ದಲಿತ ಆದಿವಾಸಿಗಳ ಭೂಮಿಯ ಹಕ್ಕಿಗಾಗಿ ಆಂದೋಲನ -ಕರ್ನಾಟಕ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ -ಕರ್ನಾಟಕ ಹಾಗೂ ಪ್ರಗತಿಪರ ಸಂಘಟನೆಗಳು ಕೊಪ್ಪಳ ದಿ ೨೩-೭-೨೦೧೩ ರಂದು ಬೆಳಿಗ್ಗೆ ೧೨ ಗಂಟೆಗೆ ನಗರದ ಎಸ್‌ಎಫ್‌ಎಸ್ ಶಾಲೆ ಹತ್ತಿರದಿಂದ ಪ್ರತಿಭಟನೆ ರ್‍ಯಾಲಿ ನಡೆಸಿ ಜಿಲ್ಲಾಡಳಿತ ಭವನಕ್ಕೆ ತಲುಪಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಶಂಕ್ರಪ್ಪ ಅವರಿಗೆ ಮನವಿ ಪತ್ರ ಅರ್ಪಿಸಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಂಪಸದುರ್ಗಾ ಗ್ರಾಮದ ಸರ್ವೆ ನಂ. : ೨೧ರಲ್ಲಿ ವಲಯ ಅರಣ್ಯ ಅಧಿಕಾರಿಗಳು ಹನುಮಂತಯ್ಯ ಮತ್ತು ತಿಪ್ಪಣ್ಣ ಇವರುಗಳು ಸಂಸತ್ ಕಾನೂನು ಉಲ್ಲಂಘನೆ ಮಾಡಿರುವದರ ಜೊತೆಗೆ ಸಮುದಾಯದ ಹಕ್ಕು ಉಲ್ಲಂಘನೆ ಮತ್ತು ಜಾತಿ ನಿಂಧನೆಯಲ್ಲಿ ತೊಡಗಿದ್ದಾರೆ ಎಂಬುವದರ ಬಗ್ಗೆ ವಿಭಾಗಿಯ ಮಟ್ಟದ ಜಿಲ್ಲಾ ಸದಸ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿ ಜಾತಿ ನಿಂದನೆಯ ಕೇಸು ದಾಖಲಿಸಬೇಕೆಂದು ಕೇಳಿದರೂ ಸಹ ಪ್ರಯೋಜನವಾಗಿಲ್ಲ. ಈ ಬಾರಿ ಸಾಂಕೇತಿಕವಾಗಿ ರಾಜ್ಯ ಮಟ್ಟದ ಕರೆ ಮೇರಿಗೆ ರ್‍ಯಾಲಿ ನಡೆಸಿ ಮನವಿ ಪತ್ರ ಅರ್ಪಿಸುತ್ತಿದ್ದು. ಆದಷ್ಟು ಬೇಗ ಬೇಡಿಕೆಗಳು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟಗಳು ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.
ಪ್ರತಿಭಟನಾ ರ್‍ಯಾಲಿಯಲ್ಲಿ ದಲಿತ ಆದಿವಾಸಿಗಳ ಭೂಮಿ ಹಕ್ಕಿಗಾಗಿ ಆಂದೋಲನ ಕರ್ನಾಟಕ ಜಿಲ್ಲಾಧ್ಯಕ್ಷ ಹೇಮರಾಜ ವೀರಾಪೂರ, ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾ ಸಂಘಟನಾ ಸಂಚಾಲಕ ಮೈಲಪ್ಪ ಎಂ. ಬಿಸರಳ್ಳಿ, ಜಿಲ್ಲಾ ಸಂಚಾಲಕ ಹನುಮಂತಪ್ಪ ಮೇಗಳಮನಿ, ತಾಲೂಕಾ ಸಂಚಾಲಕ ಮಲ್ಲಿಕಾರ್ಜುನ ಪೂಜಾರ, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಎಸ್.ಎ. ಗಫಾರ್, ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘದ ಅಧ್ಯಕ್ಷ ರಜಾಕ್ ಪೇಂಟರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಮಂಡ್ಯ, ಕರ್ನಾಟಕ ವಾದಿವಾಸಿ ಜನಸೇವಾ ಸಂಘದ ರಾಜ್ಯ ಉಪಾಧ್ಯಕ್ಷೆ ಸೌಭಾಗ್ಯ ಹೆಚ್., ಜಿಲ್ಲಾಧ್ಯಕ್ಷ ನಿರುಪಾದೆಪ್ಪ, ನಾಗರಾಜ ನಿಟ್ಟಾಲಿ, ಮೈರಲಾಪ್ಪ ಕೆ.ಎಸ್., ಪೀರಸಾಬ ಪಿಂಜಾರ ಹಲಗೇರಿ ಮತ್ತಿತರರ ಭಾಗವಹಿಸಿದ್ದರು.
0 comments:
Post a Comment