PLEASE LOGIN TO KANNADANET.COM FOR REGULAR NEWS-UPDATES

  ದಿ ೧೨-೦೬-೨೦೧೩ ರಂದು ಬೆಳಗ್ಗೆ ೧೦:೦೦ ಗಂಟೆಗೆ ಗ್ರಾಮ ಪಂಚಾಯತ ಕಾಯಾಲಯ ಭಾಗ್ಯನಗರ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾ, ಶಾಲೆ ಭಾಗ್ಯನಗರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಪ್ರಯುಕ್ತ ಜಾಗೃತಾ ಜಾಥಾ ವನ್ನು ಹೊನ್ನೂರಸಾಬ ಭೈರಾಪೂರ ಅಧ್ಯಕ್ಷರು ಗ್ರಾ, ಪಂ ಭಾಗ್ಯನಗರ ಇವರ ನೇತೃತ್ವದಲ್ಲಿ ಆಚರಿಸಲಾಯಿತು. ಮೊದಲು ಪ್ರಾರ್ತನೆಯೊಂದಿಗೆ ಪ್ರಾರಂಭಿಸಲಾಯಿತು. ನಂತರ ಪ್ರಾಸ್ತಾವಿಕವಾಗಿ ಬಾಲ ಕಾರ್ಮಿಕ ಪದ್ದತಿ ಒಂದು ಅನಿಷ್ಠ ಪದ್ದತಿ ಅದನ್ನು ತೊಡದು ಹಾಕಲು ಎಲ್ಲಾ ಪೊಷಕರು, ಜನ ಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಪಾತ್ರ ಬಹಳ ಮುಖ್ಯವಾಗಿದೆ. ಮಕ್ಕಳ ಹಕ್ಕುಗಳನ್ನು ಸರಿಯಾಗಿ ಅನುಭವಿಸುವಂತೆ ಮಾಡಬೇ
ಕು. ಅದಕ್ಕೆ ಸಮುದಾಯದ ಪಾತ್ರ ಮುಖ್ಯ ಎಂದು ಯುನಿಷೆಫ್ ಸಮುದಾಯ ಸಂಘಟಕರಾದ ಮಾರುತಿಕುಮಾರ ಅಳವಂಡಿ ತಿಳಿಸಿದರು ನಂತರ ಜಿ.ಎಂ.ಹೆಚ್.ಪಿ.ಎಸ್. ಭಾಗ್ಯನಗರ ಶಾಲೆಯ ವಿದ್ಯಾರ್ಥಿಗಳ ಮುಖಾಂತರ ಊರಿನ ಪ್ರಮುಖ ಬೀದಿಗಳಲ್ಲಿ ಬಾಲಕಾರ್ಮಿಕರ ಪದ್ದತಿ ಕುರಿತಂತೆ ಘೋಷಣೆಗಳಾದ. ಕೂಲಿಯಿಂದ ಶಾಲೆಗೆ,  ವಿಶ್ವಬಾಲಕಾರ್ಮಿಕರ ವಿರೋದಿ ದಿನಾಚರಣೆಗೆ ಜಯವಾಗಲಿ, ಎಂದು ಘೋಷಣೆಗಳನ್ನು ಕೂಗುತ್ತಾ ಕರಪತ್ರಗಳನ್ನು ಹಂಚುತ್ತಾ ಸಾರ್ವಜನಿಕರಲ್ಲಿ, ಮಾಲಿಕರಲ್ಲಿ, ಯುವಕರಲ್ಲಿ ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾ, ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು,  ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮಹೇಶ ಸಜ್ಜನ,  ಶಾಲಾ ಮುಖ್ಯೋಪಾದ್ಯಾಯರಾದ ಶ್ರೀಮತಿ ಕಸ್ತೂರಿಬಾಯಿ, ಸಹ ಶಿಕ್ಷಕರು ಸಂಘ ಸಂಸ್ಥೆ ಪ್ರತಿನಿಧಿಗಳು ಮುಂತಾದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Advertisement

0 comments:

Post a Comment

 
Top