ಗಂಗಾವತಿ ಸಕ್ಕರೆ ಕಾರ್ಖಾನೆಯನ್ನು ಪುನರ್ ನಿರ್ಮಿಸುವುದಾಗಿ ಆಸ್ಟ್ರೇಲಿಯಾ ಮೂಲದ ಇಎಂಎನ್ ಅಸೋಸಿಯೇಟ್ಸ್ ಕಂಪನಿಯ ಸಂಪರ್ಕಾಧಿಕಾರಿ ಸೋಮನಾಥ ರೈತರೊಂದಿಗೆ ನಡೆಸಿದ ಅನೇಕ ಸಭೆಗಳಲ್ಲಿ ಭರವಸೆ ಕೊಟ್ಟು ಮಾಯವಾಗಿರುವುದು ಅನುಮಾನಾಸ್ಪದವಾಗಿದೆ. ಸರ್ಕಾರ ಕೂಡಲೇ ಈ ಕಂಪನಿಯ ಬಗ್ಗೆ ತನಿಖೆ ನಡೆಸ ಬೇಕೆಂದು ಸಿಪಿಐಎಂಎಲ್‌ನ ಹೈದ್ರಾಬಾದ್ ಕರ್ನಾಟಕದ ಪ್ರಾಂತ ಕಾರ್ಯದರ್ಶಿ ಭಾರದ್ವಾಜ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಕಳೆದ ೨೦ ವರ್ಷಗಳಿಂದ ಅನೇಕ ಕಂಪನಿಗಳು ಮತ್ತು ಸರ್ಕಾರಗಳು ಈ ಭಾಗದ ರೈತರು ಮತ್ತು ಕಾರ್ಮಿಕರೊಂದಿಗೆ ಚಲ್ಲಾಟವಾಡುತ್ತಿದ್ದಾರೆ. ಗಂಗಾವತಿ ಸಕ್ಕರೆ ಕಾರ್ಖಾನೆ ಸಮರ್ಪಣೆ ಮಾಡಿ ಕಾರ್ಖಾನೆಯನ್ನು ನ್ಯೂಜಿವೀಡು ಸೀಡ್ಸ್ ಕಂಪನಿಗೆ ೧೮ಕೋಟಿ ೨೫ಲಕ್ಷಕ್ಕೆ ಮಾರಿದರು. ಇದನ್ನು ವಿರೋಧಿಸಿ ರೈತರು, ಕಾರ್ಮಿಕರು ಉಗ್ರವಾದ ಹೋರಾಟ ಮಾಡಿ ಮಾರಾಟದ ಒಪ್ಪಂದವನ್ನು ರದ್ದು ಮಾಡಿಸಿದ್ದಾರೆ. ೧೫೦ ಕೋಟಿ ಬೆಲೆ ಬಾಳುವ ಕಾರ್ಖಾನೆಯನ್ನು ಬೆಂಗಳೂರು ಮೂಲದ ರಾಮಯ್ಯ ರೆಡ್ಡಿಯವರು ೪೩ಕೋಟಿ ೭೦ಲಕ್ಷಕ್ಕೆ ಹರಾಜಿನಲ್ಲಿ ಖರೀದಿಸಿದರು.
ಇಎಂಎನ್ ಅಸೋಸಿಯೇಟ್ಸ್ ಕಂಪನಿಯ ಸಂಪರ್ಕಾಧಿಕಾರಿಯಾದ ಸೋಮನಾಥರವರು ಸಕ್ಕರೆ ಕಾರ್ಖಾನೆಯನ್ನು ರಾಮಯ್ಯ ರೆಡ್ಡಿಯಿಂದ ಖರೀದಿಸಿರುವುದಾಗಿ ಹೇಳಿ, ರೈತರೊಂದಿಗೆ ಅನೇಕ ಸಭೆಗಳನ್ನು ನಡೆಸಿದರು. ಮುಂದುವರೆದು ಈ ಕಂಪನಿ ಸರ್ಕಾರಿ ಇಂಜನೀಯರಿಂಗ್ ಕಾಲೇಜ್ ಬರದಂತೆ ಲಾಬಿ ನೆಡೆಸಿದ ಇವರು ಶ್ರೀ ರಾಮುಲು ಕಾಲೇಜ್‌ಗೆ ಸರ್ಕಾರ ಬಾಡಿಗೆ ರೂಪದಲ್ಲಿ ಕೊಟ್ಟಿರುವ ೩೦ಎಕರೆ ಭೂಮಿಯಲ್ಲಿ ೧೦ಎಕರೆ ಭೂಮಿಯನ್ನು ಪಡೆದು, ಅದೇ ಜಾಗದಲ್ಲಿ ಇಎಂಎನ್ ಕಾರ್ಪೋರೇಷನ್ ಸಂಸ್ಥೆಯಿಂದ ಕಾರ್ಪೋರೇಟ್ ಇಂಜನೀಯರಿಂಗ್ ಕಾಲೇಜ್ ಸ್ಥಾಪಿಸುವುದಾಗಿ ಘೋಷಿಸಿದರು.
ಆಸ್ಟ್ರೇಲಿಯಾ ಮೂಲದ ಇಎಂಎನ್ ಅಸೋಸಿಯೇಟ್ಸ್ ಕಂಪನಿಯ ಸುಳ್ಳು ಭರವಸೆಗಳಿಗೆ ಕೆಲವು ರೈತರು ಮರುಳಾಗಿ ಶೇರುಗಳನ್ನು ಖರೀದಿಸಿರುವುದಾಗಿ ತಿಳಿದುಬಂದಿದೆ. ಸರ್ಕಾರ ಕೂಡಲೇ ಈ ಕಂಪನಿಯ ಬಗ್ಗೆ ತನಿಖೆ ನಡೆಸಿ ವಂಚನೆಗೊಳಗಾದ ರೈತರಿಗೆ ನ್ಯಾಯ ಕೊಡಿಸಬೇಕೆಂದು ಎಂದು ಸಿಪಿಐಎಂಎಲ್ ಪಕ್ಷ ಒತ್ತಾಯಿಸಿದೆ
0 comments:
Post a Comment