತ ವಿ.ಟಿ.ಪಿ. ಸಂಸ್ಥೆಗಳಿಂದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೌಶಲ್ಯಾಭಿವೃದ್ದಿ ತರಬೇತಿಗಳನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ವಿ.ಟಿ.ಪಿ. (ವೊಕೇಶನಲ್ ಟ್ರೈನಿಂಗ್ ಪ್ರವಾಯ್ಡರ್‍ಸ್) ಸಂಸ್ಥೆಗಳು ಜು.೨೪ ರೊಳಗಾಗಿ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಕೊಪ್ಪಳ ಇವರಿಗೆ ತಮ್ಮ ಸಂಸ್ಥೆಯಲ್ಲಿ ಲಭ್ಯವಿರುವ ತರಬೇತಿ ವಿವರವಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ತರಬೇತಿ ನೀಡುವ ವಿವರಗಳು ಇಂತಿದೆ. ಲಘು ವಾಹನ ತರಬೇತಿ, ಸೌಂದರ್ಯ ವರ್ಧಕ ತರಬೇತಿ, ಬೇಸಿಕ್ ಸ್ಕ್ರೀನ್ ಪ್ರಿಂಟಿಂಗ್ ತರಬೇತಿ, ಬೇಕರಿ ಮತ್ತು ಫುಡ್ ಪ್ರೋಸೆಸ್ ತರಬೇತಿ, ಮೇಣಭತ್ತಿ, ಸಾಬೂನು , ಫಿನಾಯಿಲ್ ತಯಾರಿಕಾ ತರಬೇತಿ, ಹೇಲ್ತ್ ಕೇರ್ ಮಲ್ಟಿ ಫರಫಸ್ ವರ್ಕರ್ ತರಬೇತಿ, ಬೆಡ್‌ಸೈಟ್ ಅಸಿಸ್ಟೆಂಟ್ ತರಬೇತಿ, ಕುಕ್ಕಿಂಗ್ ಅಸಿಸ್ಟೆಂಟ್ ತರಬೇತಿಗಳು. ಹೆಚ್ಚಿನ ಮಾಹಿತಿಗಾಗಿ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಕೊಪ್ಪಳ ದೂರವಾಣಿ ಸಂಖ್ಯೆ: ೦೮೫೩೯-೨೨೧೮೯೫ ಸಂಪರ್ಕಿಸಬಹುದಾಗಿದೆ ಎಂದು ಪ್ರಭಾರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
0 comments:
Post a Comment