PLEASE LOGIN TO KANNADANET.COM FOR REGULAR NEWS-UPDATES

  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಚುನಾವಣೆಗೆ ಕೊಪ್ಪಳದಲ್ಲಿ ಸೋಮವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ೨೦೪೩ ಮತದಾರರ ಪೈಕಿ ೧೮೭೭ ಮತದಾರರು ಮತ ಚಲಾವಣೆ ಮಾಡಿದ್ದು, ಶೇ. ೯೧. ೮೭ ರಷ್ಟು ಮತದಾನ ನಡೆದಿದೆ.
  ಕೊಪ್ಪಳ ನಗರದ ಶಾಸಕರ ಮಾದರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಮುಂತಾದ ಇಲಾಖೆಗಳು ಸೇರಿದಂತೆ ಒಟ್ಟು ೨೦೪೩ ನೌಕರ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು.  ಈ ಪೈಕಿ ೧೮೭೭ ಜನ ತಮ್ಮ ಹಕ್ಕು ಚಲಾಯಿಸಿದ್ದು, ಶೇ. ೯೧. ೮೭ ರಷ್ಟು ಮತದಾನವಾದಂತಾಗಿದೆ.  ಪ್ರಾಥಮಿಕ ಶಾಲೆ ವಿಭಾಗದಲ್ಲಿ ೧೩೮೦ ಮತದಾರರಿದ್ದು, ೫ ಸ್ಥಾನಗಳಿಗೆ ೧೪ ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಲ್ಲಿ ೧೨೫೮ ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ.  ಪ್ರೌಢಶಾಲೆ ವಿಭಾಗದಲ್ಲಿ ೩೪೦ ಮತದಾರರಿದ್ದು, ೦೨ ಸ್ಥಾನಗಳಿಗೆ ೦೫ ಜನ ಕಣದಲ್ಲಿದ್ದರು.  ಇದರಲ್ಲಿ ೩೧೬ ಜನ ಮತ ಚಲಾವಣೆ ಮಾಡಿದ್ದಾರೆ.  ಉಳಿದಂತೆ ಸಹಕಾರ ಇಲಾಖೆಯ ೨೧ ಮತದಾರರ ಪೈಕಿ ೨೦.  ನೀರಾವರಿ ಇಲಾಖೆಯ ೩೭ ಮತದಾರರ ಪೈಕಿ ೩೬.  ಜಿಲ್ಲಾ ಪಂಚಾಯತಿಯ ೩೩ ಮತದಾರರ ಪೈಕಿ ೩೨, ಜಿಲ್ಲಾ ಆಸ್ಪತ್ರೆಯ ೪೨ ಮತದಾರರ ಪೈಕಿ ೩೭.  ಪೊಲೀಸ್ ಆಡಳಿತ ಇಲಾಖೆಯ ೩೩ ಮತದಾರರ ಪೈಕಿ ೩೩.  ಯುವಜನ ಸೇವಾ ಕ್ರೀಡಾ ಇಲಾಖೆ ಮತ್ತು ಗ್ರಂಥಾಲಯ ಇಲಾಖೆ ಸೇರಿ ೧೫ ಮತದಾರರ ಪೈಕಿ ೧೫.  ಪದವಿಪೂರ್ವ ಕಾಲೇಜಿನ ೬೯ ಮತದಾರರ ಪೈಕಿ ೬೬.  ಪದವಿ ಕಾಲೇಜಿನ ೩೩ ಮತದಾರರ ಪೈಕಿ ೩೦ ಹಾಗೂ ರಾಜ್ಯ ಲೆಕ್ಕಪತ್ರ ಇಲಾಖೆಯ ೪೦ ಮತದಾರರ ಪೈಕಿ ೩೪ ಜನ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.  ಮತ ಎಣಿಕೆ ಕಾರ್ಯ ಸೋಮವಾರ ತಡರಾತ್ರಿಯವರೆಗೂ ನಡೆಯಲಿದ್ದು, ನಂತರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ಎನ್.ವೈ. ಕಾಡಗಿ   ತಿಳಿಸಿದ್ದಾರೆ.

Advertisement

0 comments:

Post a Comment

 
Top